ನೇಕಾರರಿಗೆ ೧೦ ಸಾವಿರ ರೂ. ಪರಿಹಾರ ಘೋಷಣೆಗೆ ಮನವಿ: ಚಂದ್ರಶೇಖರ

0
51

ಕಲಬುರಗಿ: ಮಹಾ ಮಾರಿ ಕರೋನಾ ವೈರಸ್‌ನಿಂದಾಗಿ ಲೌಕ್‌ಡೌನ್ ಆದಾಗಿನಿಂದ ಕೆಲಸ ಕಾರ್ಯಗಳಿಲ್ಲದೇ ಮನೆಯಲ್ಲಿಯೇ ಇರುವುದರಿಂದ ಜೀವನ ನಡೆಸುವುದೇ ಕಷ್ಠವಾಗುತ್ತಿದೆ. ಆದ್ದರಿಂದ ನೇಕಾರರಿಗೆ ಕನಿಷ್ಠ ೧೦ ಸಾವಿರ ರೂ. ಪರಿಹಾರ ಧನ ಘೋಷಣೆ ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಶ್ರೀದೇವರ ದಾಸಿಮಯ್ಯ ಹಟಗಾರ ನೇಕಾರ ಸಮಾಜ ಸಂಘ ಹಾಗೂ ನೇಕಾರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಸುಲ್ತಾನಪೂರ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.

ಕರ್ನಾಟಕದಲ್ಲಿ ಒಟ್ಟು ೬೦ ಲಕ್ಷ ನೇಕಾರ ಸಮುದಾಯ ಒಕ್ಕೂಟದ ಜನ ಸಂಖ್ಯೆ ಇದ್ದು, ಇದರಲ್ಲಿ ೨೭ ಸಮುದಾಯಗಳು ಒಳಗೊಂಡಿಗೆ. ಕೈಮಗ್ಗ ನೇಕಾರ ಕುಟುಂಬಗಳು ೨ ಲಕ್ಷ ೩೫ ಸಾವಿರವಿದ್ದು, ವಿದ್ಯುತ್ ಚಾಲಿತ ಮಗ್ಗಗಳ ಕುಟುಂಬಗಳು ೪ ಲಕ್ಷ ೬೦ ಸಾವಿರ ಇರುತ್ತವೆ. ರಾಜ್ಯದಲ್ಲಿ ನೇಕಾರರ ಕುಟುಂಬಳು ೬ ಲಕ್ಷ ೯೫ ಸಾವಿರ ಜನಸಂಖ್ಯೆ ಇದೆ ಎಂದು ಮುಖ್ಯಂಮತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ನಮೋದಿಸಲಾಗಿದೆ ಎಂದರು.

Contact Your\'s Advertisement; 9902492681

ಕೈಮಗ್ಗ ನೇಕಾರರು ೪೭೦೧೬ ಇದ್ದು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರು ೫೧೨೪೯ ಇದರಲ್ಲಿ ಬಣ್ಣ ಮಾಡುವವರು, ಭಿಮ್ ಸುತ್ತುವವರು, ಖಂಡಕ್ಕಿ ಸುತ್ತುವವರು, ಭಾಗಿಗಳಾಗಿರುತ್ತಾರೆ. ಮತ್ತು ಈ ಕೋವಿಡ್-೧೯ ಲಾಕ್‌ಡೌನ್ ಸಮಯದಲ್ಲಿ ನೇಕಾರರಿಗೆ ಕೆಲಸದ ಅಭಾವದಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಮಾಲಿಕರಾದವರೂ ಕೂಡಾ ಬಟ್ಟೆ ನೇಯಿಸಿಕೊಂಡು ಸ್ಟಾಕ್ ಇದ್ದರೂ ಕೂಡಾ ಮಾರಾಟಮಾಡುವಂತಿಲ್ಲ. ಈ ಸಮಯದಲ್ಲಿ ನೇಕಾರರಿಗೆ ಅವರು ಯಾವ ತರಹದ ಸಹಾಯ ಮಾಡಲಾಗುತ್ತಿಲ್ಲ. ಇಂತಹ ಪರಿಸ್ಥಿತಿ ಇದ್ದರು ಕೂಡಾ ಕರ್ನಾಟಕ ಸರಕಾರವು ನೇಕಾರರ ಸಮುದಾಯಕ್ಕೆ ಯಾವ ಸಹಾಯ ಧನ ಒದಗಿಸಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ೧೨೫೦ ಕೋಟಿ ರೂ ಪರಿಹಾರ ಧನವನ್ನು ಘೋಷಣೆ ಮಾಡಿದ್ದು, ಅದರಲ್ಲಿ ನೇಕಾರ ಸಮುದಾಯಕ್ಕೆ ದ್ರೋಹಬಗೆದಂತಾಗಿದೆ. ಹಾಗೂ ಘೋರ ಅನ್ಯಾಯವಾಗಿದೆ ಆದ್ದರಿಂದ ಸರ್ಕಾರವು ಪ್ರತಿ ನೇಕಾರರಿಗೆ ೧೦ ಸಾವಿರ ರೂ. ಪರಿಹಾರ ಧನವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here