ಅಮ್ಮ ನಿಮ್ಮನ್ನು ವರ್ಣಿಸಲು ನನ್ನ ಕೈಲಿ ಆಗದು ಏಕೆಂದರೆ ನಿಮ್ಮ ಸ್ಥಾನವೇ ಅಂತಹದ್ದು ತನ್ನ ಮಕ್ಕಳು ಗಂಡನೇ ನಿಮಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರಬರುವ ಅವಕಾಶ ಇದ್ದರೂ ಕೂಡ ನೀವು ಅದರಲ್ಲಿ ಸಂತೋಷವಿದೆ ಮತ್ತು ತೃಪ್ತಿ ಇದೆ ಎನ್ನುತ್ತೀರಿ.ಪಾಶ್ಚಾತ್ಯ ದಿನಗಳಲ್ಲಿ ಸ್ತ್ರೀ ದೇವತೆಗಳ ಹಬ್ಬವನ್ನು ಆಚರಿಸುವುದಕ್ಕೆ ಅಮ್ಮಂದಿರ ದಿನ ಎಂಬುವುದಾಗಿ ಕರೆಯುತ್ತಿದ್ದರು.
ಮೊಟ್ಟಮೊದಲ ಬಾರಿಗೆ ಅಮ್ಮಂದಿರ ದಿನವನ್ನು ಅಮೆರಿಕದಲ್ಲಿ 1908ರಲ್ಲಿ ಆರಂಭಿಸಲಾಯಿತು.
ಹಾಗೇನಿಲ್ಲ ಇಲ್ಲಿಯವರೆಗೂ ಆಚರಣೆ ಮಾಡುತ್ತಲೇ ಬಂದಿದ್ದೇವೆ.ಅಮ್ಮನ ದಿನವೂ ಕುಟುಂಬದ ಹೆತ್ತಾ ತಾಯಿಯನ್ನು ಗೌರವಿಸುವ ವಿಶಿಷ್ಟ ಆಚರಣೆಯಾಗಿದೆ. ಜೊತೆಗೆ ಮಾತೃತ್ವ, ತಾಯಿಯ ಬಂಧಗಳ ಮತ್ತು ಸಮಾಜದಲ್ಲಿ ತಾಯಿಂದರ ಪ್ರಭಾವ ಹೆಚ್ಚು.ಇದನ್ನು ವಿಶ್ವದ ಹಲವು ಕಡೆಯಲ್ಲಿ ಆಚರಣೆ ಮಾಡಲಾಗುತ್ತದೆ.
ನಿಮ್ಮ ಪಾಲಿಗೆ ನಾನು ಏನೂ ಬರೆಯಲು ಹೋದರು ಕೂಡ ಅದು ನನಗೆ ಚಿಕ್ಕದೆ ಅನಿಸುತ್ತೆ ನಿಮ್ಮ ಮಹತ್ವ ತುಂಬಾ ದೊಡ್ಡದು ಅದು ಪದಗಳಿಗೆ ಸೀಮಿತವಾಗುವುದಿಲ್ಲ. ಪ್ರತಿಯೊಂದು ದಿನವೂ ನನಗೆ ನಿಮ್ಮ ದಿನವೇ ಆಗಿರುತ್ತದೆ.ಅಮ್ಮನ ವಾತ್ಸಲ್ಯ, ಪ್ರೀತಿ ಹೊಸದಾಗಿ ಹೇಳುವುದು ಏನು ಇಲ್ಲ.
ಹಿಂದಿನ ಕಾಲದಲ್ಲಿ ಹಿರಿಯರು ಒಂದು ಗಾದೆ ಮಾತು ಹೇಳುತ್ತಾರೆ ಅದೇನೆಂದರೆ,ತಾಯಿಗಿಂತ ಬಂದು ಇಲ್ಲ ಉಪ್ಪಿಗಿಂತ ರುಚಿ ಇಲ್ಲ.ಹೌದು ಗಾದೆಗಳೆಲ್ಲ ಅನುಭವದ ಮಾತುಗಳು. ಗಾದೆ ಎಷ್ಟು ಅರ್ಥ ಬದ್ಧವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತಿದೆ.ಅಂದರೆ ಪ್ರತಿಯೊಬ್ಬರ ಜೀವನದಲ್ಲಿ ಅವರ ಪಾತ್ರ ತುಂಬಾ ಮುಖ್ಯವಾದುದು.
ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ. ಮನಸ್ಸಿನ ಭಾವನೆಗೆ ತಾಯಿಯೇ ಸ್ಪಂದಿಸುವ ಜೀವಂತ ದೇವತೆ.ಮಕ್ಕಳನ್ನು ಹೆತ್ತು ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವ ಅದ್ಭುತ ಶಿಲ್ಪಿಯಾಗಿರುತ್ತಾಳೆ ಎಂಬುವುದು ಸರ್ವಕಾಲಿಕ ಸತ್ಯವಾದ ಮಾತು.
ಹೆಣ್ಣು ತಾಯಿಯಾಗಿ ತನಗೆ ತಾನೇ ಜನ್ಮನೀಡಿ ಕೊಳ್ಳುತ್ತಾಳೆ ಆದರೆ ತಾಯಿಯಲ್ಲಿ ನಿಸ್ವಾರ್ಥದ ಸಂವೇದನೆಯ ಅಂತಃಕರಣವು ತುಂಬಿರುತ್ತದೆ.ಅಮ್ಮನ ಹತ್ತಿರ ತನ್ನದೆಯಾದ ಆಸೆಗಳಿವೆ ಅಲವೇ ಅಮ್ಮ ? ಎಂದು ನಾನು ನನ್ನ ಅಮ್ಮನಿಗೆ ಕೇಳಿದಾಗ ಅವರು ನಿಮ್ಮೆಲ್ಲರ ಆಸೆಯೇ ನನ್ನಾಸೆ ಎಂದು ನಿಸ್ವಾರ್ಥದಿಂದ ಹೇಳುತ್ತಾರೆ ನೀವು ಚೆನ್ನಾಗಿದ್ದರೆ ಸಾಕು ನಾನು ಚನ್ನಾಗಿ ಇರುತ್ತೆನೆ ಎಂದು ಎನ್ನುತ್ತಾಳೆ.
ನಿಜವಾಗಲೂ ತಾಯಿಯು ಹೇಗೆ ತನ್ನ ಆಶೆಗಳನ್ನ ಒಣಗಿಸಿ ಬಿಡುತ್ತಾರೆ.ಆ ಆಶೆಗಳೆಲ್ಲ ಒಣಗಿದ ಮೇಲೆ ಮತ್ತೆ ಆ ಆಸೆಗಳು ಚಿಗುರಲು ಹೇಗೆ ಸಾಧ್ಯವಾಗುತ್ತೆ ಅಮ್ಮ.ತನ್ನ ಸ್ವಾರ್ಥಗಳನ್ನು ಅಡಗಿಸಿಕೊಂಡು ಮಕ್ಕಳಿಗೆ ತನ್ನ ಜೀವನವನ್ನು ಮೀಸಲಿಡುತ್ತಾಳೆ.ನಿಸ್ವಾರ್ಥದ ಭಾವನೆಗಳು ಅವಳಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತಾ ಹೋಗುತ್ತವೇ.
ಮನಸ್ಸಿನಿಂದ ಅವರು ಒಬ್ಬ ಶಿಕ್ಷಕಿಯಾಗಿ, ಹತ್ತಿರದ ಗೆಳತಿಯಾಗಿ ಮಕ್ಕಳಲ್ಲಿ ಸ್ನೇಹದ ಮಧುರ ಭಾವನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುತ್ತಾ ಹೋಗುತ್ತಾಳೆ. ನನಗೇನಾದರೂ ಪರವಾಗಿಲ್ಲ ನನ್ನ ಗಂಡ ಮಕ್ಕಳು ಚೆನ್ನಾಗಿರಲಿ ಎಂದು ದೇವರಲ್ಲಿ ಸದಾ ಪ್ರಾರ್ಥಿಸುವಳು ಈ ನನ್ನ ತಾಯಿ.
