ಕೃಷ್ಣಾ ಕಾಡಾ ಉಪ ವಿಭಾಗವನ್ನು ಕೃಷ್ಣಾಪುರದಲ್ಲಿಯೇ ಮುಂದುವರೆಸಿ: ರಾಜಾ ವೆಂಕಟಪ್ಪ ನಾಯಕ

0
24

ಸುರಪುರ: ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿರುವ ಕಾರ್ಯನಿರ್ವಾಹಕ ಅಭಿಯಂತರರ ಹೊಲಗಾಲುವೆ ವಿಭಾಗ ಸಂಖ್ಯೆ:೨ ಕೃಬಾಜನಿ(ನಿ) ಹಸನಾಪುರ ಈ ಕಛೇರಿಗೆ ಒಳಪಡುವ ಉಪವಿಭಾಗ ಸಂಖ್ಯೆ ೭ ಕೃಷ್ಣಾಪುರ ಕಛೇರಿಯನ್ನು ನೂತನ ಹುಣಸಗಿ ತಾಲೂಕು ಕೇಂದ್ರಕ್ಕೆ ಸ್ಥಾಳಾಂತರಿಸದಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.

ಈ ಕುರಿತು ನಿರ್ದೇಶಕರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ದೇಶನಾಲಯ ಓರಿಯನ್ ಮಾಲ್ ಮುಂಬಾಗ ಬೆಂಗಳೂರು ಇವರಿಗೆ ಪತ್ರ ಬರೆದಿರುವ ಮಾಜಿ ಶಾಸಕರು, ಈ ಕುರಿತು ವಿಷಯವನ್ನು ರೈತರು ನನ್ನ ಗಮನಕ್ಕೆ ತಂದಿರುತ್ತಾರೆ. ಸದರಿ ಕಛೇರಿಯ ಸ್ಥಳಾಂತರದಿಂದಾಗಿ ಈ ಭಾಗದ ಅನೇಕೆ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆಗಳ ತೊಂದರೆ, ರಸ್ತೆಕಾಮಗಾರಿಗಳು ಬಸಿಗಾಲುವೆ, ಎಸ್.ಸಿ.ಪಿ/ ಟಿ.ಎಸ್.ಪಿ ಕಾಮಗಾರಿಗಳು ಸೇರಿದಂತೆ ಹಲಾವರು ಕಾಮಗಾರಿ ಕುಂಟಿತಗೊಳ್ಳುತ್ತವೆ. ಹಾಗೂ ರೈತರಿಗೆ ಅತೀ ಸಮೀಪದಲ್ಲೆ ಕಛೇರಿ ಇರುವದರಿಂದ ಅನುಕೂಲವಾಗಿದೆ.

Contact Your\'s Advertisement; 9902492681

ಚಿತ್ತಾಪುರಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ದಿಡೀರ್ ಭೇಟಿ

ಈ ಕಛೇರಿಯ ಸ್ಥಳಾಂತರದಿಂದಾಗಿ ಈ ಭಾಗದ ರೈತರು ಸುಮಾರು ೩೦ ಕಿಮಿ ಸಂಚರಿಸಿ ಕಛೇರಿಗೆ ತೆರಳಲು ಸಮಸ್ಯೆಯಾಗುತ್ತದೆ ಹೀಗಾಗಿ ಹುಣಸಗಿ ತಾಲೂಕು ಕೇಂದ್ರಕ್ಕೆ ಸದರಿ ಕಛೇರಿಯಲ್ಲದೆ ಇನ್ನಿತರ ಕೃಷ್ಣಾ ಕಾಡಾಕ್ಕೆ ಸಂಭಂಧಿಸಿದ ಯಾವುದೆ ಕಛೇರಿಯನ್ನು ಸ್ಥಳಾಂತರಗೊಳಿಸಬಾರದು ಹಾಗೂ ಅವಶ್ಯವಿದ್ದರೆ ನೂತನ ಕಛೇರಿಗಳನ್ನು ಹುಣಸಗಿ ತಾಲೂಕಿಗೆ ಮಂಜೂರುಗೊಳಿಸಿ ಅಲ್ಲಿಯ ರೈತರಿಗೂ ಅನೂಕೂಲ ಕಲ್ಪಿಸಿಕೊಡಬೇಕು.

ಸದರಿ ಕಛೇರಿಯನ್ನು ಕೃಷ್ಣಾಪುರದಲ್ಲೆ ಮುಂದುವರೆಸಿ ಕ್ಷೇತ್ರದ ಎರಡೂ ತಾಲೂಕುಗಳ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ವಿಭಾಗವನ್ನು ಸ್ಥಳಾಂತರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಗಮನಕ್ಕೆ ತರಬಯಸುತ್ತೇನೆಂದು ನಿರ್ದೇಶಕರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ದೇಶನಾಲಯ ಓರಿಯನ್ ಮಾಲ್ ಮುಂಬಾಗ ಬೆಂಗಳೂರು ಅವರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here