ಕಲಬುರಗಿ: ವಿಶ್ವಕ್ಕೆ ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆಯನ್ನು ನೀಡಿದ ಮಾಹಾ ಮಾನವತಾವಾದಿ ಮಹಾತ್ಮ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯುತ ನಡೆಯಾಗಬೇಕು ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವ್ಯಾಪಿಯಾಗಿ ಹಬ್ಬಿರುವ ಕೋರೊನಾ ಎಂಬ ಮಹಾಮಾರಿಯನ್ನು ತೋಲಗಿಸುವ ಸಂಕಲ್ಪದೋಂದಿಗೆ ನಮ್ಮ ಮನೆ ಮತ್ತು ಮನಗಳಲ್ಲಿ ಬಸವಾದಿ ಪ್ರಥಮರು ನೀಡಿದ ವಚನಗಳನ್ನು ಮತ್ತು ಅವುಗಳ ಸತ್ಯ ಬೋಧನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಕಾರ್ಯಪ್ರವೃತರಾಗೋಣ ಹಾಗೆಯೇ ಈ ವರ್ಷದ ಬಸವ ಜಯಂತಿಯನ್ನು ನಮ್ಮ ಮನೆಗಳಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ನಮನ ಸಲ್ಲಿಸುವುದರ ಜೋತೆಗೆ ಮಕ್ಕಳಿಗೆ ಪ್ರತಿದಿನ ಒಂದೊಂದು ವಚನ ಪಠಣ ಮಾಡುವ ಮೂಲಕ ಸಮ- ಸಮಾಜದ ನಿರ್ಮಾಣ ಮಾಡೋಣ ಎಂದು ಬುದ್ಧ ಬಸವ ಹಾಗೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ವಾದಿಗಳಾದ ಅಂಬಾರಾಯ ಅಷ್ಠಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.