ಅಮ್ಮ ನಿಮ್ಮ ದಿನದಂದು ನಾನು ವಿಶೇಷ ಲೇಖನವನ್ನು ಬರೆಯಲು ಹೋದರೆ ಆ ಲೇಖನಕ್ಕೆ ಪದಗಳೇ ಸಿಗಲಾರವು, ಅಂದರೆ ಅಷ್ಟೇ ಪದಗಳಿಗೆ ಸೀಮಿತ ಅಲ್ಲ ನಿಮ್ಮ ಸ್ಥಾನ ಅಮ್ಮ.ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೇವರು. ದೇವರು ಎಲ್ಲ ಕಡೆ ಇರುತ್ತಾರೆ ಎಂಬುವುದಕ್ಕೆ ಸಾಕ್ಷಿ ಅಮ್ಮನ ಪಾತ್ರ ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ವಸ್ತು ಎಂದರೆ ಅದು ಅಮ್ಮ.
ಪ್ರತಿವರ್ಷ ಒಮ್ಮೆ ಮಾತ್ರ ಅಮ್ಮಂದಿರ ದಿನ ಮಾತ್ರ ಅಮ್ಮನಿಗೆ ಶುಭಾಶಯ ತಿಳಿಸುವುದು. ಆ ದಿನದಂದು ನಾವುಗಳು ಅಮ್ಮ ಹೇಗಿದ್ದಾಳೆ? ಅವಳ ಸಂತೋಷವೇನು ಎಂಬುದನ್ನು ತಿಳಿದುಕೊಳ್ಳಲು ಒಂದು ದಿನವಾದರೂ ಅವಳ ಜೊತೆಗಿದ್ದು ಸಮಯ ಕಳೆಯಬಹುದು.ತೊದಲು ನುಡಿಯುವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ಪದವೇ ಅಮ್ಮ. ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನು ಸಾರ್ಥಕಗೊಳಿಸುವ ಶಕ್ತಿ ಇದೆ.
ಯಾವಾಗಲೂ ಮಕ್ಕಳ ಖುಷಿಯಲ್ಲಿ ಜಗತ್ತು ಕಾಣುವ ಅಮ್ಮ ನಮ್ಮೆಲ್ಲರ ಕಣ್ಣಿಗೆ ಕಾಣುವ ದೇವರು ಕುಟುಂಬದ ಜವಾಬ್ದಾರಿ ಸಹಿತ ಮಕ್ಕಳ ಲಾಲನೆ-ಪಾಲನೆ ಮಾಡುತ್ತಾಳೆ.ಈ ತಾಯಿಯ ನಿಸ್ವಾರ್ಥ ಸೇವೆ ಮತ್ತು ಪ್ರೀತಿಯನ್ನು ಸ್ಮರಿಸಲು ಇಲ್ಲಿ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸುತ್ತಾರೆ.
ನಮಗೆಲ್ಲರಿಗೂ ತಿಳಿದ ಹಾಗೆ ಅಮ್ಮ ಎಂದರೆ ದೇವತೆ. ಅವಳಿಲ್ಲದೆ ಜಗತ್ತಿಲ್ಲ ಎಂಬುವುದು ಈ ದೇವತೆ ಮಕ್ಕಳಿಗೆ ಮಾತ್ರ ತಾಯಿಯಾಗಿ ಇರುವುದಿಲ್ಲ.ಅಂದರೆ ಗಂಡನಿಗೆ ಸೋತು ನಿಂತಿರುವಾಗ ಆಸರೆಯಾಗುತ್ತಾಳೆ, ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಲು ಹೀಗೆ ಎಲ್ಲ ಸಂದರ್ಭದಲ್ಲಿಯೂ ಎಲ್ಲರ ಜೊತೆಗೂ ಇರುತ್ತಾಳೆ.ಪ್ರತಿಯೊಂದು ಕುಟುಂಬದ ಜೊತೆಗೆ ಅಮ್ಮಂದಿರು ಸದಾ ಇರುತ್ತಾರೆ.
