ಫ್ಲೆಕ್ಸ್ ಪ್ರಕರಣ: ವಿಶ್ವನಾಥ್ ವಿಷಾದ

0
22

ಬೆಂಗಳೂರು: ಗಿಂಡೇನಹಳ್ಳಿ ಅಂತ್ಯಕ್ರಿಯೆ ಜಾಗದ ವಿಚಾರದಲ್ಲಿ ಫ್ಲೆಕ್ಸ್ ಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಸುತ್ತಲೂ ಕಲ್ಲು ಬಂಡೆ ಇರುವ ಜಾಗವದು. ಅಲ್ಲಿ ಕುಡಿಯುವ ನೀರು ಮತ್ತಿತರೆ ಮೂಲಸೌಕರ್ಯಗಳು ಇಲ್ಲದ ಕಾರಣ ಅಲ್ಲಿಗೆ ಶವಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕುಡಿಯುವ ನೀರು ಮತ್ತು ಆಹಾರ ಪೂರೈಕೆ ಮಾಡುವಂತೆ ಮಾನವೀಯ ಮತ್ತು ಸಾಮಾಜಿಕ ಕಳಕಳಿಯಿಂದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ನನ್ನ ಫೋಟೋ ಹಾಕಿ ಫ್ಲೆಕ್ಸ್ ಹಾಕಿರುವುದು ಸರಿಯಾದ ಕ್ರಮವಲ್ಲ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಫ್ಲೆಕ್ಸ್ ಹಾಕಿದ್ದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಶವಸಂಸ್ಕಾರ ಮಾಡುವ ಸ್ಥಳದಲ್ಲಿ ಅಥವಾ ಅದರ ವಿಚಾರದಲ್ಲಿ ರಾಜಕಾರಣ ಮಾಡುವ ವ್ಯಕ್ತಿತ್ವ ನನ್ನದಲ್ಲ. ಅದರ ಅಗತ್ಯವೂ ನನಗಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಪರಿಸ್ಥಿತಿಯ ಅರಿವಿಲ್ಲದೇ ನನ್ನ ಗಮನಕ್ಕೆ ತಾರದೇ ಇಂತಹ ಅಚಾತುರ್ಯ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಇದು ಸೇವೆ ಮಾಡುವ ಸಂದರ್ಭ. ಈ ವಿಚಾರದಲ್ಲಿ ಪ್ರಚಾರ ಪಡೆಯುವುದು ಸಲ್ಲದು. ನನ್ನ ಗುರಿ ನಮ್ಮ ಕ್ಷೇತ್ರದ ಗ್ರಾಮಗಳು ಮತ್ತು ಇಡೀ ಕ್ಷೇತ್ರ ಕೋವಿಡ್ ಮುಕ್ತವಾಗಬೇಕೆಂಬುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೂ ಸಹ ಹಗಲಿರುಳೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಯಾವ ಕಾರ್ಯಕರ್ತರೂ ಈ ಸೇವೆಯ ವಿಚಾರದಲ್ಲಿ ಯಾವುದೇ ಪ್ರಚಾರ ಪಡೆಯಲು ಮುಂದಾಗಬಾರದು ಎಂದು ಮನವಿ ಮಾಡಿದ ಅವರು, ಸಾವಿನ ಮನೆಯಲ್ಲಿ ಪ್ರಚಾರ ಪಡೆಯಬೇಕೆಂಬ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದರು.

ಈ ವಿಚಾರ ತಿಳಿದ ತಕ್ಷಣ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಯಾರೂ ಸಹ ಅನ್ಯಥಾ ಟೀಕೆ ಟಿಪ್ಪಣೆ ಮಾಡದೇ ನಮ್ಮ ಕ್ಷೇತ್ರವನ್ನು ಮತ್ತು ರಾಜ್ಯವನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here