ಕೋಲಾರ ತಾಲೂಕಿನ ವೇಮಗಲ್ ಸಂಪೂರ್ಣ ಲಾಕ್

0
19

ವೇಮಗಲ್ : ಕೊರೊನಾ ವೈರಸ್ 2 ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಾರದಲ್ಲಿ ಶನಿವಾರ ಮತ್ತು ಭಾನುವಾರ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ವೇಮಗಲ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.

ಸರ್ಕಾರದ ನಿಯಮಗಳಂತೆ ಅಗತ್ಯ ವಸ್ತುಗಳು ಅಂಗಡಿಗಳು ಬೆಳಿಗ್ಗೆ 6 ರಿಂದ 10 ಗಂಟೆಗೆ ತೆರೆಯಬಹುದು ಎಂಬ ಅನುಮತಿಯನ್ನು ಪರಿಗಣಿಸಿ 10 ಗಂಟೆಯಾದ ನಂತರ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದರು. ಗ್ರಾಮದ ದೇವಾಲಯಗಳಲ್ಲಿ ಕೊರೊನಾ ಅದಷ್ಟು ಬೇಗನೆ ಮುಕ್ತವಾಗಿ ಸಾರ್ವಜನಿಕರು ಎಂದಿನಂತೆ ಸಾಮಾನ್ಯ ಜೀವನಕ್ಕೆ ಕಾಲಿಡಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು‌.

Contact Your\'s Advertisement; 9902492681

ಖಾಸಗಿ ಆಸ್ಪತ್ರೆಯಲ್ಲಿ 50% ಬೆಡ್ ಮಿಸಲಿಡಿ: ಬಾಲರಾಜ್ ಗುತ್ತೆದಾರ 

ಪೊಲೀಸರು ನರಸಾಪುರ ಮುಖ್ಯ ರಸ್ತೆ ಮತ್ತು ಚಿಕ್ಕಬಳ್ಳಾಪುರಕ್ಕೆ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಿ ಆಸ್ಪತ್ರೆಗೆ, ಮದುವೆಗೆ ಮತ್ತು ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನ ಸವಾರರ ಬಳಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಬಿಟ್ಟರು. ಸುಮ್ಮ ಸುಮ್ಮನೆ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿದ್ದವರಿಗೆ ದಂಡದ ರುಚಿ ತೋರಿಸಿದರು.

ಮಧ್ಯಾಹ್ನದ ವೇಳೆಗೆ ವಾಹನಗಳು ಸಂಚರಿಸುವುದು ಸಂಪೂರ್ಣ ಕಡಿಮೆಯಾದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here