ಸುರಪುರ:ಮೂರು ದಿನಗಳ ಕಟ್ಟು ನಿಟ್ಟಿನ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

0
20

ಸುರಪುರ: ಜಿಲ್ಲೆಯಲ್ಲಿನ ಕೊರೊನಾ ಸೊಂಕು ತಡೆಗಟ್ಟಲು ಜಿಲ್ಲಾಧಿಕಾರಿಗಳು ಮೂರು ದಿನಗಳ ಕಟ್ಟು ನಿಟ್ಟಿನ ಲಾಕ್‌ಡೌನ್ ಘೋಷಣೆ ಹಿನ್ನೆಲೆ ಸುರಪುರ ತಾಲೂಕನಾದ್ಯಂತ ಲಾಕ್‌ಡೌನ್‌ಗೆ ಜನರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನಗರದಲ್ಲಿ ಬೆಳಿಗ್ಗೆ ಒಂದಿಷ್ಟು ಜನರು ಹಾಲು ಔಷಧಿಗಾಗಿ ಮನೆಯಿಂದ ಹೊರಗಡೆ ಬಂದಿದ್ದು ಹೊರತುಪಡಿಸಿದರೆ ಇನ್ನುಳಿದಂತೆ ಜನರು ಮನೆಯಿಂದ ಹೊರ ಬರದೆ ಲಾಕ್‌ಡೌನ್‌ಗೆ ಸ್ಪಂಧಿಸಿದರು.ಸದಾಕಾಲ ಜನರಿಂದ ತುಂಬಿರುತ್ತಿದ್ದ ಮಹಾತ್ಮ ಗಾಂಧಿ ವೃತ್ತ ಹಾಗು ದರಬಾರ ರಸ್ತೆ ಜನರಿಲ್ಲದೆ ಹಾಗು ಯಾವುದೇ ವಾಹನಗಳ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.

Contact Your\'s Advertisement; 9902492681

ಕಳೆದೆರಡು ದಿನಗಳಿಂದ ಹೊರಗೆ ಅಂಗಡಿಗಳ ಸೆಟರ್ ಹಾಕಿ ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದ ವ್ಯಾಪರಸ್ಥರು ಬುಧವಾರದ ಲಾಕ್‌ಡೌನ್‌ಗೆ ಸ್ಪಂದಿಸಿದ್ದು ಇಡೀ ದಿನ ಯಾರೊಬ್ಬರು ಅಂಗಡಿಗಳತ್ತ ಸುಳಿಯಲಿಲ್ಲ.ಅಲ್ಲದೆ ಹೋಟೆಲ್‌ಗಳು ಕೂಡ ಬಾಗಿಲು ತೆರೆಯಲಿಲ್ಲ.ಇನ್ನು ಮುಖ್ಯವಾಗಿ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಕದ್ದು ಮುಚ್ಚು ನಡೆಯುತ್ತಿದ್ದ ವ್ಯಾಪರದ ಅಂಗಡಿಗಳಲ್ಲಿ ತಮಗೆ ಬೇಕಾದುದ್ದನ್ನು ಖರಿದಿ ಮಾಡುತ್ತಿದ್ದ ಗ್ರಾಮೀಣ ಪ್ರದೇಶದ ಜನರೇ ಬುಧವಾರದ ಲಾಕ್‌ಡೌನ್ ವಿಷಯ ತಿಳಿದು ಗ್ರಾಮೀಣ ಭಾಗದ ಜನರೇ ನಗರಕ್ಕೆ ಬರದೆ ತಮ್ಮ ಊರಲ್ಲಿಯೆ ಉಳಿದುಕೊಳ್ಳುವ ಮೂಲಕ ಲಾಕ್‌ಡೌನ್‌ಗೆ ಬೆಂಬಲಿಸಿದ್ದಾರೆ.

ಇನ್ನುಳಿದಂತೆ ಈಗಾಗಲೇ ಘೋಷಿಸಿರುವ ಹಾಗೆ ನಗರದಲ್ಲಿನ ಕೆಲ ಆಸ್ಪತ್ರೆಗಳು ತೆಗೆದರೆ ಎಲ್ಲಾ ಔಷಧ ಮಳಿಗೆಗಳು ಎಂದಿನಂತೆ ವ್ಯಾಪಾರ ನಡೆಸಿದವು.ಇದರ ಮದ್ಯೆ ಕೆಲವರು ಅನಾವಶ್ಯಕವಾಗಿ ಹೊರಗಡೆ ಬಂದವರು ಪೊಲೀಸರ ಕೈಗೆ ತಗಲಾಕಿಕೊಂಡು ಫಜೀತಿ ಅನುಭವಿಸಿದರು.ಅಲ್ಲದೆ ಮಹಾತ್ಮ ಗಾಂಧಿ ವೃತ್ತ ದರಬಾರ ರಸ್ತೆ ಹಳೆ ಬಸ್ ನಿಲ್ದಾಣ ಮತ್ತು ಸರ್ದಾರ ವಲ್ಲಭಬಾಯಿ ವೃತ್ತ ಎಲ್ಲೆಡೆ ಪೊಲೀಸ್ ಪಹರೆ ನಿಯೋಜಿಸಲಾಗಿತ್ತು ಹಾಗು ನಗರದೊಳಗೆ ಯಾರೂ ಪ್ರವೇಶಿಸದಂತೆ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಿರ್ಬಂಧಿಸಲಾಗಿತ್ತು.ಒಟ್ಟಾರೆಯಾಗಿ ಮೊದಲ ದಿನದ ಮೂರು ದಿನಗಳ ಕಟ್ಟು ನಿಟ್ಟಿನ ಲಾಕ್‌ಡೌನ್‌ಗೆ ಜನರು ಉತ್ತಮವಾಗಿ ಸ್ಪಂಸಿದ್ದು ಕಂಡುಬಂತು.

ಬುಧವಾರ ಅನಾವಶ್ಯಕವಾಗಿ ಹೊರಗೆ ಬಂದವರ ಆರು ಬೈಕ್‌ಗಳನ್ನು ವಶಕ್ಕೆ ಪಡೆದು ದಂಡ ಹಾಕಿದ್ದೇವೆ.ಶನಿವಾರ ಬೆಳಿಗ್ಗೆ ೬ ಗಂಟೆಯ ವರೆಗೆ ಯಾರೂ ಅನಾವಶ್ಯಕವಾಗಿ ಹೊರಗೆ ಬರಬೇಡಿ,ಬಂದವರ ಬೈಕ್ ಸೀಜ್ ಮಾಡುವ ಹಾಗು ಕೇಸು ದಾಖಲಿಸಲಾಗುವುದು-ಎಸ್.ಎಮ್.ಪಾಟೀಲ್ ಪಿಐ ಸುರಪುರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here