ಕಲಬುರಗಿಯಲ್ಲಿ ಹಾಸಿಗೆ ಹಾಗೂ ಆಕ್ಸಿಜನ್ ಸಿಗದೇ ಪರದಾಡಿದ ರೋಗಿ

0
142

ಶಹಾಬಾದ: ಕೊರೊನಾ ಸೊಂಕಿತ ಯುವಕನಿಗೆ ಚಿಕಿತ್ಸೆ ಪಡೆಯಲು ಕಲಬುರಗಿಯ ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಹಾಗೂ ಆಕ್ಸಿಜನ್ ಸಿಗದೇ ಪರದಾಡಿದ ಘಟನೆ ಮಂಗಳವಾರ ನಡೆದಿದೆ.

ಕೊರೊನಾ ವಾರಿಯರ್ಸ ಎಂದು ಕರೆಯುವ ಪೊಲೀಸ್ ಸಿಬ್ಬಂದಿಯ ಸಹೋದರ ಕೊರೊನಾ ಸೊಂಕಿನಿಂದ ಉಸಿರಾಟ ತೊಂದರೆಗೆ ಒಳಗಾದಾಗ ಸುಮಾರು ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದ ನಂತರ ಮಂಗಳವಾರ ಸುಮಾರು ಆರು ಗಂಟೆಗಳ ನಂತರ ಕಲಬುರಗಿಯ ಸುರಕ್ಷಾ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

Contact Your\'s Advertisement; 9902492681

ಹೋರಾಟಗಾರ ಅಶೋಕ ಮ್ಯಾಗೇರಿ ನಿಧನ

ಭಂಕೂರ ಗ್ರಾಮದ ಯುವಕ ಎರಡು ಮೂರು ದಿನಗಳ ಹಿಂದಷ್ಟೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಂಗಳವಾರ ಬೆಳಿಗ್ಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಯುವಕನ ಸಹೋದರಿ ಹಾಗೂ ಪೊಲೀಸ್ ಸಿಬ್ಬಂದಿಯವರು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಒಳಪಡಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹ್ಮದ್ ಅಬ್ದುಲ್ ರಹೀಮ್ ಅವರು ತಕ್ಷಣವೇ ಆಸ್ಪತ್ರೆಯಲ್ಲಿದ್ದ ಒಂದು ಆಕ್ಸಿಜನ್ ಸಿಲಿಂಡರನ್ನು ಅಂಬುಲೆನ್ಸ್ ಅಳವಡಿಸಿ, ರೋಗಿಗೆ ಕಲಬುರಗಿ ನಗರಕ್ಕೆ ಹೋಗುವಂತೆ ಸಲಹೆ ನೀಡಿದ್ದಾರೆ.ಆಕ್ಸಿಜನ್ ಮೂಲಕವೇ ಉಸಿರಾಟದಲ್ಲಿರುವ ರೋಗಿಯು ಸುಮಾರು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿದರೂ ಹಾಸಿಗೆ ಹಾಗೂ ಆಕ್ಸಿಜನ್ ಸಿಗದೇ ಪರದಾಡಿದ್ದಾರೆ.

ಪೇಠಸಿರೂರ ಗ್ರಾಮದ ಬಡವರಿಗೆ ಆಹಾರ ಕಿಟ್ ವಿತರಣೆ

ಕೆಲವೊಂದು ಆಸ್ಪತ್ರೆಯಲ್ಲಿ ಬೆಡ್ ಖಾಲಿಯಾಗುತ್ತೆ ಆದರೆ ಆಕ್ಸಿಜನ್ ಬರಲು ಮೂರು ಗಂಟೆಯಾಗುತ್ತೆ ಹೇಳಿದ್ದಾರೆ.ಆದರೂ ಅಂಬುಲೆನ್ಸ್ ನಲ್ಲಿರುವ ಆಕ್ಸಿಜನ್ ನನ್ನ ಸಹೋದರನಿಗೆ ನೆರವಾಗಿದೆ ಎಂದು ಪೊಲೀಸ್ ಪೆದೆ ಗೀತಾ ತಿಳಿಸಿದ್ದಾಳೆ. ಕರೊನಾ ಸಂದರ್ಭದಲ್ಲಿ ನಮ್ಮ ಜೀವದ ಹಂಗನ್ನು ತೊರೆದು ಕೆಲಸ ನಿರ್ವಹಿಸುವ ನಮಗೆ ನಮ್ಮ ಕುಟುಂಬದ ಸದಸ್ಯರಿಗೆ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಪರದಾಡಿ ಪರಿಸ್ಥಿತಿ ನೋಡಿದರೇ ಯಾರಿಗೂ ಬರಬಾರದು.ಅಲ್ಲದೇ ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಕ್ಸಿಜನ್ ವ್ಯವಸ್ಥೆ ಮಾಡಿದ್ದರಿಂದ ಸಹಕಾರಿಯಾಗಿದೆ.ಕೊನೆಗೆ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಅವರ ಸಹಾಯದಿಂದ ಕಲಬುರಗಿಯ ಸುರಕ್ಷಾ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ತನ್ನ ಅಸಹಾಯಕತೆ ತೋಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here