ಕಲಬುರಗಿಯಲ್ಲಿ ದುಬಾರಿ ಬೆಲೆಗೆ ಆಕ್ಸಿಜನ್ ಸಿಲಿಂಡರ್ ಮಾರಾಟ: ಜಿಲ್ಲಾಡಳಿತ ಮೌನ

0
66

ಕಲಬುರಗಿ: ಆಕ್ಸಿಜನ್ ಇಲ್ಲದೇ ಪ್ರತಿದಿನ ಜಿಲ್ಲೆಯಲ್ಲಿ ಕುಟುಂಬಸ್ಥರು ತನ್ನ ಅಪ್ತರನ್ನು ಕಳೇದುಕೊಳುತ್ತಿರುವುದು ಸಾಮಾನ್ಯವಾಗುತ್ತಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲದೇ ವೈದ್ಯರು ಅಸಹಾಯಕರಾಗಿದ್ದಾರೆ.

ಆದರೆ ಜಿಲ್ಲೆಯ ನಂದೂರ ಆಕ್ಸಿಜನ್ ಉತ್ಪಾದಕ ಕಂಪನಿಯಾದ ಕುಶಲ್ ಮಹೇತಾ ಅವರ ವಿಜಯ ಆಕ್ಸಿಜನ್ ಇಂಡಸ್ಟ್ರಿ ಗ್ಯಾಸ್ ನೇರ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತೆಲಂಗಾಣದ ರಾಜ್ಯಗಳಿಗೆ ರೂ.400 ಆಕ್ಸಿಜನ್ ಸಿಲಿಂಡರ್ ನ್ನು ರೂ. 1500ಗೆ ಬ್ಲಾಕ್ ಲ್ಲಿ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಇತ್ತೀಚಿಗೆ ನಗರದ ಕೆಬಿಎನ್ ಆಸ್ಪತ್ರೆಯ 2 ಮತ್ತು ನಿನ್ನೆ ಸುದ್ದಿ ಮೂಲಗಳ ಪ್ರಕಾರ ಸಂತೋಷ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ 2 ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವ ಬಗ್ಗೆ ಮೃತ ಕುಟುಂಬದ ಸದಸ್ಯರು ಅರೋಪಿಸಿದ್ದು, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸಾವುಗಳಿಗೆ ಆಕ್ಸಿಜನ್ ಕೊರತೆ ಇಲ್ಲ ಎಂದು ಹೇಳುತ್ತಿದೆ.

ಮೇಲ್ನೋಟಕ್ಕೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮೇಲ್ನೋಟಕ್ಕೆ ಎದು ಕಾಣುತ್ತಿದ್ದು, ಬ್ಲಾಕ್ ಲ್ಲಿ ಆಕ್ಸಿಜನ್ ಸಿಲಿಂಡರ್ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ಜಿಲ್ಲಾಡಳಿತವೇ ಮೌನ ವಹಿಸಿದಂತಾಗಿದೆ.

ಜಿಲ್ಲೆಯಲ್ಲಿ ಆಸ್ಪತ್ರೆಗಳು ಈ ದುಬಾರಿ ಬೆಲೆಯಲ್ಲಿ ಆಕ್ಸಿಜನ್ ಖರೀದಿಸಲು ಸಾಧ್ಯವಾಗದೇ, ನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವದ ಉಂಟಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ರಿಯಾಜ್ ಖತೀಬ್ ಮಾಹಿತಿ ನೀಡಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here