ಮನೆಯಲ್ಲಿದ್ದುಕೊಂಡೇ ಕೊರೊನಾ ಸೋಂಕು ಸೋಲಿಸಿ: ಶಶಿಕಾಂತ ಪಸಾರೆ

0
249

ಕಲಬುರಗಿ: ಧೈರ್ಯಂ ಸರ್ವತ್ರ ಸಾಧನಂ ಎನ್ನುವ ಹಾಗೆ ಕೊರೊನಾ ಹೋಗಲಾಡಿಸಲು ಮುಖ್ಯವಾಗಿ ಆತ್ಮಸ್ಥೈರ್ಯವೇ ನಮ್ಮ  ಜೀವ ಉಳಿಸುತ್ತದೆ ಎಂದು ಎಲ್ಐಸಿ ಅಭಿವೃದ್ಧಿ ಅಧಿಕಾರಿಯಾದ ಶಶಿಕಾಂತ ಪಸಾರೆ ಹೇಳಿದರು.

ಇ೦ದು ನಗರದ ಗಾಜಿಪುರ ಬಡಾವಣೆಯಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಮನೆಯಲ್ಲಿದ್ದುಕೊಂಡೇ ಕೊರೊನಾ ಸೋಂಕು ಸೋಲಿಸಿದ ಶಶಿಕಾಂತ ಪಸಾರೆ ಯವರಿಗೆ ಸನ್ಮಾನ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊರೊನಾ ಸೊಂಕು ಬಂದಿವೆ ಎಂದ ತಕ್ಷಣ ಧೈರ್ಯ ಕಳೆದುಕೊಳ್ಳದೆ ವೈದ್ಯರ ಸಲಹೆಯಂತೆ ಮನೇಲಿದ್ದು ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗುವಿರಿ. ಅದಕ್ಕೆ ಉದಾಹರಣೆ ನಾನು ಮತ್ತು ನನ್ನ ಕುಟುಂಬ ಸದಸ್ಯರು.

Contact Your\'s Advertisement; 9902492681

ಕೊರೊನಾ ಸೊ೦ಕಿಗೆ ನಿರ್ಲಕ್ಷ್ಯವಹಿಸದೆ ಮುನ್ನೆಚ್ಚರಿಕೆಯಿಂದ ಜೀವನ ಮಾಡುವುದರಿಂದಿಗೆ  ತನ್ನ  ಧೈರ್ಯ   ಅರ್ಧ ಜೀವ ಉಳಿಸುತ್ತದೆ. ಎಷ್ಟೋ ಜನ ಕೊರೊನಾ ಪಾಸಿಟಿವ್ ಬಂದಿದೆ ಎಂದ ತಕ್ಷಣ ಧೈರ್ಯ ಕಳೆದುಕೊಂಡು ಸಾವನ್ನಪ್ಪಿದ್ದಾರೆ. ನನಗೂ ಹಾಗೂ ನನ್ನ ಕುಟುಂಬದ  ಸದಸ್ಯರಿಗೂ ಸೊ೦ಕು ಹರಡಿತ್ತು ಆದರೆ ನಾವು ಧೈರ್ಯದಿಂದ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ಕೊರೊನಾ  ಮುಕ್ತ ಕುಟುಂಬ ಮಾಡಿರುವುದು ಹೆಮ್ಮೆಯ ವಿಷಯ.  ತಾವು ಕೂಡ ಸೊ೦ಕು ತಗುಲಿದರೆ ಯಾವುದೇ ರೀತಿಯ ಭಯಪಡದೆ ಧೈರ್ಯದಿಂದ ಎದುರಿಸಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಕೊರೋನಾ ಮುಕ್ತರಾಗಿ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ   ಮಾತನಾಡುತ್ತಾ ಕೊರೊನಾದಿ೦ದ  ಇಡೀ ದೇಶವೇ ತಲ್ಲಣಗೊಂಡಿದೆ, ನಮ್ಮ ರಾಜ್ಯದಲ್ಲಿಯೂ ಕೂಡ ದಿನನಿತ್ಯ  ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ. ರಾಜ್ಯ ಸರಕಾರ ಕಟ್ಟುನಿಟ್ಟಾಗಿ ಪೂರ್ತಿ ಲಾಕ ಡೌನ್  ಮಾಡಿ ಜನರ ಜೀವ ಉಳಿಸಬೇಕೆಂದು ಒತ್ತಾಯಿಸಿದರು.  ಅರೆಬರೆ ಲಾಕಡೌನ್  ನಿಂದ ಯಾವುದೇ ಪ್ರಯೋಜನವಿಲ್ಲ ಪ್ರಧಾನಮಂತ್ರಿಯವರೂ, ಮುಖ್ಯಮಂತ್ರಿಗಳ ಮೇಲೆ ಬಿಡುತ್ತಾರೆ, ಮುಖ್ಯಮಂತ್ರಿಗಳು ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ  ಮೇಲೆ ಬಿಡುತ್ತಾರೆ.

