ಜೂ.01 ರಿಂದ ದಿವ್ಯಾಂಗರಿಗೆ ಕಡ್ಡಾಯವಾಗಿ ಆನಲೈನ್ ಮೂಲಕ ಪ್ರಮಾಣಪತ್ರ

0
70

ಕಲಬುರಗಿ: ಅಂಗವಿಕಲರ ಅನುಕೂಲಕ್ಕಾಗಿ ಜೂನ್ 1,  2021 ರಿಂದ ಯು.ಡಿ.ಐ.ಡಿ ಪೋರ್ಟಲ್ www.swavlambancard.gov.in ಮೂಲಕ ದಿವ್ಯಾಂಗರಿಗೆ ಆನಲೈನ್ ಮೂಲಕ ಅಂಗವಿಕಲರ ಪ್ರಮಾಣಪತ್ರ ವಿತರಣೆ ಕಡ್ಡಾಯಗೊಳಿಸಿ ಭಾರತ ಸರ್ಕಾರದ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPwD) ಇತ್ತೀಚೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ದಿವ್ಯಾಂಗರ ಪ್ರಯೋಜನಕ್ಕಾಗಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಅಂಗವಿಕಲರ ಪ್ರಮಾಣಪತ್ರ ವಿತರಣೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ.

Contact Your\'s Advertisement; 9902492681

ವಿಶೇಷವಾಗಿ ಕಲ್ಯಾಣ ‌ಕರ್ನಾಟಕ ಗ್ರಾಮೀಣ ಭಾಗದ ಎಲ್ಲಾ ವಿಶೇಷಚೇತನರು ತಪ್ಪದೆ ಆನ್ಲೈನ್ ಮೂಲಕ ಅಂಗವೈಕಲ್ಯ ಪ್ರಮಾಣಪತ್ರಕ್ಕೆ ಕೂಡಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು.

ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಬಹಳ ಅನುಕೂಲವಾಗುತ್ತದೆ ಎಂದು ಅಂಗವಿಕಲರ ಹಕ್ಕುಗಳು ಮತ್ತು ಕರ್ತವ್ಯಗಳ ರಾಷ್ಟ್ರೀಯ ವೇದಿಕೆಯ ರಾಜ್ಯಾದ್ಯಕ್ಷ ಬಸವರಾಜ ಹೆಳವರ ಯಾಳಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here