ಬಡವರ – ನಿರ್ಗತಿಕರ ಕಷ್ಟಕ್ಕೆ ಮನ ಮಿಡಿಯುವ ಗಿರಿರಾಜ ಪವಾರ ತಂಡ

0
60

ಶಹಾಬಾದ: ದೇಶಾದ್ಯಂತ ಕೊರೋನಾ ಎರಡನೇ ಅಲೆ ಜನರನ್ನು ಕಂಗಾಲು ಮಾಡಿದ್ದು, ಕೊರೋನಾ ಸಂಕ?ದಿಂದ ಜನರು ಈಗ ನಲುಗಿ ಹೋಗಿದ್ದಾರೆ. ಒಂದು ಕಡೆ ಕೊರೋನಾ ಆತಂಕ ಮತ್ತೊಂದೆಡೆ ಕೈಯಲ್ಲಿ ಹಣವಿಲ್ಲದೇ ಸಂಕ? ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಗರದ ಉಪನ್ಯಾಸಕ ಗಿರಿರಾಜ ಪವಾರ ಅವರ ತಂಡವೊಂದು ಸದ್ದಿಲ್ಲದೇ ಬಡವರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ, ರೋಗಿಗಳ ಸಂಬಂಧಿಕರಿಗೆ ಊಟ, ಹಣ್ಣು -ಹಂಪಲು ಹಾಗೂ ಕುಡಿಯುವ ನೀರಿನ ಬಾಟಲ್ ನೀಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.

Contact Your\'s Advertisement; 9902492681

ಹೌದು. ನಗರದ ಉಪನ್ಯಾಸಕ ಗಿರಿರಾಜ ಪವಾರ ಅವರು ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ನಗರದ ಗಣ್ಯರು ಮಾಡುವಂತ ಕೆಲಸವನ್ನು ತಮ್ಮ ಯುವಕರ ತಂಡವನ್ನು ರಚಿಸಿಕೊಂಡು ಈ ಕೆಲಸಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈಗಾಗಲೇ ಅವರು ಕೆಲವು ದಿನಗಳಿಂದ ನಿರ್ಗತಿಕರಿಗೆ, ಬಿಕ್ಷುಕರಿಗೆ ಹುಡಿಕಿಕೊಂಡು ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ದೇವಸ್ಥಾನಗಳಿಗೆ ಹೋಗಿ ಆಹಾರ ವಿತರಣೆ ಮಾಡುತ್ತಿದ್ದಾರೆ.ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೂ ವಿತರಣೆ ಮಾಡುವ ಮೂಲಕ ನೊಂದವರಿಗೆ ಸಹಾಯ ಒದಗಿಸುತ್ತಿದ್ದಾರೆ.ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಕಲಬುರಗಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಜಿಮ್ಸನ ಹೊರಗಡೆ ಕಾದು ಕುಳಿತ ಬಡ ರೋಗಿಗಳ ಸಂಬಂಧಿಕರಿಗೂ ಆಹಾರ, ಹಣ್ಣು, ಕುಡಿಯುವ ನೀರಿನ ಬಾಟಲ್ ನೀಡುವ ಮೂಲಕ ಅವರ ಕಷ್ಟಕ್ಕೆ ಮನ ಮಿಡಿದಿದ್ದಾರೆ.

ಕಳೆ ವರ್ಷವೂ ಕೊರೊನಾ ಸಂದರ್ಭದಲ್ಲಿ ದೇಶದ್ಯಾದಂತ ಲಾಕ್‌ಡೌನ್ ಉಂಟಾದ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರದ ಕಿಟ್ ವಿತರಣೆ, ಊಟದ ವ್ಯವಸ್ಥೆ, ತರಕಾರಿ ವಿತರಣೆ ಸೇರಿದಂತೆ ಕೆಲವು ಬಡ ಜನರ ಮನೆ ಬಾಡಿಗೆಗೂ ಸಹಾಯ ಒದಗಿಸಿದ್ದರು.ಈಗ ಮತ್ತೆ ಜನರ ಸೇವೆಗೆ ತನ್ನಿಂದಾಗುವ ಕೆಲಸಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ.ಇದಕ್ಕೆ ಬಿಜೆಪಿ ಮುಖಂಡ ಮಂಜುನಾಥ ವಾರದ, ಆನಂದ ಸಂಕೇಶ್ವರ,ಅಜಯ ವಾಗಮೋರೆ, ರೇವಣಸಿದ್ಧ ಶೆಳ್ಳಗಿ, ಪ್ರಭು, ಉಪನ್ಯಾಸಕ ಮಹ್ಮದ್ ಇರ್ಫಾನ, ಸೇರಿದಂತೆ ಅನೇಕರು ಗಿರಿರಾಜ ಅವರಿಗೆ ಕೈಜೋಡಿಸಲು ಮುಂದೆ ಬಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here