ಕೊರೊನಾ ಗಡಾಂತರದಿಂದ ಪಾರಾಗಲು ಮಾಸ್ಕ್ ಧರಿಸಿ: ಗುರಲಿಂಗಪ್ಪ

0
70

ಶಹಾಬಾದ:ಕೊರೊನಾ ವೈರಸ್ ಬಗ್ಗೆ ಜಾಗೃತಗೊಂಡು ಸಾರ್ವಜನಿಕರು ಮಾಸ್ಕ್ ಹಾಗೂ ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಿಕೊಂಡು, ಸಮಯಕ್ಕೆ ಸರಿಯಾಗಿ ಕೈತೊಳೆಯುತ್ತ ಇದ್ದರೇ ಮುಂದೆ ಬರುವ ಗಡಾಂತರದಿಂದ ಪಾರಾಗಬಹುದೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಬುಧವಾರ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕೋವಿಡ್-೧೯ ನಿಮಿತ್ತ ಸಂಸ್ಕಾರ ಪ್ರತಿ?ನ ಹಾಗೂ ಜಾಗೃತಿ ಯುವ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಕೊರೊನಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕೊರೊನಾ ಈಗಾಗಲೇ ಸಾವಿರಾರು ಜನರ ಜೀವ ತೆಗೆದಿದೆ.ಅದರ ತೀವ್ರತೆ ಹಾಗೂ ರೋಗದ ಬಗ್ಗೆ ಎಲ್ಲಾ ಅರಿತಿದ್ದಾರೆ. ಎಲ್ಲಾ ಜನರಿಗೂ ಕೋವಿಡ್-೧೯ ಬಗ್ಗೆ ತಿಳುವಳಿಕೆಯಿದ್ದರೂ ಸಾಮಾಜಿಕ ಅಂತರ, ಮಾಸ್ಕರ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ನೋಡಿದರೇ, ಮುಂದೆ ಇನ್ನೂ ಗಡಾಂತರ ಬರಬಹುದು.ಆದ್ದರಿಂದ ಕೋವಿಡ್-೧೯ ಮೂರನೇ ಅಲೆ ಬರದ ಹಾಗೇ ಮಾಡಲು ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಎಂದು ಹೇಳಿದರು.

ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ,ನಾವು ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಆದ್ದರಿಂದ ನಾವು ಮಾಸ್ಕ್ ಧರಿಸಬೇಕು.ಅಲ್ಲದೇ ಮತ್ತೊಬ್ಬರಿಗೂ ಮಾಸ್ಕ್ ಧರಿಸುವಂತೆ ತಿಳಿಸಬೇಕು.ಇಲ್ಲದೇ ಹೋದರೆ ಕೊರೊನಾಗೆ ಬಲಿಯಾಗಬೇಕಾಗುತ್ತದೆ.ಆರೋಗ್ಯ ಭಾಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆರೋಗ್ಯದಿಂದ ಇದ್ದಾಗ ಮಾತ್ರ ಮತ್ತೊಂದು ಮಾಡಲು ಸಾಧ್ಯ ಎಂಬ ಅರಿವು ಜನರು ಮನದಟ್ಟು ಮಾಡಿಕೊಳ್ಳಬೇಕೆಂದು ಹೇಳಿದರು.

ಮಾಜಿ ನಗರಸಭೆಯ ಮಾಜಿ ಅರ್ಧಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಸಾರ್ವಜನಿಕರು ಮಾತ್ರ ಸರಕಾರದ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮಾಡುವುದು ಸೇರಿದಂತೆ ಆದಷ್ಟೂ ಮನೆಯಲ್ಲೆ ಇದ್ದು ಸೊಂಕಿನ ಸರಪಳಿಯನ್ನು ಮುರಿಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಇದೇ ಸಮಯದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು.ನಂತರ ವಿವಿಧ ಗ್ರಾಮಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ಸಂಸ್ಕಾರ ಪ್ರತಿ?ನದ ವಿಠ್ಠಲ್ ಚಿಕಣಿ, ಅಮರ ಕೋರೆ, ಹಣಮಂತ ಜಾಧವ. ಶಶಿಕಾಂತ ಚವ್ಹಾಣ, ಸುಮಿತ್ರಾ, ಕಸ್ತೂರಿಬಾಯಿ, ರಾಮಣ್ಣ ಇಬ್ರಾಹಿಂಪೂರ, ಬಸವರಾಜ ಮದ್ರಿಕಿ,ನಗರಸಭೆಯ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here