ಆಸ್ಪತ್ರೆಗಳಲ್ಲಿ ರೆಮಿಡಿಸಿವರ್ ಲಭ್ಯವಿಲ್ಲ ಲಭ್ಯತೆ ಬಗ್ಗೆಯು ಸ್ಪಷ್ಟತೆ ಇಲ್ಲ: ಬಲ್ಕರ್

0
15

ಕಲಬುರಗಿ: ರಾಜ್ಯ ಸರಕಾರವು ಆಕ್ಸಿಜನ್ ಸಮಸ್ಯೆಯನ್ನು ನಿಭಾಯಿಸಲು ವಿಫಲವಾಗಿರುವ ಕಾರಣ ಖಾಸಗಿ ಆಸ್ಪತ್ರೆಗಳು, ಆಕ್ಸಿಜನ್ ಅಭಾವ ಎದುರಿಸುತ್ತಿವೆ. ಅನೇಕ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್ ಲಭ್ಯವಿಲ್ಲ ಲಭ್ಯತೆ ಬಗ್ಗೆಯು ಸ್ಪಷ್ಟತೆ ಇಲ್ಲ ಇದು ಕಾಳ ಸಂತೆಯಲ್ಲಿ ಅತಿ ಹೆಚ್ಚು ಹಣ ನೀಡುವವರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಸುಲಭವಾಗಿ ದೊರೆಯುತ್ತಿವೆ. ಸರಕಾರ ಈ ಧಂದೆಯನ್ನು ಕೂಡಲೇ ಭೇಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕಲಬುರಗಿಯ ವತಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರಗೇಶ ನಿರಾಣಿ ಅವರಿಗೆ ಸಂಘದ ಅಧ್ಯಕ್ಷ ಬಸವರಾಜ ಎಸ್, ಬಲ್ಕರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ನರ್ಸ್‌ಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳ ಮನಸ್ಥೈರ್ಯ ಕುಸಿಯುತ್ತಿದೆ. ಮತ್ತು ಕೋವಿಡ್ ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸಲು ಅವರು ಹಿಂಜರಿಯುತ್ತಿದ್ದಾರೆ. ಇಂಥಹ ಕರೋನಾ ವಾರಿಯರ‍್ಸ್‌ಗಳಿಗೆ ಧೈರ್ಯ ತುಂಬುವ ಕೆಲಸ ಸರಕಾರ ಮಾಡಬೇಕು ಮತ್ತು ಅವರಿಗೆ ಪ್ರೋತ್ಸಾಹ ಧನವನ್ನು ನೀಡಬೇಕು. ರಾಜ್ಯ ಸರಕಾರವು ಆಕ್ಸಿಜನ್ ಸಮಸ್ಯೆಯನ್ನು ನಿಭಾಯಿಸಲು ವಿಫಲವಾಗಿರುವ ಕಾರಣ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಆಕ್ಸಿಜನ್ ಅಭಾವ ಎದುರಿಸುತ್ತಿದ್ದು, ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮೂರು ಪಟ್ಟು ಹಣಕ್ಕೆ ಸಿಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ನಿಯಂತ್ರಣ ಮಾಡಬೇಕು ಎಂದರು.

Contact Your\'s Advertisement; 9902492681

ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸಮಸ್ಯೆಯಿಂದ ಮೃತಪಟ್ಟರೆ ಮೃತ ವ್ಯಕ್ತಿಯ ಶವ ತೆಗೆದುಕೊಂಡು ಹೋಗಲು ಸರಕಾರಿ ಆಸ್ಪತ್ರೆಗಳಲ್ಲಿ ಅಂಬುಲೇನ್ಸ್ ಖರ್ಚು ೨೦.೦೦೦ ರೂ. ಕೇಳುತ್ತಿದ್ದಾರೆ. ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸಿ ಕ್ರಮಕೈಗೊಳ್ಳುಬೇಕು. ಅಫಜಲಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ನಾಲ್ಕು ಜನ ಮೃತಪಟ್ಟಿರುತ್ತಾರೆ. ಅವರ ಕುಟುಂಬಕ್ಕೆ ಸರಕಾರದಿಂದ ಕೂಡಲೇ ಸಹಾಯಧನವನ್ನು ಮಂಜೂರು ಮಾಡಬೇಕೆಂದು ಸಂಘವು ಒತ್ತಾಯಿಸುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಕರೋನಾ ಲಸಿಕೆ ಒದಗಿಸಲಾಗಿತ್ತು ಆದರೆ ಒಮ್ಮಲೆ ನಿಲ್ಲಿಸಲಾಗಿದೆ ಇದು ಜನರಲ್ಲಿ ಗೊಂದಲ ಸೃಷ್ಠಿಸಿದೆ ಈ ಕುರಿತು ಸರಕಾರ ಗಮನಹರಿಸಬೇಕು.

ಹೆಚ್ಚುತ್ತಿರುವ ಬೇಡಿಕೆ ಹಾಗೂ ದರ ಏರಿಕೆ ಕಾರಣ ಹೆಚ್ಚುವರಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಆಸ್ಪತ್ರೆಗಳಿಗೆ ಕಷ್ಟವಾಗಿದೆ. ಸರಕಾರವು ಇವುಗಳ ಬೆಲೆ ನಿಯಂತ್ರಿಸಬೇಕು. ಕಲಬುರಗಿ ಜಿಲ್ಲೆಯಲ್ಲಿ ಕರೋನಾ ಲಸಿಕೆ ಕಾರ್ಯಕ್ರಮವು ನಿರೀಕ್ಷಿತ ಗುರಿ ಮುಟ್ಟಿಲ್ಲ ಜಿಲ್ಲೆಯ ಎಲ್ಲಾ ಶಾಸಕರ ಮುಂದಾಳತ್ವದಲ್ಲಿ ಜನರನ್ನು ಪ್ರೇರೆಪಿಸಬೇಕಾಗಿದೆ. ಸರಕಾರವು ಅಗತ್ಯವಿರುವಷ್ಟು ಲಸಿಕೆಯನ್ನು ಪೂರೈಸುವ ಅಗತ್ಯವು ಇದೆ ಎಂದರು.

ಇಲ್ಲಿಯವರೆಗೂ ಕೇವಲ ಜಿಲ್ಲೆಯಲ್ಲಿ ಮಾತ್ರ ಕೋವಿಡ್ ವೈರಸ್ ತನ್ನ ರುದ್ರಾವತಾವರ ತೋರುತ್ತಿದ್ದು, ಪ್ರಸ್ತುತ ಸನ್ನಿವೇಶದಲಿ ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಿಸಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಪಿಎಚ್‌ಸಿ, ಸಿಎಚ್‌ಸಿ, ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಸಲುವಾಗಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ ಮತ್ತು ಆರ್.ಟಿ.ಪಿ.ಸಿ.ಆರ್ ಟೆಸ್ಟಿಂಗ್ ಮಾಡಿಸಿದಾಗ ವರದಿ ಬರಲು ವಿಳಂಬವಾಗುತ್ತಿದ್ದು, ತ್ವರೀತವಾಗಿ ವರದಿ ಬರಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಅಂಶಗಳನ್ನು ತಕ್ಷಣವೇ ಕ್ರಮ ತೆಗೆದುಕೊಂಡು ಜಿಲ್ಲೆಯ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಎಸ್.ಬಿಲ್ಕರ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here