ರಂಜಾನ್, ಬಸವ ಜಯಂತಿ ನಿಮಿತ್ತ ಹಾಲು ವಿತರಣೆಗೆ ಮನವಿ

0
61

ಕಲಬುರಗಿ: ರಂಜಾನ್ ಹಬ್ಬ, ಬಸವ ಜಯಂತಿ ಮೇ,14 ರಂದು ನಗರದಲ್ಲಿ ಹಾಲು ವಿತರಣೆ ಮಾಡಲು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮಹಾ ನಗರ ಪಾಲಿಕೆಯ ಆಯುಕ್ತರಲ್ಲಿ ಹಾಗೂ ಹಾಲು ಒಕ್ಕೂಟದ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ಕಳೆದ ಬಾರಿ ಕರೋನಾ ಕೋವಿಡ್ -19 ರೋಗದ ನಿಯಂತ್ರಣ ಸಂದರ್ಭದಲ್ಲಿ ಪಾಲಿಕೆ, ಮತ್ತು ಹಾಲು ಒಕ್ಕೂಟವು ಕಲಬುರಗಿ ನಗರದ ಅನೇಕ ಬಡಾವಣೆಯಲ್ಲಿ ಬಡವರಿಗೆ,ದಲಿತರಿಗೆ,ಹಾಗೂ ಮುಸ್ಲಿಂ ಸಮುದಾಯದ, ಬಡಜನತೆಗೆ ಮುಂಜಾನೆ ಹಾಲು ವಿತರಣೆ ಮಾಡಲಾಯಿತು.

Contact Your\'s Advertisement; 9902492681

ಅದೇ ಮಾದರಿಯಲ್ಲಿ ಈ ಬಾರಿವು ಕರೋನಾ ಕೋವಿಡ್ -19 ರೋಗವು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಲಾಕ-ಡೌನ್ ಮಾಡಿದ್ದು,ಆದರಿಂದ ಇದೇ ಮೇ,14 ಕನ್ನಡ ವಚನಕಾರ ಅಣ್ಣ ಬಸವೇಶ್ವರ ಜಯಂತಿ ಹಾಗೂ ನಮ್ಮ ಮುಸ್ಲಿಂ ಸಮುದಾಯದ ಜನತೆ ಪವಿತ್ರ ಹಬ್ಬಗಳನ್ನು ರಂಜಾನ್ ಹಬ್ಬದ ಆಚರಣೆಗೆ ತುಂಬಾ ತೊಂದರೆ ಆಗುತ್ತದೆ, ಆದರಿಂದ ಪಾಲಿಕೆ ಆಯುಕ್ತರು ಮತ್ತು ಹಾಲು ಒಕ್ಕೂಟದ ಆಧ್ಯಕ್ಷರು ಜನತೆಗೆ ಹಾಲು ವಿತರಣೆಗೆ ಮುಂದಾಗಬೇಕಾಂಗಿ ಕಲ್ಯಾಣ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್,ಜಿಲ್ಲಾಧ್ಯಕ್ಷರಾದ ಸಚೀನ ಫರಹತಾಬಾದ ರವರು ಮಾಧ್ಯಮ ಮೂಲಗಳ ಮೂಲಕ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here