ಮದುವೆ ಅಂಗವಾಗಿ ನವ ವಧು ವರದಿಂದ ಆಹಾರ ವಿತರಣೆ

0
23

ಬೀದರ್: ಕೋವಿಡ್ ನಲ್ಲಿ ದುಂದು ವೆಚ್ಚ ಮಾಡದೆ ಸರಳವಾಗಿ ಮದುವೆ ಜರುಗಿದೆ ವಧು ವರರಿಂದ ಬಡ ರೋಗಿಗಳಿಗೆ ಆಹಾರ ವಿತರಣೆ ಮಾಡಲಾಯಿತು.

ಲಾಕಡೌನ್ ನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಾಗೂ ಸರಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ನವ ದಂಪತಿಗಳು ಆಹಾರದ ಪೊಟ್ಟಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಸರಳ ಮದುವೆಗೆ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ನವ ದಂಪತಿಗಳು ಮದುವೆ ಮಾಡಿಕೊಳ್ಳದೆ ಸರಳ ರೀತಿಯಾಗಿ ಮದುವೆ ಆಚರಿಸಿಕೊಂಡು ಬಡ ರೋಗಿಗಳಿಗೆ ಅನ್ನ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಮಾದುವೆಯಾಗಿದೆ ಹಾಗೂ ಇಂಥ ಸಮಯದಲ್ಲಿ ಮುಂದೆ ಮದುವೆಯಾಗುವವರು ಕೂಡ ಈ ರೀತಿ ಉತ್ತಮ ಸೇವೆ ಮಾಡಬೇಕು ಎಂದು ಅಬ್ದುಲ್ ಖದೀರ್ ಅವರು ಸೇರಿದಂತೆ ಬಿಜೆಪಿ ಮುಖಂಡ ಬಾಬು ವಾಲಿ ಇನ್ನಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಮದುವೆಯಲ್ಲಿ ಬಡವರಿಗೆ ಆಹಾರ ನೀಡುವ ಸೌಭಾಗ್ಯ ಸಿಕ್ಕಿದೆ ಎಂದು ವಧುವಿನ ತಂದೆ ಬಸ್ವರಾಜ ಮಾಳಗೆ ತಿಳಿಸಿದ್ದಾರೆ ಹಿರಿಯರ ಮಾರ್ಗದರ್ಶನ ಹಾಗೂ ಕೋವಿಡ್ ಮಾರ್ಗಸೂಚಿಯನ್ವಯ ಮದುವೆ ಮಾಡಿಕೊಳ್ಳಲಾಗಿದೆ ದುಂದು ವೆಚ್ಚ ಮಾಡದೆ ಹಸಿದವರಿಗೆ ಅನ್ನ ನೀಡಿರುವುದು ನಮ್ಮ ಸೌಭಾಗ್ಯ ಎಂದು ವರ ಬಸವರಾಜ ವಧು ಲಕ್ಷ್ಮಿ ಮಾಳಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here