ನುಡಿ ನಮನ ಕಾರ್ಯಕ್ರಮ

0
50

ಕಲಬುರಗಿ: ಮನುಷ್ಯನ ನಡವಳಿಕೆ ಆತನ ವ್ಯಕ್ತಿತ್ವದ ಕನ್ನಡಿ ಸಾರ್ವಜನಿಕರ ವರ್ತನೆಯಿಂದ ಅವರ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಅಂತಹ ಉತ್ತಮ ವ್ಯಕ್ತಿತ್ವ ಗುಣಗಳನ್ನು ಹೊಂದಿ ಹಲವಾರು ಜನರ  ಮನದಲ್ಲಿ ಶಿವರಾಯಗೌಡ ಪಾಟೀಲರು ಸದ್ದಿಲ್ಲದೆ ಸಮಾಜ ಸೇವೆಗೈದ ಸೇವಕರಾದರು ಎಂದು  ಕೆಎಚ್ ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸಂಜೀವ್ ಕುಮಾರ ಶೆಟ್ಟಿ ಹೇಳಿದರು.

ನಿನ್ನೆ ನಗರದ ಸಂತೋಷ ಕಾಲೊನಿಯ  ಕೆಎಚ್ ಬಿ ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದವತಿಯಿ೦ದ ಆಯೋಜಿಸಲಾದ  ಇತ್ತೀಚಿಗೆ ನಮ್ಮನ್ನಗಲಿದ ಸಮಾಜ ಸೇವಕರು ಹಾಗೂ ಸಂಘದ ಹಿರಿಯ ಮಾರ್ಗದರ್ಶಕರಾದ ಶಿವರಾಯಗೌಡ ಪಾಟೀಲ ಮುದಡಗಿ ಅವರ ನುಡಿನಮನ ಕಾರ್ಯಕ್ರಮದಲ್ಲಿ  ಮಾತನಾಡುತ್ತಾ ಸೂಜಿಯು ತುಂಡಾದ ಬಟ್ಟೆಯನ್ನು ಜೋಡಿಸಿ ಹೊಲಿಯುವ ಹಾಗೆ ಸರ್ವ ಜನಾಂಗವನ್ನು ಒ೦ದು ಗೂಡಿಸಿ   ಮಾನವೀಯ ಮೌಲ್ಯಗಳನ್ನು ಬಿತ್ತಿ ಸಮಸಮಾಜ ನಿರ್ಮಿಸಲು ಶ್ರೀಯುತರು  ಪ್ರಯತ್ನಿಸಿದರು. ಯಾವುದೇ ಅಧಿಕಾರ ಬಯಸದೆ ಎಲೆಮರೆ ಕಾಯಿಯಂತೆ ಸಮಾಜ ಸೇವೆ   ಮಾಡಿ ಹಲವಾರು ಜನರ ಮನದಲ್ಲಿ ದಿವ್ಯ ಮೂರ್ತಿಯಾಗಿ ಅಮರರಾಗಿದ್ದಾರೆ.

Contact Your\'s Advertisement; 9902492681

ಅಂತಹ   ಮಹಾನ ವ್ಯಕ್ತಿಯನ್ನು ಕಳೆದುಕೊಂಡ ನಮ್ಮ ಬಡಾವಣೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತರಿಗೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು.  ಸಂಘದ ಕಾನೂನು ಸಲಹೆಗಾರರಾದ  ನ್ಯಾಯವಾದಿ ಹಣಮಂತರಾಯ ಎಸ್‌. ಅಟ್ಟೂರ, ಮಾತನಾಡಿ ಶ್ರೀಯುತರು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಏರುವ ಸಂದರ್ಭದಲ್ಲಿಯೆ ನಮ್ಮನ್ನಲಿರುವದು ದುಃಖಕರ ವಿಷಯ. ಸಾರ್ವಜನಿಕರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ನಡೆಸುವಂತಾಗಿದೆ ಸರ್ವರು ಕೊರೊನ ಸೊ೦ಕಿನಿ೦ದ ನಿರ್ಲಕ್ಷ್ಯ ವಹಿಸದೆ  ಮುಂಜಾಗ್ರತೆ ವಹಿಸಿಕೊಂಡು ತಮ್ಮ ಜೀವ ತಮ್ಮ ಕೈಯಲ್ಲೆ ಎನ್ನುವ ಹಾಗೆ ಸುರಕ್ಷಿತವಾಗಿ ಜೀವನ ನಡೆಸಬೇಕೆಂದು ಹೇಳಿದರು.

ನಾಗೇಂದ್ರಪ್ಪ ದಂಡೋತಿಕರ್, ಸಂಗಮೇಶ  ಸರಡಗಿ, ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತ ತಳವಾರ, ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಜೇಶ್ ನಾಗಭುಜಂಗೆ, ಬಸವರಾಜ ತಳವಾರ ಯಾಳಗಿ, ಡಿ. ವಿ.ಕುಲಕರ್ಣಿ, ಶ್ರೀನಿವಾಸ ಬುಜ್ಜಿ , ಶರಣಬಸಪ್ಪ ದೆಶೆಟ್ಟಿ,  ರೇವಣಸಿದ್ದಪ್ಪ ರುದ್ರವಾಡಿ, ಕೆ.ಎಮ್. ಲೋಕಯ್ಯ, ಗೌಸ್ ಅಸ್ಮತ್ ಅಲಿ ಖಾನ್, ಸಿದ್ರಾಮಪ್ಪ ಬಿರಾದಾರ, ದೇಶಮುಖ ಬಿರಾದಾರ, ಬಾಬುರಾವ ಚವ್ಹಾಣ, ಅರುಣಕುಮಾರ ಬೈರಗೊ೦ಡ,ರಾಮು, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here