ಸಮಾನತೆ ಕವಿಗೋಷ್ಠಿ ಸ್ಪರ್ದೆಗೆ ಆಯ್ಕೆ

0
25

ಕಲಬುರಗಿ: ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆ ಅಳಿಸಲು ಏನೆಲ್ಲ ಕಾನೂನುಗಳು ಬಂದರೂ ಇನ್ನು ಸಮಾಣತೆ ವ್ಯವಸ್ಥೆ ಕಾಣುತ್ತಿಲ್ಲ ಎಂಬ ಕವಿ ಮನಸ್ಸುಗಳ ತುಡಿತ ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತ ಪಡಿಸಿದರು. ಅಫಜಲಪೂರದ ಕವಿ ಬಿ ಎಂ ರಾವ ಅವರು ’ಸಮಾನತೆ ಕಾಣಲಿಲ್ಲ’ ಎಂಬ ಸ್ವರಚಿತ ಕವನ ವಾಚನ ಎಲ್ಲರ ಮನ ತಟ್ಟಿತು. ನಂತರ ಗೀತಾ ಭರಣಿ ಅವರ ಕವನ ಇಂದಿನ ವರ್ತಮಾನದಲ್ಲಿ ಡಾ ಅಂಬೇಡ್ಕರ ಅವರ ಸಮಾನತೆ ವಿಚಾಧಾರೆಗಳು ಹೇಗೆ ಬೆಳಕು ಚೆಲ್ಲಿದವು ಎಂಬುದನ್ನು ಕವಿತೆಯಲ್ಲಿ ಬಿಚ್ಚಿದ್ದಾರೆ. ಇತರ ಎಲ್ಲಾ ಕವಿಗಳ ಕವನ ವಾಚನ ವ್ಯವಸ್ಥೆಗೆ ಕನ್ನಡಿಯಾಗಿದ್ದವು.

ಈ ದಿಸೆಯಲ್ಲಿ ಕಲಬುರ್ಗಿ ಜಿಲ್ಲೆಯ ಕವಿಗಳಿಗೆ ಮನೆಯಲ್ಲಿಯೇ ಆನ್ ಲೈನ್ ಕವಿಗೋಷ್ಠಿ ಏರ್ಪಡಿಸಿ ಅವರಿಗೆ ಕಾವ್ಯ ಕಟ್ಟುವ ಕಲೆ ಕುರಿತು ಮನವರಿಕೆ ಮಾಡಿ ಕೊಡಲಾಯಿತು. ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಸಮಾನತೆ ಕವಿಗೋಷ್ಠಿ ಸ್ಪರ್ದೆ ಏರ್ಪಡಿಸಲಾಗಿತ್ತು.

Contact Your\'s Advertisement; 9902492681

ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ ಎನ್ ಪಾಟೀಲ ಅವರ ನೇತೃತ್ವದಲ್ಲಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಕವನಗಳು ಮೆಚ್ಚುಗೆ ಪಡೆದವು.

ಶಿಕ್ಷಕ, ಸಾಹಿತಿ ಬಿ ಎಂ ರಾವ ಅಫಜಲಪೂರ(ಪ್ರಥಮ), ಗೀತಾ ಭರಣಿ(ದ್ವಿತೀಯ) ಹಾಗೂ ಶೈಲಜಾ ಪೋಮಾಜಿ(ತೃತೀಯ) ಸ್ಥಾನಗಳಿಗೆ ಆಯ್ಕೆಯಾದರು. ಸುರೇಖಾ ಬಿರಾದಾರ, ಶರಣ ರೆಡ್ಡಿ ಕೊಡ್ಲಾ ಅವರು ಮಂಡಿಸಿದ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಸಾಹಿತಿ ಧರ್ಮಣ್ಣ ಧನ್ನಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಬರಹಗಾರರ ಬಳಗದ ರಾಜ್ಯಧ್ಯಕ್ಷ ಮಧು ನಾಯಕ ಅವರು ಆಶಯ ನುಡಿಗಳನ್ನು ವ್ಯಕ್ತ ಪಡಿಸಿ, ಜನ ಸಾಮಾನ್ಯರ ನಿಜ ಜೀವನದ ಘಟನೆಗಳನ್ನು ತಮ್ಮ ಕವನದ ಮೂಲಕ ಅಭಿವ್ಯಕ್ತ ಪಡಿಸಬೇಕು. ಕಾವ್ಯ ಜನರ ಮನಸ್ಸು ತಟ್ಟದರೆ ಮಾತ್ರ ಅದರ ಕಾವ್ಯ ಗಟ್ಟಿಗೊಳ್ಳುತ್ತದೆ ಎಂದರು.

ಗಂಗಮ್ಮ ನಾಲವಾರ ನಿರೂಪಿಸಿ ಸ್ವಾಗತಿಸಿದರು. ಕಸ್ತೂರಬಾಯಿ ರಾಜೇಶ್ವರ ಪ್ರಾರ್ಥನೆ ಗೀತೆ ಹಾಗೂ ಶಿವಲೀಲಾ ಕಲಬುರಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here