ಹುಟ್ಟು ಹಬ್ಬದ ನೆಪದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

0
87

ಶಹಾಬಾದ: ತಾಪಂ ಮಾಜಿ ಸದಸ್ಯ ನಿಂಗಣ್ಣ ಹುಳಗೋಳಕರ್ ಅವರ ಹುಟ್ಟು ಹಬ್ಬದ ನಿಮಿತ್ತ ಸೋಮವಾರ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು, ಕುಡಿಯುವ ನೀರು ಹಾಗೂ ಊಟದ ಪೊಟ್ಟಣವನ್ನು ಅವರ ಸಂಗಡಿಗರು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರಾಜೇಶ ಯನಗುಂಟಿಕರ್ ಕೊರೊನಾ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಒಂದು ಹೊತ್ತು ಊಟಕ್ಕೂ ಕೆಲವು ಜನರು ಸಂಕಷ್ಟ ಪಡುತ್ತಿದ್ದಾರೆ.

Contact Your\'s Advertisement; 9902492681

ಇದರ ಮಧ್ಯೆ ಹುಟ್ಟು ಹಬ್ಬದ ನೆಪದಲ್ಲಿ ಕೇಕ್ ಕತ್ತರಿಸುವುದು, ಕುಣಿದು ಕುಪ್ಪಳಿಸುವುದು ಸಾಮನ್ಯ ಆದರೆ ನಿಂಗಣ್ಣ ಹುಳಗೋಳಕರ್ ಸಂಗಡಿಗರು ಬಡ ರೋಗಿಗಳಿಗೆ ಊಟದ ವ್ಯವಸ್ಥೆ , ಕುಡಿಯುವ ನೀರಿನ ಬಾಟಲ್,ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ಉದಾರ ಮನೋಭಾವ ತೋರಿದ್ದು ಮಾತ್ರ ಒಂದು ಹೊಸ ಹೆಜ್ಜೆ. ಇದೇ ರೀತಿ ತಮ್ಮ ಹುಟ್ಟು ಹಬ್ಬ ಅಲ್ಲದೇ ಮಕ್ಕಳ, ತಂದೆ-ತಾಯಿಯ ಹುಟ್ಟುಹಬ್ಬ, ಯಾವುದೇ ಕಾರ್ಯಕ್ರಮವಿದ್ದರೇ ಕಷ್ಟದಲ್ಲಿರುವವರ ನೆರವಿಗೆ ಬರುವಂತಾದರೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ ಮಾತನಾಡಿ, ಲಾಕ್‌ಡೌನ್ ಆಗಿದ್ದಾಗಿನಿಂದಲೂ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗಿದೆ.ಅಲ್ಲದೇ ಅವರ ಹತ್ತಿರ ಮಾಸ್ಕ್ ಹಾಗೂ ಸ್ಯಾನಿಟೈಜರ್ ಕೂಡ ಕೊಂಡುಕೊಳ್ಳು ಹಿಂದೇಟು ಹಾಕುತ್ತಾರೆ.ಅದನ್ನು ಗಮನಿಸಿ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದ್ದೆವೆ.ಅಲ್ಲದೇ ಹಣ್ಣು-ಹಂಪಲು, ಆಹಾರದ ಪೊಟ್ಟಣಗಳನ್ನು ಹಂಚಿದ್ದೆವೆ. ಕಡುಬಡವರ ಕುಟುಂಬಕ್ಕೆ ಮಾನವೀಯತೆಯಿಂದ ಆಹಾರವನ್ನು ಒದಗಿಸಿದರೆ ಅವರಲ್ಲೇ ನಾವು ದೇವರನ್ನು ಕಾಣಬಹುದು.ಹುಟ್ಟು ಹಬ್ಬ ಈ ರೀತಿ ಆಚರಿಸಿದಕ್ಕೂ ಸಾರ್ಥಕ ಉಂಟಾಗುತ್ತದೆ ಎಂದು ಹೇಳಿದರು.

ಶಿವಕುಮಾರ ತಳವಾರ, ಮರಲಿಂಗ ಗಂಗಭೋ, ನಿಂಗಣ್ಣ, ರವಿ ಸಣತಮ್,ಕಾಶಣ್ಣ ಚನ್ನೂರ್, ಪರಮಾನಂದ ಯಲಗೋಡಕರ್, ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here