ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಚಿಕ್ಕ ಮಕ್ಕಳಾದ ಸುದಿಕ್ಷಾ ಹೆಳವರ ಮತ್ತು ಸುಪ್ರೀತ ಹೆಳವರ ಅವರ ಹೆತ್ತಮ್ಮ ವಿದ್ಯಾಶ್ರೀ ಹೆಳವರ ಅವರ ತ್ಯಾಗ, ಪ್ರೀತಿ, ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿ ಪಾದಪೂಜೆ ನೆರವೇರಿಸಿ ತಾಯಿಯಿಂದ ಆಶಿರ್ವಾದ ಪಡೆದರು.
ನಂತರ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಹೆಳವರ ಯಾಳಗಿ ರಾಜ್ಯದ ಜನತೆಗೆ ವಿಶ್ವ ತಾಯಂದಿರ ದಿನದ ಶುಭಾಶಯ ಕೋರುತ್ತಾ, ಮಕ್ಕಳ ಖುಷಿಯಲ್ಲೇ ಜಗತ್ತು ಕಾಣುವ ಅಮ್ಮ ನಮ್ಮ ಕಣ್ಣಿಗೆ ಕಾಣುವ ನಿಜವಾದ ದೇವರು. ಬೆಲೆ ಕಟ್ಟಲಾಗದ ಹೆತ್ತ ತಾಯಿಯ ಪ್ರೀತಿ ಮುಕ್ಕೋಟಿ ದೇವರ ಆಶಿರ್ವಾದಕ್ಕಿಂತ ಮಿಗಿಲಾದದ್ದು.
ಹತ್ತು ದೇವರನ್ನು ಪೂಜಿಸುವ ಮುನ್ನ ಜಿವಂತ ದೇವರಾದ ಹೆತ್ತ ತಾಯಿಯನ್ನು ಪೂಜಿಸಬೇಕು. ತಾಯಿಯ ನಿಸ್ವಾರ್ಥ ಸೇವೆ ಮತ್ತು ಪ್ರೀತಿಯನ್ನು ಸ್ಮರಿಸಲು ವಿಶ್ವ ಅಮ್ಮಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅಮ್ಮನ ಸ್ಥಾನವನ್ನು ಜಗತ್ತಿನ ಯಾವ ಸಂಪತ್ತೂ ತುಂಬಿಸಲಾಗದು. ಅಂತಹ ಅಪೂರ್ವ ಸಂಪತ್ತಿಗಾಗಿ ಮೀಸಲಿರುವ ದಿನವಿದು ಎಂದು ಹೇಳಿದರು.
ತನ್ನ ಕರುಳನ್ನು ಕತ್ತರಿಸಿ ಜನ್ಮವಿಟ್ಟ ಜನುಮದಾತೇ, ನಿನ್ನ ಮಡಿಲಿಗೆ ಆ ಸ್ವರ್ಗವು ಸಮಾನವಾದಿತೇ, ನಿನ್ನ ಋಣವ ತೀರಿಸಲು ಈ ಜನ್ಮ ಸಾಕಾದಿತೆ ಎಂದರು.