ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಇಂದಿನಿಂದ ಆರಂಭ: ಎಐಡಿಎಸ್‌ಒದಿಂದ ರೋಗಿಗಳಿಗೆ ನೆರವು

0
59

ವಾಡಿ: ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೂಸೇಷನ್ (ಎಐಡಿಎಸ್‌ಓ) ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ’ಹಲೋ ಡಾಕ್ಟರ‍್ಸ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಮೇ.೨೨ ಶನಿವಾರದಿಂದ ಆರಂಭವಾಗುತ್ತಿದೆ ಎಂದು ಎಐಡಿಎಸ್‌ಒ ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾಮಾರಿ ಕೊರೊನಾ ಸೊಂಕು ದೃಢಪಟ್ಟು ಹೋಂ ಐಸೋಲೇಷನ್ ಆದ ರೋಗಿಗಳಿಗೆ ಮತ್ತು ಕೋವಿಡ್ ಪ್ರಾಥಮಿಕ ಹಂತದ ಚಿಕಿತ್ಸೆಗಾಗಿ ಕೋವಿಡ್ ಲಕ್ಷಣಗಳು ಇರುವವರಿಗೆ ತಜ್ಞ ವೈದ್ಯರ ಜೊತೆ ನೇರ ಉಚಿತ ದೂರವಾಣಿ ಸಮಾಲೋಚನೆ ನಡೆಸುವ ಉದ್ದೇಶದಿಂದ ಈ ಹಲೋ ಡಾಕ್ಟರ‍್ಸ್ ಸೇವೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ, ಹೆಚ್ಚಾಗಿ ಆರೋಗ್ಯ ವ್ಯವಸ್ಥೆ ಇಲ್ಲದ ನಗರಗಳಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವೈದ್ಯಕೀಯ ನೆರವು ಒದಗಿಸುವುದು ಮತ್ತು ಕೋವಿಡ್ ಪೀಡಿತರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವುದು ನಮ್ಮ ಉದ್ದೇಶವಾಗಿದೆ ಎಂದಿರು ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ರಾಜ್ಯದ ಅನೇಕ ಪ್ರತಿಷ್ಠಿತ, ನುರಿತ ವೈದ್ಯರು ಆರೋಗ್ಯ ಸೇವೆಗಾಗಿ ನಮ್ಮ ಜೊತೆ ಕೈಸೇರಿಸಿದ್ದಾರೆ.

Contact Your\'s Advertisement; 9902492681

ಸರ್ಕಾರಗಳ ವೈಫಲ್ಯಗಳ ನಡುವೆ ಜನ ಸೇವೆಗೆ ಮುಂದೆ ಬಂದಿರುವ ಜೀವಪರ ವ್ಯಕ್ತಿ/ಸಂಘಟನೆಗಳ ದಾರಿಯಲ್ಲಿ ನಮ್ಮ ಸಣ್ಣ ಪ್ರಯತ್ನಕ್ಕೆ ಇದು ಶಕ್ತಿ ನೀಡಿದ್ದು, ಸಂಕಷ್ಟದಲ್ಲಿರುವ ಕೋವಿಡ್ ರೋಗಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ರೋಗಿಗಳು ಮೇ.೨೨ರಿಂದ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ತಲಾ ಒಂದು ಘಂಟೆಗಳ ಎರಡು ಅವಧಿಗಳಿಗೆ ಅಪಾಯಿಂಟ್‌ಮೆಂಟ್ ನೀಡಲಾಗುವುದು. ಅಪಾಯಿಂಟ್‌ಮೆಂಟ್‌ಗಾಗಿ ಯಾವೂದೇ ಜಿಲ್ಲೆಯ ರೋಗಿಗಳು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆಗಳು:9164220387, 9035762866, 8951824630, 9538627750, 8880744437, 9632127094. ಮತ್ತಷ್ಟು ಮಾಹಿತಿ, ತಜ್ಞ ವೈದ್ಯರ ಪಟ್ಟಿ, ನಿರ್ದಿಷ್ಟ ವೇಳಾಪಟ್ಟಿಗೆ ಎಐಡಿಎಸ್‌ಓ ಕರ್ನಾಟಕ ಫೇಸ್‌ಬುಕ್ ಪೇಜ್ ಗಮನಿಸಬಹುದು ಎಂದು ವಿದ್ಯಾರ್ಥಿ ನಾಯಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here