ಶಹಾಬಾದ: ಕಾರ್ಮಿಕರ ಹೋರಾಟಗಾರ ಅಶೋಕ ಮ್ಯಾಗೇರಿ (೪೮) ಅವರು ಮಂಗಳವಾರ ಬೆಳಿಗ್ಗೆ ಹೈದರಾಬಾದನಲ್ಲಿ ಕಾರು ಅಪಘಾತದಲ್ಲಿ ಸಾವನಪ್ಪಿರುವ ಘಟನೆ ನಡೆದಿದೆ.
ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಹೈದ್ರಬಾದಗೆ ಹೋಗುತ್ತಿರುವಾಗ ಬೆಳಗಿನ ಜಾವದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಶೋಕ ಮ್ಯಾಗೇರಿ ಅವರಿಗೆ ಎದೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಪೇಠಸಿರೂರ ಗ್ರಾಮದ ಬಡವರಿಗೆ ಆಹಾರ ಕಿಟ್ ವಿತರಣೆ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿರಾಗಿದ್ದ ಅವರು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರ ಗರಡಿಯಲ್ಲಿ ಬೆಳೆದು ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು.ರೈತರ ಪರ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಗ್ರಾಪಂ ನೌಕರರ, ಬಿಸಿಯೂಟ ನೌಕರರ ಸೇರಿದಂತೆ ಅನೇಕ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
ಇವರಿಗೆ ತಾಯಿ, ಹೆಂಡತಿ, ಸುಪುತ್ರಿ ಹಾಗೂ ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರು ಇದ್ದಾರೆ.ಇವರ ಅಂತ್ಯಕ್ರಿಯೆ ಭಂಕೂರ ಗ್ರಾಮದದಲ್ಲಿ ಮಂಗಳವಾರದಂದು ನಡೆಯಿತು.
ಶೋಕ: ಅಶೋಕ ಮ್ಯಾಗೇರಿ ನಿಧನಕ್ಕೆ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಕಸಾಪ ಕಲಬುರಗಿ ಗ್ರಾಮೀಣಾಧ್ಯಕ್ಷ ಶರಣಗೌಡ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಜೆಡಿಎಸ್ ಮುಖಂಡ ಲೋಹಿತ್ ಕಟ್ಟಿ, ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ, ಶೇಕಮ್ಮ ಕುರಿ, ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಬಾದ, ಮಲ್ಲಿಕಾರ್ಜುನ ಕಾರೊಳ್ಳಿ ಸೇರಿದಂತೆ ಅಪಾರ ಜನರು ಸಂತಾಪ ವ್ಯಕ್ತಪಡಿಸಿದ್ದಾರೆ.