ಇತರೆ ವೃತ್ತಿ ಪರರಿಗೂ ಪರಿಹಾರ ಧನ ಅರ್ಜಿ ತುಂಬಲು ಸಮಯ ನಿಗದಿಗೆ ಆಗ್ರಹ

0
342

ಕಲಬುರಗಿ : ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪರಿಹಾರ ಧನ ಅರ್ಜಿ ತುಂಬಲು ಕಾಮನ್ ಸರ್ವಿಸ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ವಿವಿಧ ಸಮುದಾಯಗಳ ಕಾರ್ ಡ್ರೈವರ್ಸ್, ಸವಿತಾ ಸಮಾಜ, ಕುಂಬಾರ, ಆಟೋಚಾಲಕರು ಇತರ ವೃತ್ತಿ ಪರರಿಗೆ ಅರ್ಜಿ ತುಂಬಲು ಸಮಯ ನಿಗದಿ ಮಾಡುವಂತೆ ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆ (ರಿ) ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯಾದ್ಯಂತ ಜನಸಾಮಾನ್ಯರ, ಬಡವರ, ದುಡಿಮೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪರಿಹಾರ ಧನ ಅರ್ಜಿ ತುಂಬಲು (CSC) ಕಾಮನ್ ಸರ್ವಿಸ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ವಿವಿಧ ಸಮುದಾಯಗಳ ಕಾರ್ ಡ್ರೈವರ್ಸ್, ಸವಿತಾ ಸಮಾಜ, ಕುಂಬಾರ, ಆಟೋಚಾಲಕರು ಇತರ ವೃತ್ತಿ ಪರರಿಗೆ ಅರ್ಜಿ ತುಂಬಲು ಸಮಯ ಅವಕಾಶ ಮಾಡುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಕಾಂಬಳೆ ಮನವಿ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಒಂದೆಡೆ ರಾಜ್ಯ ಸರ್ಕಾರವು ಆರ್ಥಿಕ ಪ್ಯಾಕೇಜನ್ನು ಘೋಷಿಸುತ್ತದೆ. ಇನ್ನೊಂದೆಡೆ ಫಲಾನುಭವಿ ಕಾರ್ ಡ್ರೈವರ್ಸ್, ಸವಿತಾ ಸಮಾಜ, ಕುಂಬಾರ, ಆಟೋಚಾಲಕರು ಇತರ ವೃತ್ತಿ ಪರರಿಗೆ ಅರ್ಜಿ ತುಂಬಲು ಇಂಟರನೆಟ್ ಸರ್ವಿಸ್ ಸೆಂಟರ್ ಮುಚ್ಚಿರುವುದರಿಂದ ಫಲಾನುಭವಿಗಳು ಪರದಾಡುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಅಂಶವನ್ನು ಮಾನ್ಯರು ಪರಿಗಣಿಸಿ (CSC) ಕಾಮನ್ ಸರ್ವಿಸ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಲಾಕ್ ಡೌನ್ ವೇಳೆಯಲ್ಲಿ ಅವಕಾಶ ನೀಡಬೇಕು, ಸಾರ್ವಜನಿಕ ಹಿತದೃಷ್ಟಿಯಿಂದ ಈ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಬಿ.ಎಂ. ರಾವೂರ, ಆಟೋ ಚಾಲಕರಾದ ಆನಂದ ಕಾಂಬಳೆ, ಬೀದಿ ವ್ಯಾಪಾರಿ ಅಂಬಾದಾಸ ವಿ.ಕೆ., ಸಚೀನ ಬಿ. ರಾಜಾಪೂರ, ನಾಗರಾಜ ಸಪ್ಪಂಡಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here