ಕಲಬುರಗಿ: ಮನೂರ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ

0
168

ಕಲಬುರಗಿ: ಸಂಪೂರ್ಣ ