ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ವತಿಯಿಂದ, ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 20 ಸಾವಿರ ಮಾತ್ರೆಗಳನ್ನು ವಿತರಿಸಲಾಯಿತು.
ಜಗತ್ತಿನಾದ್ಯಂತ ಕೊರೊನ ಮಹಾಮಾರಿ ಹರಡಿರುವ ಹಿನ್ನೆಲೆಯಲ್ಲಿ ಇಂದು ನರಸಾಪುರ ಗ್ರಾಮ ಪಂಚಾಯಿತಿ ವತಿಯಿಂದ ಜನಗಳಿಗೆ ಸಹಾಯವಾಗಲೆಂದು ಸಿ ವಿಟಮಿನ್, Doxicycyclin 100mg, Azithromiclin 500mg ಮಾತ್ರೆಗಳನ್ನು ವಿತರಿಸಲಾಯಿತು.
ಯಾವುದೇ ರೋಗಿಗಳು ಮಾತ್ರೆಗಳು ಹಾಗೂ ಸೂಕ್ತ ಚಿಕಿತ್ಸೆಯಿಲ್ಲದೆ ಪರದಾಟ ಮಾಡಬಾರದು ಎಂದು ನರಸಾಪುರ ಗ್ರಾಮ ಪಂಚಾಯಿತಿಯು ಅನೇಕ ರೀತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೆರವಾಗುತ್ತಿದೆ.
ಮುಖ್ಯವಾಗಿ ನರಸಾಪುರ ಗ್ರಾಮದಲ್ಲಿ ಕೊರೊನವನ್ನು ತಡೆಗಟ್ಟಲು ಹಗಲು, ಇರುಳು ಎನ್ನದೆ ಶ್ರಮಿಸುತ್ತಿರುವ ಕೊರೊನ ವಾರಿಯರ್ಸ್ ಇವರಿಗೆ ನರಸಾಪುರ ಪಂಚಾಯತಿ ವತಿಯಿಂದ ಐಡಿ ಕಾರ್ಡ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನರಸಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಎಚ್ ಎಂ ರವಿ, ಉಪಾಧ್ಯಕ್ಷರು ಸುಮಾನ್ ಚಂದ್ರು,ಹೆಲ್ತ್ ಇನ್ಸ್ಪೆಕ್ಟರ್ ರಾಘವೇಂದ್ರ, ನೂತನ ಸದಸ್ಯರಾದ ಕೆ ಇ ಬಿ ಚಂದ್ರು, ಟಿ ಮಂಜುನಾಥ್, ಕುಮಾರ್, ಕೃಷ್ಣ, ಎಸ್ ಮುನಿರಾಜು, ರಾಜೇಂದ್ರ, ಕಲ್ಲಹಳ್ಳಿ ರಾಜಣ್ಣ, ಭಾನು ಪ್ರಕಾಶ್, ಓಂ ಪ್ರಕಾಶ್, ನವೀನ್, ಹಾಗೂ ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.