ಸುರಪುರ: ತಾಲೂಕು ಆಸ್ಪತ್ರೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ತಮ್ಮ ಸ್ವಂತ ಹಣದಿಂದ ೧೫ ಆಕ್ಸಿಜನ್ ಮಿಷಿನ್‌ಗಳನ್ನು ವಿತರಿಸಿದರು.
ನಂತರ ಸ್ವತಃ ಕೋವಿಡ್ ಆಸ್ಪತ್ರೆಯಲ್ಲಿನ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ನನಗೆ ಮೊದಲು ಜನರು ಮುಖ್ಯ,ನನ್ನ ಜನರಿಗಾಗಿ ನಾನು ಇನ್ನು ಏನು ಸಹಾಯ ಬೇಕಾದರು ಮಾಡಲು ಸಿದ್ದ ಎಂದು ತಿಳಿಸಿದರು.ಅಲ್ಲದೆ ಆಸ್ಪತ್ರೆಯಲ್ಲಿನ ವೈದ್ಯರ ಉದ್ದೇಶಿಸಿ ಮಾತನಾಡಿ, ಎಲ್ಲರುಕೂಡ ಉತ್ತಮವಾಗಿ ರೋಗಿಗಳ ಹಾರೈಕೆ ಮಾಡುತ್ತಿರುವಿರಿ,ಇಲ್ಲಿರುವ ಎಲ್ಲರನ್ನು ನಮ್ಮ ಮನೆಯ ಸದಸ್ಯರೆಂದು ಭಾವಿಸಿ ಅವರಿಗೆ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಅಲ್ಲದೆ ಕೆಲವು ಔಷಧಿಗಳನ್ನು ಹೊರಗಡೆಯಿಂದ ತರಿಸುತ್ತಿರುವುದಾಗಿ ಹೇಳಲಾಗುತ್ತಿದೆ.ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರೆ ಮಾಡಬೇಡಿ.ಹಾಗೇನಾದರು ಹೊರಗೆಡೆಯಿಂದ ತರಬೇಕಾದ ಅನಿವಾರ್ಯತೆ ಇದ್ದರೆ ನನಗೆ ತಿಳಿಸುವಂತೆ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.ಅಲ್ಲದೆ ಈಗಾಗಲೇ ೧.೫೦ ಲಕ್ಷ ಮಾಸ್ಕ್ ಹಾಗು ೫೦ ಆಕ್ಸಿಜನ್ ಮಿಷಿನ್ ತರಿಸಿದ್ದೇನೆ,ಇನ್ನೂ ಏನಾದರು ಬೇಕಿದ್ದರೆ ತಿಳಿಸಿ ಜನರಿಗಾಗಿ ತರಿಸಿಕೊಡಲು ತಯ್ಯಾರಿದ್ದೇನೆ ಆದರೆ ರೋಗಿಗಳಿಗೆ ಭಾರ ಹಾಕಬೇಡಿ.ನಮ್ಮ ಒಬ್ಬ ಯುವಕನನ್ನು ಇಲ್ಲಿ ನಿಯೋಜಿಸಿ ಬೇಕಾದ ಔಷಧಿ ಮತ್ತಿತರೆ ಏನೆ ಬೇಕಾದರು ವ್ಯವಸ್ಥೆ ಕಲ್ಪಿಸಲು ಸಿದ್ಧನಿದ್ದೇನೆ,ಆದರೆ ರೋಗಿಗಳು ಯಾವುದೇ ಕಾರಣಕ್ಕೂ ತೊಂದರೆ ಪಡದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಬಿ.ಎಮ್.ಹಳ್ಳಿಕೋಟಿ ಹಾಗು ವೈದ್ಯಾಧಿಕಾರಿಗಳಾದ ಓಂಪ್ರಕಾಶ ಅಂಬುರೆ ಹರ್ಷವರ್ಧನ ರಫಗಾರ ಹಾಗು ರಾಜುಗೌಡ ಸೇವಾ ಸಮಿತಿಯ ಲಕ್ಷ್ಮೀಕಾಂತ ದೇವರಗೋನಾಲ ಸೇರಿದಂತೆ ಅನೇಕರಿದ್ದರು.