ದುಡಿಮೆಯು ಇಲ್ಲ-ಲಸಿಕೆಯು ಇಲ್ಲ ; ಮಲ್ಲಿಕಾರ್ಜುನ್ ಸರಡಗಿ

0
39

ಕಲಬುರಗಿ: ಮೋದಲನೆಯದಾಗಿ ಓಡಾಡುವ ಕೆಲಸ ಮಾಡುವ ಹಾಗೂ ದುಡಿಯುವ ಪ್ರಾಯದ ಎಲ್ಲರಿಗೂ ಲಸಿಕೆ ಕೊಡುವ ಹಾಗೆ ಯೋಜನೆಯನ್ನು ರೂಪಿಸಿದ್ದರೆ ಲಸಿಕೆ ಅಭಿಯಾನ ಯಶ್ವಸಿ ಆಗುತ್ತಿತ್ತು. ಕೊರೊನಾ ಸೊಂಕು ಕೂಡಾ ಹರಡುತ್ತಿರಲಿಲ್ಲ. ನಂತರ ಹಿರಿಯ ನಾಗರಿಕರಿಗೂ ಮಕ್ಕಳಿಗೂ ನೀಡಬಹುದಿತ್ತು. ಈಗ ದುಡಿಮೆಯು ಇಲ್ಲ , ಲಸಿಕೆಯು ಇಲ್ಲ ಎಂಬತಾಗಿದೆ. ಕೂಡಲೇ ಸರಕಾರ ಲಸಿಕೆ ವಿತರಣೆಯನ್ನು ಸಮಾರೋಪಾದಿಯಲ್ಲಿ ಜರುಗಿಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಸರಡಗಿ ಅವರು ಸರಕಾರಕ್ಕೆ ಮನವಿ ಮಾಡಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಲಸಿಕೆ ಕೇಂದ್ರಕ್ಕೆ ಹೋದಾಗ ಇಂದು ಬಾ ನಾಳೆ ಬಾ ಎಂದು ಸಾಗಹಾಕುತ್ತಿದ್ದಾರೆ. ರಾಜ್ಯದಲ್ಲಂತೂ ಪಿಲ್ಲೂ ಲಸಿಕೆ ಸ್ಟಾಕ್ ಇಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲೂ ಲಸಿಕೆ ಸಿಗುತ್ತಿಲ್ಲ. ಹದಿನೆಂಟು ವ? ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವುದನ್ನೇ ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ೪೫ ವ? ಮೇಲ್ಪಟ್ಟವರಿಗೂ ಎರಡನೇ ಡೋಸ್ ಗೆ ಹೋದರೆ ಸತಾಯಿಸುತ್ತಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಟಿವಿ, ರೇಡಿಯೋ ಮತ್ತಿತರ ಮಾಧ್ಯಮಗಳಲ್ಲಿ ಸರಕಾರ ’ಕೂಡಲೇ ಲಸಿಕೆ ಹಾಕಿಸಿ’ ಎಂದು ಜಾಹೀರಾತುಗಳನ್ನು ನೀಡುತ್ತಿದೆ ಸೆಲೆಬ್ರಿಟಿಗಳು ಲಸಿಕೆ ಹಾಕಿಸಲು ಪ್ರಜೆಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here