ಅಲ್ಲದೇ ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ..!!
ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ ನಮ್ಮ ಬುದ್ಧ.
ಬೌದ್ಧ ಧರ್ಮದ ಸಂಸ್ಥಾಪಕ ಬುದ್ಧ ಕರುಣೆ ಶಾಂತಿಯನ್ನು ಸಾರಿದ ಮಹಾನ್ ವ್ಯಕ್ತಿ. ವೈಶಾಖ ಮಾಸದ ಹುಣ್ಣಿಮೆ ದಿನದಂದು ಬುದ್ಧ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷದ ಬುದ್ಧ ಪೂರ್ಣಿಮೆ ಆಚರಣೆಯನ್ನು ಮೇ 26ರಂದು ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಹಾಗೂ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಗೌತಮ ಬುದ್ಧನು ಈ ದಿನ ಜ್ಞಾನೋದಯವನ್ನು ಪಡೆದನು ಎಂಬುದಾಗಿ ಇತಿಹಾಸದ ಮೂಲಕ ತಿಳಿದುಕೊಳ್ಳಬಹುದು. ಬುದ್ಧನ ಜನನ ಮತ್ತು ಮರಣದ ದಿನದ ಕುರಿತಾಗಿ ಇತಿಹಾಸದಲ್ಲಿ ಗೊಂದಲವಿದೆ. ಹಾಗೂ ಕೆಲವು ನಂಬಿಕೆ ಪ್ರಕಾರ ಇಂದು ಬುದ್ಧನ ಜನ್ಮ ದಿನ ಎಂದೂ ಕರೆಯಲಾಗುತ್ತದೆ. ಈ ಪ್ರಕಾರ ಬುದ್ಧ ಪೂರ್ಣಿಯನ್ನು ಆಚರಿಸುತ್ತಾ ಬಂದಿದ್ದಾರೆ. ಈ ವರ್ಷ ಬುದ್ಧನ 2583ನೇ ಜನ್ಮ ಆಚಣೆಯನ್ನು ಮಾಡಲಾಗುತ್ತಿದೆ.
ಇತಿಹಾಸ: ಗೌತಮ ಬುದ್ಧ ಸಿದ್ದಾರ್ಥ ಗೌತಮನಾಗಿ ಜನಿಸಿದವನು. ಹೆಚ್ಚಿನ ಜನರು ನೇಪಾಳದ ಲುಂಬಿನಿ ಬುದ್ಧನ ಜನ್ಮ ಸ್ಥಳವೆಂದು ನಂಬಿದ್ದಾರೆ. ತನ್ನ ಧರ್ಮ ಪಾಠವನ್ನು ಮೊದಲು ಸಾರಾನಾಥದಲ್ಲಿ ಕಲಿತನು. ನಂತರ ಗೌತಮಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದವನು ಎಂಬುದನ್ನು ಇತಿಹಾಸ ತಿಳಿಸುತ್ತದೆ.
ಮಹತ್ವ: ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ. ಸರಿಯಾದ ತಿಳುವಳಿಕೆ, ಸರಿಯಾದ ಚಿಂತನೆ, ಸರಿಯಾದ ಕ್ರಿಯೆ, ಮಾತು, ಮನಸ್ಸು, ಪ್ರಯತ್ನ, ಏಕಾಗ್ರತೆಯ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಬುದ್ಧ. ಈ ದಿನದಂದು ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡಿ ಬುದ್ಧನನ್ನು ಸ್ಮರಿಸುತ್ತಾರೆ. ಉಪವಾಸ ಆಚರಿಸುತ್ತಾ ಬುದ್ಧನ ಧ್ಯಾನದಲ್ಲಿ ಇಡೀ ದಿನ ಕಳೆಯುತ್ತಾರೆ. ಇದರಿಂದ ಮನಸ್ಸಿಗೆ ಶಾಂತಿ ಜೊತೆಗೆ ಕೆಟ್ಟ ಯೋಚನೆಗಳೆಲ್ಲ ದೂರವಾಗಿ ಮನಸ್ಥಿತಿ ಹತೋಟಿಯಲ್ಲಿರುವಂತೆ ಧ್ಯಾನಸ್ಥರಾಗುತ್ತಾ..!