ಬಸವಣ್ಣನವರ ಚಿಂತನೆಯಿಂದ ಮನುಕುಲಕ್ಕೆ ಒಳಿತು: ಪ್ಯಾಟಿ

0
21

ಕಲಬುರ್ಗಿ: ಸಾವಿರ ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಪರಿಕಲ್ಪನೆ, ಮಹಿಳಾ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಕಾಯಕ ದಾಸೋಹದಂತಹ ಮನುಕುಲದ ಒಳಿತಿಗಾಗಿ ಆಚರಣೆಯಲ್ಲಿ ತಂದಂತಹ ದಾರ್ಶನಿಕ ಭಕ್ತಿ ಭಂಡಾರಿ ಬಸವಣ್ಣನವರಿಗೆ ಕೋಟಿ, ಕೋಟಿ ನಮನ. ಇಂದು ನಾವು ನೀವೆಲ್ಲರೂ ಅವರ ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ಇಡೀ ಮನುಕುಲವೇ ನೆಮ್ಮದಿಯ ನಿಟ್ಟಿಸಿರು ಬಿಡುವುದು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅವರು ಹೇಳಿದರು.

ಎಲ್ಲ ಧರ್ಮಗಳ ಸಾರವೊಂದೇ. ಸಕಲ ಜೀವಾತ್ಮಕ್ಕೆ ಲೇಸನ್ನೇ ಬಯಸಿ ಎಲ್ಲರೂ ತನ್ನಂತೆ ಕಂಡ ವೀರ ಕ್ರಾಂತಿಕಾರಿ ಬಸವಣ್ಣನವರು ಮೂಢನಂಬಿಕೆಯ ವಿರುದ್ಧ ಹೋರಾಡಿ ಜನರಲ್ಲಿ ನೈಜ ಪರಿಸ್ಥಿತಿ ಏನೆಂಬುದು ತೋರಿಸಿಕೊಟ್ಟ ಮಹಾನ್ ಶರಣ. ಅವರ ನಡೆ ನುಡಿಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾಗದೇ ಎಲ್ಲರ ಮನಮುಟ್ಟುವಂತೆ ಸರಳ ವಚನಗಳಿಂದ ತಿಳಿಸಿದ ಯುಗಪುರುಷ ಎಂದು ಅವರು ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ.

Contact Your\'s Advertisement; 9902492681

ಬಸವಣ್ಣನವರ ನಡುವಳಿಕೆಯನ್ನು ಅರ್ಥ ಮಾಡಿಕೊಂಡರೆ ಇಡೀ ಮನುಕುಲವು ಸೂರ್ಯನಂತೆ ಬೆಳಗಿ ಎಲ್ಲದಕ್ಕೂ ಸ್ಫೂರ್ತಿ ನೀಡಿ ವಿಜೃಂಬಿಸುತ್ತದೆ. ಅಲ್ಲದೇ ಯಾರಲ್ಲೂ ಅಸೂಯೆ ಭಾವನೆ ಮೂಡುವುದಿಲ್ಲ, ಯುದ್ಧಗಳಾಗುವುದಿಲ್ಲ, ಸ್ವಾರ್ಥ ರಾಜಕಾರಣ ಬೆಳೆಯುವುದಿಲ್ಲ, ತಂಟೆ ತಗಾದೆಗಳು ಮಾಯವಾಗಿ ಮನುಷ್ಯ ಒಳಿತನ್ನೇ ಮಾಡುವುದನ್ನು ರೂಢಿಸಿಕೊಂಡು ನಿಸರ್ಗಕ್ಕೆ ನಾಚಿಸುವಂತೆ ಮಾಡಿದೆ. ಎಲ್ಲ ಜೀವಿಗಳಿಗೂ ಅಭಯ ಹಸ್ತ ತೋರಿಸಿ ವಿಸ್ಮಯ ಪ್ರಪಂಚ ರಚಿಸಿ ಮನುಕುಲದ ಮೆರುಗು ಇಡೀ ಜೀವಾತ್ಮಕ್ಕೆ ಮಾದರಿಯಾಗಿ ಕೊನೆಗೊಳ್ಳುತ್ತಾನೆ ಎಂದು ಅವರು ತಿಳಿಸಿದ್ದಾರೆ.

ಲಂಡನ್ನಿನ ಥೇಮ್ಸ್ ನದಿ ದಂಡೆಯ ಮೇಲೆ ಇತ್ತೀಚೆಗೆ ಭಕ್ತಿ ಭಂಡಾರಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿ ಸ್ಮರಿಸಬಹುದು ಎಂದು ಅವರು ಹೇಳಿದ್ದಾರೆ. ಆಚಾರವೇ ಸ್ವರ್ಗ, ಅನಾಚರವೇ ನರಕ ಎಂಬ ಬಸವಣ್ಣನವರ ನುಡಿಯಂತೆ ಬಾಳಿ ಬೆಳಗೋಣ. ಎಲ್ಲರಿಗೂ ಶರಣು ಶರಣಾರ್ಥಿ ಎಂದು ಪ್ಯಾಟಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here