ಶಹಾಬಾದ:ನಗರಕ್ಕೆ ಶುಕ್ರವಾರ ಸೇಡಂ ಸಹಾಯಕ ಆಯುಕ್ತರಾದ ರಮೇಶ ಕೋಲಾರ ಅವರು ನಗರದ ಕೋವಿಡ್ ಮಾಹಿತಿ ಕೇಂದ್ರಗಳಿಗೆ ಬೇಟಿ ನೀಡಿ ಮಾಹಿತಿ ಪರಿಶೀಲಿಸಿದರು.
ನಗರದ ಐದು ಮಾಹಿತಿ ಕೇಂದ್ರಗಳಿಗೆ ಬೇಟಿ ನೀಡಿದಲ್ಲದೇ, ಬಸವೇಶ್ವರ ವೃತ್ತ, ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬೆಂಡಿ ಬಜಾರ್, ಮಜ್ಜಿದ್ ವೃತ್ತ, ಶ್ರೀರಾಮ ವೃತ್ತ ಸೇರಿದಂತೆ ವಿವಿಧ ಪ್ರದೇಶಕ್ಕೆ ಬೇಟಿ ನೀಡಿ ವೀಕ್ಷಿಸಿದರು.
ಕೋವಿಡ್ ರೆಮಿಡಿಸಿವಿಯರ್ ಇಂಜೆಕ್ಷನ್ ಆಕ್ರಮ ಮಾರಾಟ: ಮೂವರ ಬಂಧನ
ನಗರದಲ್ಲಿ ಸಾರ್ವಜನಿಕರು ಎಲ್ಲಾ ಅಂಗಡಿಗಳು ಬಂದ್ ಮಾಡಿರುವುದು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ರೀತಿ ಸಾರ್ವಜನಿಕರ ಸಹಕಾರದಿಂದ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಿ.ಕಾನೂನು ನಿಯಮಾವಳಿಯನ್ನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೆಟು ಹಾಕದಿರಿ ಎಂದರು.ನಂತರ ಮಾಹಿತಿ ಕೇಂದ್ರಗಳಲ್ಲಿನ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಂದ ಮಾಹಿತಿ ಪಡೆದು.
ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಬೇಕು ಎಂದರು. ಅಲ್ಲದೇ ನಗರದ ಮುಖ್ಯ ಮಾರ್ಕೆಟನಲ್ಲಿ ಸಂಚರಿಸಿ ವೀಕ್ಷಿಸಿದರು.ರಸ್ತೆ ಇಕ್ಕೆಲಗಳಲ್ಲಿ ಮಾತ್ರ ಬಂಡಿಯನ್ನು ನಿಲ್ಲಿಸಿ ಹಣ್ಣುಗಳನ್ನು ವ್ಯಾಪಾರ ಮಾಡಬೇಕು.ಅದನ್ನು ಬಿಟ್ಟು ರಸ್ತೆ ಮೇಲೆ ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯ ಸದಸ್ಯರು ಸಹಕಾರ ನೀಡಿ: ವರ್ಮಾ
ಅಲ್ಲದೇ ವಿಕೆಂಡ್ ಕಫ್ರ್ಯೂ ಎರಡು ದಿನ ಯಾರೂ ಹೊರಗಡೆ ಸುಳಿಯಬಾರದು.ಹಾಲು, ಮೆಡಿಕಲ್ ಮಾತ್ರ ಅವಕಾಶ ನೀಡಿ. ತರಕಾರಿ, ಹಣ್ಣು ಸೇರಿದಂತೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲು ಕಠಿಣ ಕ್ರಮ ಕೈಗೊಳ್ಳಿ.ಅಲ್ಲದೇ ಅನಾವಶ್ಯಕವಾಗಿ ರಸ್ತೆಗೆ ಇಳಿಯುವವರ ವಿರುದ್ಧ ಕ್ರಮ ಕೈಗೊಳ್ಳಿ. ಎಂದು ತಹಸೀಲ್ದಾರ ಸುರೇಶ ವರ್ಮಾ ಹಾಗೂ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರಿಗೆ ನಿರ್ದೇಶನ ನೀಡಿದರು.
ಈಗಾಗಲೇ ನಗರದಲ್ಲಿ ತರಕಾರಿ, ಹಣ್ಣು, ಹಾಲು, ಮೆಡಿಕಲ್ ಶಾಪಗಳಿಗೆ ಮಾತ್ರ ಅವಕಾಶ ನೀಡಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗಿದೆ.ಶನಿವಾರ ಮತ್ತು ರವಿವಾರ ಹಾಲು, ಮೆಡಿಕಲ್ಗಳನ್ನು ಬಿಟ್ಟು ಎಲ್ಲಾ ಅಂಗಡಿಗಳನ್ನು ಮುಚ್ಚಲು ಈಗಾಗಲೇ ತಿಳಿಸಲಾಗಿದೆ. ಅಲ್ಲದೇ ನಗರದ ವ್ಯಾಪಾರಸ್ಥರು ಸಹಕಾರ ನೀಡಿದ್ದಾರೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದರು.
ರಸ್ತೆಯ ಮೇಲೆ ವ್ಯಾಪಾರ ಮಾಡಿದರೆ ಕಠಿಣ ಕ್ರಮ: ತಹಸೀಲ್ದಾರ ವರ್ಮಾ
ಈ ಸಂದರ್ಭದಲ್ಲಿ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಎಸ್‍ಐ ತಿರುಮಲೇಶ, ಎಎಸ್‍ಐ ಸಾತಲಿಂಗಪ್ಪ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಕಂದಾಯ ನಿರೀಕ್ಷಕ ವೀರಭದ್ರಪ್ಪ ಸೇರಿದಂತೆ ಅನೇಕರು ಇದ್ದರು.