ನಿನ್ನನ್ನು ಪ್ರೀತಿಸಲು ಯಾವುದೇ ದಿನದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಈ ಜಗತ್ತಿನಲ್ಲಿ ಎಲ್ಲರನ್ನು ಅತ್ಯಂತ ಸುದೀರ್ಘವಾಗಿ ಯಾವುದೇ ಕಲ್ಮಶವಿಲ್ಲದ ಪ್ರೀತಿ ತೋರಿಸುವ ಗುಣ ನಿನ್ನದು ಅಮ್ಮ.
ಪ್ರೀತಿ,ಮಮತೆ, ವಾಸ್ತಲ್ಯ ಇರುವಂತಹ ಹೀಗೆ ಎಲ್ಲವನ್ನೂ ತುಂಬಿಕೊಂಡಿರುವ ಈ ನನ್ನ ಜಗತ್ತು ನೀನು. ನಾವುಗಳು ಎಷ್ಟೇ ತಪ್ಪುಗಳು ಮಾಡಿದರೂ ಕೂಡ ಅವರು ತಿದ್ದಿ-ತೀಡಿ ಬುದ್ಧಿ ಹೇಳುವ ಗುಣ ಹೊಂದಿದ್ದಾರೆ. ಹಾಗೆ ಅವಳಿಂದ ಮಾತ್ರ ಯಾವುದೇ ರೀತಿಯ ತಪ್ಪಾಗಲಾರದು.ಯಾವುದೇ ನೋವಾದರೂ ಕೂಡ ನಾವುಗಳು ಮೊದಲು ಹೇಳುವುದೇ ಅಮ್ಮ ಎಂದು.
ಅಷ್ಟು ಪ್ರಬಲ ಶಕ್ತಿ ಹೊಂದಿರುವ ದೈವಶಕ್ತಿ ಅವರು. ನಿನ್ನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಮ್ಮ ಕೈಲಿ
ನಮ್ಮ ಮೊದಲ ಗುರುವೇ ನಮ್ಮ ತಾಯಿ.ಅಮ್ಮ ಎಂದರೆ ಈ ಪ್ರಪಂಚದಲ್ಲಿ ಎಲ್ಲರಿಗೂ ಉಲ್ಲಾಸ ಉಸ್ತಾಹ, ಸಂತೋಷ, ನೆಮ್ಮದಿ, ಹರುಷ ನೀವೇ ನಮ್ಮೆಲ್ಲರ ಪಾಲಿಗೆ ದೇವರು. ಪ್ರತಿಯೊಂದು ಸಂದರ್ಭದಲ್ಲಿಯು ನನಗಿಂತ ಆತಂಕ ಪಡುವವರೇ ನೀವು.
ನೀವು ನಮ್ಮ ಎರಡು ಕಣ್ಣುಗಳು ಇದ್ದಂತೆ.
ಅಮ್ಮ ನಿನ್ನಂತ ತಾಯಿ ಈ ಪ್ರಪಂಚದಲ್ಲಿ ಎಲ್ಲೂ ಸಿಗಲಾರರು. ಇಡೀ ಪ್ರಪಂಚವನ್ನು ಸುತ್ತಿ ಬಂದ್ರು ಆ ನಿನ್ನ ಕೈ ತುತ್ತನ್ನು ಎಂದೆಂದಿಗೂ ಮರೆಯಲಾಗದು.ನನಗೆ ನನ್ನ ತಾಯಿಯೇ ಸ್ಫೂರ್ತಿ ತಾಯಿಯ ಆಸರೆ ಇಲ್ಲದಿದ್ದರೆ ನಮ್ಮ ಬದುಕು ಶೂನ್ಯವಾಗುತಿತ್ತು ಅನ್ನಿಸುತ್ತೆ ನಮಗೆ.
ಅಮ್ಮ ನಿಮ್ಮನ್ನು ಕುರಿತು ನಾನು ಬರೆಯಲು ಹೋದರೆ ಸಾಧ್ಯವಾಗದಷ್ಟ ಮಹೋನ್ನತ ವ್ಯಕ್ತಿತ್ವ ನೀವು ಹೊಂದಿರುವಿ…ನೀವು ಖುಷಿಯಾಗಿ ಇದ್ದಾರೆ ಇಡೀ ನಮ್ಮ ಕುಟುಂಬವೇ ಸಂತೋಷದಿಂದ ಇರಲು ಸಾಧ್ಯ.ಈ ಕುಟುಂಬ ಸಂತೋಷದಿಂದ ಕುಡಿದ್ದಾರೆ ಈ ನಮ್ಮ ಇಡೀ ಪ್ರಪಂಚವೇ ಆನಂದದಿಂದ ಕೂಡಿರಲು ಸಾಧ್ಯವಾಗುತ್ತದೆ.