ಇಂಥ ನಿರ್ಲಕ್ಷ್ಯ ಮನೋಭಾವದಿಂದ ದಿನೆ ದಿನೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಚಿತವಾಗಿಯೇ  ತಜ್ಞರ ಸಮಿತಿ ಎಚ್ಚರಿಕೆ ಕೊಟ್ಟಿದೆ ಕಟ್ಟುನಿಟ್ಟಾದ  ಲಾಕಡೌನ್ ಮಾಡದಿದ್ದರೆ  ಸೋಂಕಿತರ ಹಾಗೂ ಸಾವಿನ ಸಂಖ್ಯೆ ಮಿತಿಮೀರುತ್ತದೆ ತಡಮಾಡದೆ ವಿಷಯ ಗಂಭೀರ ಪರಿಗಣಿಸಿ ಕಟ್ಟುನಿಟ್ಟಾಗಿ ಲಾಕಡೌನ್ ಮಾಡಿ ಎಂದು ಸಲಹೆ ನೀಡಿತ್ತು.

ಆದರೆ ಅದನ್ನು ನಿರ್ಲಕ್ಷ್ಯ ವಹಿಸಿ ತನ್ನ ಅರೆಬರೆ ಲಾಕಡೌನ್ ಮುಂದುವರಿಸಿ ಜನರು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ. ಮುಂದೆಯಾದರೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕಡೌನ್ ಮಾಡಿ  ಜನರ ಜೀವ ಉಳಿಸಲಿ. ಜನರು ಸೊ೦ಕಿನಾ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತೆ ವಹಿಸಬೇಕು.ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಮು೦ಚೆ ರೋಗ ಬರದಂತೆ ನೋಡಿಕೊಳ್ಳಬೇಕು.

ತಮ್ಮ ಜೀವ ತಮ್ಮ ಕೈಯಲ್ಲಿ ಎನ್ನುವ ಹಾಗೆ ತಾವು  ಸುರಕ್ಷತೆಯಿಂದ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿದ್ದು  ಹೊರಗೆ ಬರದೆ ಕೊರೋನಾ ಓಡಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಅಭಿಪ್ರಾಯಪಟ್ಟರು. ಕೊರೊನಾ ಸೋಂಕಿನಿಂದ ಭಯಪಡದೆ ಧೈರ್ಯದಿಂದ ಮನೆಯಲ್ಲಿದ್ದುಕೊಂಡೆ ಕೊರೊನಾದಿ೦ದ ಗೆಲುವು ಪಡೆದ ಶಶಿಕಾಂತ ಪಸಾರೆ ಹಾಗೂ ಅವರ ಕುಟುಂಬದ ಸದಸ್ಯರು  ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸಂಘದ ಸದಸ್ಯರಾದ ರಘುನಂದನ ಕುಲಕರ್ಣಿ, ದಶರಥ ಧುಮ್ಮನಸೂರ, ಚಂದ್ರಕಾಂತ ಕೌಲಗಿ, ಬಸವರಾಜ ಕೋಣಿನ, ಶರಣಬಸಪ್ಪ ಕಡಾಳೆ, ನಾರಾಯಣ ಕುಲಕರ್ಣಿ, ಅನಿಲ ಟೇಂಗಳಿ, ರಾಹೂಲ ಆರ್ ಕುಲಕರ್ಣಿ, ಮಲ್ಲಿಕಾರ್ಜುನ ತರನಳ್ಳಿ, ಕಿರಣ ಕುಲಕರ್ಣಿ, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here