ಲಾಕ್‌ಡೌನ್‌ಗೆ ಜನ ಡೊಂಟ್ ಕೇರ್: ಕದ್ದು ಮುಚ್ಚಿ ವ್ಯಾಪಾರ

0
18

ಸುರಪುರ: ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗ ಮಾಡಬೇಡಿ ಎನ್ನುವುದನ್ನೆ ಬಂಡವಾಳ ಎಂಬಂತೆ ಭಾವಿಸುತ್ತಿರುವ ಜನರು ಈಗ ಲಾಕ್‌ಡೌನ್‌ಗೆ ಡೊಂಟ್ ಕೇರ್ ಎಂಬಂತೆ ಓಡಾಟವನ್ನು ನಡೆಸಿದರು.

ಸೋಮವಾರ ಬೆಳಿಗ್ಗೆ ೦೬ ಗಂಟೆಯಿಂದ ಶುಕ್ರವಾರ ಬೆಳಿಗ್ಗೆ ೦೬ ಗಂಟೆಯವರೆಗೆ ಜಿಲ್ಲಾಧಿಕಾರಿಗಳು ಕಠಿಣ ಲಾಕ್‌ಡೌನ್ ಜಾರಿ ಮಾಡಿ ಆದೇಶ ಹೊರಡಿಸಿ ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ನಗರಸಭೆ ಮತ್ತು ಪೊಲೀಸ್ ಇಲಾಖೆಯಿಂದ ನಿರಂತರ ಎಚ್ಚರಿಕೆ ನೀಡುತ್ತಿದ್ದರು ಜನರು ಸೋಮವಾರ ಅನಾವಶ್ಯಕವಾಗಿ ಜನರು ಹೊರಗಡೆ ಓಡಾಡಿದ್ದು ಕಂಡು ಬಂತು.ನಗರದ ದರಬಾರ ರಸ್ತೆ ಮಹಾತ್ಮ ಗಾಂಧಿ ವೃತ್ತ ಹಾಗು ಶ್ರೀ ವೇಣುಗೋಪಾಲ ಸ್ವಾಮಿ ರಸ್ತೆ ಎಲ್ಲೆಡೆಯು ಬೈಕ್ ಸವಾರರು ಅನಗತ್ಯವಾಗಿ ಓಡಾಡುತ್ತಿದ್ದರು.ಈ ಸಂದರ್ಭದಲ್ಲಿ ಪೊಲೀಸರು ಕೆಲವರ ಬೈಕ್‌ಗಳನ್ನು ಹಿಡಿದು ದಂಡ ಹಾಕಿದರು ಕೂಡ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಬೀಳಲಿಲ್ಲ.

Contact Your\'s Advertisement; 9902492681

ಅಲ್ಲದೆ ಮಾರುಕಟ್ಟೆಯಲ್ಲಿ ಕೆಲವು ಬಟ್ಟೆ ಮತ್ತು ಬಂಗಾರ ಮತ್ತು ಪಾತ್ರೆ ಪಗಡೆ ಮಾರಾಟದ ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸಿದರು.ಹೊರಗಡೆ ತೋರಿಕೆಗೆ ಅಂಗಡಿ ಮುಚ್ಚಿದಂತೆ ಕಂಡು ಬಂದರು ಒಳಗಡೆ ಗ್ರಾಹಕರನ್ನು ಬಿಟ್ಟುಕೊಂಡು ವ್ಯಾಪಾರ ನಡೆಸಿದರು.ಅಲ್ಲದೆ ಕೆಲವರು ಚಪ್ಪಲಿ ಮಾರಾಟವನ್ನು ಬೀದಿಯಲ್ಲಿಟ್ಟು ಮಾರಾಟ ಮಾಡುವ ಮೂಲಕ ಕೋವಿಡ್ ನಿಯಮವನ್ನು ಉಲ್ಲಂಘಿಸಿದರು.ಇದರಿಂದಾಗಿ ಸಾರ್ವಜನಿಕರು ಈಗ ಕೊರೊನಾ ಸೊಂಕು ನಿರ್ಮೂಲನೆ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ಬಟ್ಟೆ ಮತ್ತು ಪಾತ್ರೆಗಳ ಮಾರಾಟದ ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ನಡೆಸಿದ ಅಂಗಡಿಗಳ ಮೇಲೆ ನಗರಸಭೆ ಸಿಬ್ಬಂದಿಗಳು ದಾಳಿ ಮಾಡಿ ದಂಡ ವಿಧಿಸಿದ ಘಟನೆಯು ನಡೆದಿದೆ.ಒಟ್ಟಾರೆಯಾಗಿ ನಾಲ್ಕು ದಿನಗಳ ಕಠಿಣ ಲಾಕ್‌ಡೌನ್ ಮೊದಲ ದಿನ ಬಿಗಿಯಿಲ್ಲದಾಗಿದ್ದು ಇನ್ನುಳಿದ ಮೂರು ದಿನಗಳಾದರೂ ಜನರು ತಮ್ಮ ಅನಗತ್ಯ ಓಡಾಟವನ್ನು ನಿಲ್ಲಿಸುವರೆ ಕಾದು ನೋಡಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here