ಶಹಾಬಾದ: ತಾಲೂಕಿನ ಭಂಕೂರ ಗ್ರಾಮದಲ್ಲಿ ನೆಲೆಸಿರುವ ಪೇಠಸಿರೂರ ಗ್ರಾಮದ ನಿವಾಸಿ ಸಾಹೇಬಗೌಡ ಪಾಟೀಲ ಅವರು ಪೇಠಸಿರೂರ ಗ್ರಾಮದ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಒಳಗೊಂಡ ೬೦ ಮಹಿಳೆಯರಿಗೆ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹೇಬಗೌಡ ಪಾಟೀಲ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ಕೆಲಸವಿಲ್ಲ.ಇದರಿಂದ ಬಡವರು ಮತ್ತು ನಿರ್ಗತಿಕರು ಎಲ್ಲಿಲ್ಲದ ಸಂಕಷ್ಟಪಡುತ್ತಿದ್ದಾರೆ.ಅವರ ನೆರವಿಗೆ ಬರುವುದು ನಮ್ಮೆಲ್ಲರ ಕರ್ತವ್ಯ. ಆ ದೃಷ್ಟಿಯಿಂದಲೇ ಕಳೆ ವರ್ಷದಲ್ಲೂ ನನ್ನ ಮಗ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದನು. ಈ ಬಾರಿ ನಮ್ಮ ಗ್ರಾಮದ ಜನರಿಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಹಸ್ತ ಚಾಚೋಣ ಎಂಬ ಆಲೋಚನೆಯಿಂದ ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಮಾತ್ರ ಈ ಕಿಟ್‌ಗಳನ್ನು ಹಂಚುತ್ತಿದ್ದೆವೆ. ಕಿಟ್‌ಗಳು ಮಾತ್ರ ಬಡವರಿಗೆ ಸಲ್ಲಬೇಕು ಎಂಬುದು ಅವನ ಆಶಯವಿದೆ.ಅದಕ್ಕಾಗಿ ಆಹಾರ ಸಮಸ್ಯೆಯಿದ್ದರೇ ನಾನು ನನ್ನಿಂದಾಗುವ ಸಹಾಯವನ್ನು ಮಾಡುತ್ತೆನೆ ಎಂದರು.
ಕಿಟ್‌ಗಳಲ್ಲಿ ಅಕ್ಕಿ, ಗೋಧಿ ಹಿಟ್ಟು, ತೊಗರಿಬೆಳೆ, ಎಣ್ಣೆ, ಸಕ್ಕರೆ, ಹಾಲು, ಚಹಾಪತ್ತಿ, ಜೀರಗಿ, ಸಾಸಿವೆ ಸೇರಿದಂತೆ ಇತರ ವಸ್ತುಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ, ಮಲ್ಲು ಸೇರಿದಂತೆ ಅನೇಕ ಮಹಿಳೆಯರು ಇದ್ದರು.