ಶಹಾಬಾದ:ಕೆ.ಬಿ.ಶಾಣಪ್ಪ ಅವರು ಸರಳತೆ, ಸಜ್ಜನಿಕೆಗೆ ಅನುಕರಣೀಯ. ನೇರ & ನಿ?ರ ವ್ಯಕ್ತಿತ್ವದ ನಾಯಕರಾಗಿದ್ದರು ಎಂದು ಆದಿ ಜಾಂಭವ ಕಲ್ಯಾಣ ಸಂಘದ ಉಪಾಧ್ಯಕ್ಷ ಶಾಂತಪ್ಪ ಬಂದರವಾಡ ಹೇಳಿದರು.
ಅವರು ಸೋಮವಾರ ಭಂಕೂರ ಗ್ರಾಮದ ಆದಿ ಜಾಂಭವ ಕಲ್ಯಾಣ ಸಂಘದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಲಾದ ಮಾಜಿ ಸಚಿವ ದಿ.ಕೆ.ಬಿ.ಶಾಣಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿ?ತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು.ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆದಿ ಜಾಂಭವ ಕಲ್ಯಾಣ ಸಂಘದ ಮಾಜಿ ಅಧ್ಯಕ್ಷ ಹೆಚ್.ಎಸ್.ಮಟ್ಟಿ ಮಾತನಾಡಿ, ಮಾಜಿ ಸಚಿವ ಕೆ. ಬಿ.ಶಾಣಪ್ಪ ಅವರನ್ನು ಕಳೆದುಕೊಂಡು ನಾವು ಅನಾಥ ಸ್ಥಿತಿಯನ್ನು ಅನುಭವಿಸುತ್ತಿದ್ದೆವೆ. ಕಾರಣ ಈ ಭಾಗದ ಮಾದಿಗ ಸಮಾಜದ ಬಹುದೊಡ್ಡ ನಾಯಕರು ಅವರಾಗಿದ್ದರು.ಅವರ ಹತ್ತಿರ ಯಾವುದೇ ಸಮಸ್ಯೆಗಳನ್ನು ಹೊತ್ತುಕೊಂಡು ಹೋದರೆ ಅದನ್ನು ಬಗೆಹರಿಸುವತನಕ ಬಿಡುತ್ತಿರಲಿಲ್ಲ.ಅಲ್ಲದೇ ನಮ್ಮ ಸಂಘದ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಕಾಲೇಜಿನ ಕಟ್ಟಡ, ಜಾಗದ ಸಮಸ್ಯೆಯನ್ನು ಬಗೆಹರಿಸಿದಲ್ಲದೇ ಆರ್ಥಿಕವಾಗಿ ತಮ್ಮ ಅನುದಾನದಲ್ಲಿ ಸಹಾಯ ಮಾಡಿದ್ದರು. ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿ?ತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದ ಜನರ ದನಿಯಾಗಿದ್ದರು.ಅವರ ನಿಧನದಿಂದ ಒಬ್ಬ ನೇರ ನಿ?ರ ಸ್ವಭಾವದ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ, ದೇವೆಂದ್ರಪ್ಪ ಸಕ್ರಿ, ಮಾಜಿ ಜಂಟಿ ಕಾರ್ಯದರ್ಶಿ ಶಿವರಾಜ ಕೋರೆ, ಕರ್ನಾಟಕ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಪಿ.ಎಸ.ಕೊಕಟನೂರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐ.ಎಮ್.ಸಿಂದಗಿಕರ್, ಉಪನ್ಯಾಸಕರಾದ ವಿವೇಕಾನಂದ ಹಿರೇಮಠ, ಮಲ್ಲಿಕಾರ್ಜುನ ಹಿರೇನೂರ,ಬಾಲರಾಜ ಮಚಾನೂರ, ಮರಲಿಂಗ ಯಾದಗಿರಿ, ಹಣಮಂತ ಕುಂಬಾರ, ಶಶಿಕಾಂತ ಮಡಿವಾಳ,ಕು. ಚೈತ್ರಾ, ರಾಜಶೇಖರ ಗುರುಮಿಠಕಲ್,.ಕೆ.ಕೆ.ರಾಜೆ, ಶರಣಯ್ಯಸ್ವಾಮಿ, ಶರಣಪ್ಪ, ರಮೇಶ ಕಾಂಬಳೆ ಇತರರು ಇದ್ದರು.