ತಾಲೂಕಾಡಳಿತದ ಕ್ರಮದಿಂದ ಶಹಾಬಾದ ನಗರ ಸಂಪೂರ್ಣ ಮೌನ

0
118

ಶಹಾಬಾದ:ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದಾಧ್ಯಾದಂತ ಲಾಕ್‌ಡೌನ್ ಹೇರಲ್ಪಟ್ಟಿದಲ್ಲದೇ, ತಾಲೂಕಾಡಳಿತದ ಕಠಿಣ ಕ್ರಮದಿಂದಾಗಿ ಬುಧವಾರ ಜನಸಂಚಾರ ವಿರಳವಾಗಿದಲ್ಲದೇ, ಶಹಾಬಾದ ನಗರದಲ್ಲಿ ಸಂಪೂರ್ಣ ಮೌನ ಆವರಿಸಿತ್ತು.

ಸರ್ಕಾರದ ಆದೇಶದ ಮೇರೆಗೆ ಕೊರಾನಾ ವೈರಸ್ ಹರಡದಂತೆ ಮುಂಜಾಗ್ರತ ಕೈಗೊಂಡ ಪರಿಣಾಮವಾಗಿ ಜನರು ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಜನದಟ್ಟಣೆಯಿಲ್ಲದೇ ಬಿಕೋ ಎನ್ನುತ್ತಿತ್ತು.ಯಾವಾಗಲೂ ರೇಲ್ವೆ ನಿಲ್ದಾಣದ ಸಮೀಪ ನೂರಾರು ಜನರ ಜನದಟ್ಟಣೆ ಕಾಣುತ್ತಿತ್ತು.ಆದರೆ ಕೊರೊನಾ ಎಫೆಕ್ಟ್‌ಗೆ ತಾಲೂಕಾಡಳಿತ ನೀಡಿದ ಆದೇಶದಂತೆ ಬೆಳಿಗ್ಗೆ ೧೦ ಗಂಟೆಯ ನಂತರ ನಗರದ ಸುತ್ತಮುತ್ತಲಿನ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಯಿತು.
ಕೊರೊನಾ ವೈರಸ್ ಸೊಂಕು ಹರಡದಂತೆ ಮದುವೆ, ಸಮಾರಂಭ ಸರಳವಾಗಿ ಐವತ್ತಕ್ಕಿಂತ ಹೆಚ್ಚಿನ ಜನರಿಲ್ಲದೇ ಮಾಡಬೇಕು. ಯಾವುದೇ ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದ್ದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

Contact Your\'s Advertisement; 9902492681

ನಗರದ ಮುಖ್ಯ ಬಜಾರನಲ್ಲಿ ಬೆಳಿಗ್ಗೆ ೧೦ ಗಂಟೆಯವರೆಗೆ ಕಿರಾಣಾ, ತರಕಾರಿ, ಬಂಡಿಯ ಮೇಲೆ ಹಣ್ಣು ಮಾರಾಟ ವ್ಯಾಪಾರ ನಡೆಸಿದರು. ನಂತರ ಮೆಡಿಕಲ್ ಹಾಗೂ ಹಾಲು ಬಿಟ್ಟರೇ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.ಕೆಎಸ್‌ಆರ್‌ಟಿಸಿ ಬಸ್ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಬ್ಯಾಂಕ್, ಅಂಚೆ ಕಛೇರಿ, ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಯ ಸಿಬ್ಬಂದಿ ವರ್ಗವದರು ಬೇರೆ ನಗರಕ್ಕೆ ಹೋಗಬೇಕಾದರೆ ಎಲ್ಲಿಲ್ಲದ ಸಂಕಷ್ಟ ಎದುರಾಯಿತು.ಅಲ್ಲದೇ ಮಹಿಳೆಯರಿಗೆ ಹೋಗದಾಗದೇ ರಜೆ ಹಾಕುವಂತ ಪರಿಸ್ಥಿತಿ ಬಂದಿತ್ತು.

ಬಸ್ ನಿಲ್ದಾಣದಲ್ಲಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ಸ್ಥಳ ಸಂಪೂರ್ಣ ಜನರಿಲ್ಲದೇ ಸ್ಮಶಾನ ಸ್ಥಿತಿ ಆವರಿಸಿದಂತಾಗಿತ್ತು. ನಗರದ ಜನರು ಮನೆಯಲ್ಲಿಯೇ ಉಳಿದು ಗೃಹ ಬಂಧನಕ್ಕೆ ಜಾರಿಕೊಂಡ ಸನ್ನಿವೇಶ ಮಾತ್ರ ಸರ್ವೆ ಸಾಮಾನ್ಯವಾಗಿತ್ತು. ಆದರೆ ಸಂಜೆಯಾದಂತೆ ಒಬ್ಬೊಬ್ಬರು ಹೊರಗಡೆ ಬರುವುದು ಕಂಡು ಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here