Saturday, July 13, 2024
ಮನೆಬಿಸಿ ಬಿಸಿ ಸುದ್ದಿಸದ್ಗುರು ರೇವಣ್ಣಸಿದ್ದ ಮಹಾಸ್ವಾಮಿ 71 ನೇ ಪುಣ್ಯ ಸ್ಮರಣೋತ್ಸವ

ಸದ್ಗುರು ರೇವಣ್ಣಸಿದ್ದ ಮಹಾಸ್ವಾಮಿ 71 ನೇ ಪುಣ್ಯ ಸ್ಮರಣೋತ್ಸವ

ಕಲಬುರಗಿ: ನೇಕಾರ ದೇವಸಾಲಿ ಸಮಾಜದ ಗುರುಗಳಾದ ಶಿವೈಕ್ಯ ಶ್ರೀ. ಸದ್ಗುರು ರೇವಣ್ಣಸಿದ್ದ ಮಹಾಸ್ವಾಮಿ ಯವರ 71 ನೇ ಪುಣ್ಯ ಸ್ಮರಣೋತ್ಸವ ಇಂದು ಶನಿವಾರ ಬೆಳ್ಳೆಗ್ಗೆ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಟಾನದ ಕೇಂದ್ರ ಕಛೇರಿಯಲ್ಲಿ ಆಚರಿಸಲಾಯಿತು.

ಎಲ್ಲಾ ಸಮುದಾಯಗಳು ತಮ್ಮದೇ ಸಂಜಾತರನ್ನು ಗುರು ಪಟ್ಟಕ್ಕೆ ನೇಮಕ ಗೊಳಿಸಲು ದೀಕ್ಷಾ ಏತನವ ನೀಡಿ ಶರಣ ಧರ್ಮ ವನ್ನು ಪಾಲಿಸಲು ಕೃಪೆ ಮಾಡಿದ ಏಕೈಕ ಗುರುಗಳು ಹಾಗೂ ಒಟ್ಟು ಸಮಾಜಗಳಿಗೆ ಮಾರ್ಗದರ್ಶಕರಾಗಿ ಗಡಿ ಭಾಗದಲ್ಲಿ ನೆಲೆಸಿ (ಅಕ್ಕಲಕೋಟ್) ಕನ್ನಡ ಸಾಹಿತ್ಯ, ಚಳುವಳಿಯ ಆದ್ಯರು ಆಗಿದ್ದರು ಎನ್ನುವುದೇ ನಮ್ಮ ಜನಾಂಗಕ್ಕೆ ಹೆಮ್ಮೆ ಪಡುವ ಸಂಗತಿ ಎಂದು ಕಲಬುರಗಿ ನಗರದಲ್ಲಿ ಹಮ್ಮಿಕೊಂಡ ಸಂರಣೋತ್ಸವ ಕಾರ್ಯಕ್ರಮದಲ್ಲಿ ಹಟಗಾರ ಸಮಾಜದ ಹಿರಿಯರು ಹಾಗೂ ಲೇಖಕ ಸೂರ್ಯಕಾಂತ ಸೊನ್ನದ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ನ್ಯಾಯವಾದಿಗಳಾದ ಪ್ರಕಾಶ ಡಿಗ್ಗಿ, ಅಶೋಕ ಬೆನೂರ ಕಮಲಪುರ್, ಕಲ್ಲಪ್ಪ ಸಕರಿ, ಶಿವಲಿಂಗಪ್ಪಾ ಅಷ್ಟಗಿ, ಮೋಹನ ಚರ್ಮಾ, ಸತೀಶ ಜಮಖಂಡಿ, ಸಂತೋಷ ಗುರಮಿಟಕಲ್ ಪಾಲಗೊಂಡಿದ್ದರು.

ಕೊನೆಯಲ್ಲಿ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಅಗಮಿಸುದ ಎಲ್ಲರನ್ನೂ ಸಂಸ್ಥೆಯ ಕಾರ್ಯದರ್ಶಿ/ ನ್ಯಾಯವಾದಿ ಜೇನ ವೆರಿ ವಿನೋದಕುಮಾರ ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular