ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆ

0
32

ಕಲಬುರಗಿ: ಮೈಸೂರು ಸಂಸ್ಥಾನದ ಮಹರ್ಷಿ ರಾಜಾ ಕೃಷ್ಣರಾಜೇಂದ್ರ ಒಡೆಯರ್ ಅವರ ಕನ್ನಡ ಭಾಷೆಯ ಕಳಕಳಿ, ದಿವಾನ ರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ, ಮಿಜ೯ ಕಾಸಿಮ ಅಲಿ ಅವರ ಮಹತ್ವಾಕಾಂಕ್ಷೆಯಿಂದ ಸ್ಥಾಪನೆತಗೊಂಡು ಕನ್ನಡ ಸಾಹಿತ್ಯ ಪರಿಷತ್ತು 107 ವಷ೯ ಕಂಡ ಜಗತ್ತಿನ ಏಕೈಕ ಈ ನಾಡು-ನುಡಿಯ ಸಂಸ್ಥೆಯಾಗಿ ಬೆಳೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅವರು ನುಡಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಏಪ೯ಡಿಸಿದ್ದ ಪರಿಷತ್ತಿನ ೧೦೭ ಸಂಸ್ಥಾಪನಾ ದಿನಾಚರಣೆ ಕೊರೊನಾ ದಿಂದಾಗಿ ಸಾಂಕೇತಿಕವಾಗಿ ಏಪ೯ಡಿಸಿ, ಮಾತಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಇಂದು ಜಿಲ್ಲಾ ಘಟಕಗಳಿಗೆ ಅಷ್ಟೆ ಇರದೆ ತಾಲೂಕು, ಹೋಳಿ ಘಟಕಗಳಾಗಿ ಬೆಳೆದದ್ದು 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಇತರೆ ಭಾಷೆಗಳಿಗಿಂತ ಕೀತಿ೯ ಕನ್ನಡಕ್ಕೆ ಇದೆ.

Contact Your\'s Advertisement; 9902492681

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಕ-ಸಾಂಸ್ಕೃತಿಕ ಕಾಯ೯ಚಟುವಟಿಕೆಗಳೊಂದಿಗೆ ಈ ನೆಲದ ಸಂಶೋಧನೆ ಕಾಯ೯ಗಳ ಮೂಲಕ ಮಹತ್ತರ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ಯುವ & ಹಿರಿಯ ಸಾಹಿತಿಗಳು ಸೇರಿದಂತೆ ಕವನ,ಪ್ರಬಂಧ, ಗ್ರಾಮಗಳ ಪರಿಚಯಿಸುವ ಕೃತಿಗಳನ್ನು ಪ್ರಕಟಿಸಿದೆ,ರಂಗ ಮಂದಿರ, ಸುವಣ೯ ಸಭಾ ಭವನ ಕಟ್ಟಡ ಕಾಮಗಾರಿಗಳ ಮೂಲಕ ಪರಿಷತ್ತಿನ ಮೂಲ ಉದ್ದೇಶ ಮತ್ತು ಈ ನೆಲದ ಅಗತ್ಯತೆಗೆ ಆಥಿ೯ಕ ನೆಲೆ ಇಲ್ಲ ದಿದ್ದರೂ ಧಾನಿಗಳ ನೆರವುಗಳಿಂದ ಕಾಯ೯ನಿರತವಾಗಿದೆ ಎಂದರು.

ಹಿಂದೆ ಸಂಸ್ಹಾಪನಾ ದಿನಾಚರಣೆಯನ್ನು,ಜನಪದ ಸಂಭ್ರಮ, ತತ್ವ ಪದಗಳ ಸಂಗೀತ ಇತರೆ ವಿಶೇಷ ಕಾಯ೯ಕ್ರಮಗಳನ್ನು ಮೂಲಕ ವಿಶಿಷ್ಟವಾಗಿ ಅಚರಿಸುತ್ತಿದ್ದ ಸಂಸ್ಥಾಪನಾ ದಿನಾಚರಣೆಗೆ ಕೊರೊನಾದೀಂದಾಗಿ ಕಳೆದ ವಷ೯ದಿಂದ ಸಾಂಕೇತಿಕವಾಗಿ ಆಚರಿಸುವಂತಾಗಿದೆ. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಭುವನೇಶ್ವರಿ ಭಾವ ಚಿತ್ರಕ್ಕೆ ಮಾಲಾಪ೯ಣೆ ಮಾಡಿದರು ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿ ಪಾಟೀಲ ಸ್ವಾಗತಿಸಿದರು.

ಅಂಬುಜಿ ಕೌಲಗಿ, ವಿಠ್ಠಲಕುವಾರ,ಅಣವೀರ ಹಂಡಿ, ಮಲ್ಲಿಕಾರ್ಜುನ ಸಂಗಶೆಟ್ಟಿ,ಆನಂದ ನಂದೂರಕ್ ಇತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here