ಇಂದು ನಿಮ್ಮ ಮಕ್ಕಳು ಏನಾಗಿದ್ದರೋ ಅದಕ್ಕೆಲ್ಲಾ ಮುಖ್ಯ ಕಾರಣವೇ ನೀವು ಅಮ್ಮ. ಮುಂದೆ ಇನ್ನೇನಾದ್ರೂ ಆದರೂ ಕೂಡ ಅದಕೆಲ್ಲಾ ಕಾರಣವೇ ನೀವಾಗಿರುತ್ತಿರಿ ಎಂದು ಹೇಳಬಯಸುತ್ತೇನೆ.ಅಮ್ಮಂದಿರ ದಿನವನ್ನು ಆಚರಣೆ ಮಾಡುವ ಪ್ರಮುಖ ಉದ್ದೇಶವೇ ಇಷ್ಟೇ ಅದೇನೆಂದರೆ ತಾಯಿಯ ತ್ಯಾಗವನ್ನು ಜಗತ್ತಿಗೆ ತಿಳಿಸುವುದು, ಅವಳ ಶಕ್ತಿ ಏನೆನ್ನುವುದು ತೋರ್ಪಡಿಸುವುದು, ತ್ಯಾಗದ ಪ್ರತೀಕವೇ ಈ ನಮ್ಮ ಅಮ್ಮ.
ಅಮ್ಮ ನೀವು ಜನ್ಮ ನೀಡಿರುವ ನಾಲ್ಕು ಮಕ್ಕಳ ಏಳಿಗೆಗಾಗಿ ನೀವು ನಮ್ಮ ಉನ್ನತಿಗಾಗಿ ನಮ್ಮ ಸುಖ ಶಾಂತಿಗಾಗಿ ನಿಮ್ಮ ನೋವನ್ನೆಲ್ಲ ನಿಮಲ್ಲಿ ಸಹಿಸಿಕೊಂಡು ನಮಗಾಗಿ ಎಂದರೆ ನಾನು ತಮ್ಮಂದಿರು ತಂಗಿಗಾಗಿ ಪ್ರತಿದಿನ ಸುಖಕರವಾದ ಕುಟುಂಬವನ್ನು ಕಟ್ಟಿಕೊಟ್ಟು ಹೆಮ್ಮೆಯಿಂದ ನಮ್ಮನ್ನು ನೋಡಿಕೊಳ್ಳುತ್ತಿರುವ ನಮ್ಮ ಮುದ್ದುಅಮ್ಮ.ಅಮ್ಮ ನೀವು ನಮ್ಮೆಲ್ಲರ ಬದುಕಿನ ಸ್ಪೂರ್ತಿ ನಿಮಗೆ ನಮ್ಮೆಲ್ಲರ ಕಡೆಯಿಂದ ಕೋಟಿ ನಮನಗಳು.
ಈ ಜಗತ್ತಿನಲ್ಲಿ ಕಾಲ ಬದಲಾವಣೆ ಆದರೂ ಕೂಡ, ಸಮಯ ಬದಲಾವಣೆ ಆದರೂ,ಜನರು ಬದಲಾದರು ಕೂಡ, ಒಬ್ಬರು ಮಾತ್ರ ಬದಲಾಗಲು ಸಾಧ್ಯವೇ ಇಲ್ಲ ಅವರೇ ನನ್ನ ಮುದ್ದು ಅಮ್ಮ ಎಂದು ಹೇಳುತ್ತಾ ಎಲ್ಲರಿಗೂ ಅಮ್ಮಂದೆರ ದಿನದ ಶುಭಾಶಯಗಳು ತಿಳಿಸುತ್ತೇನೆ.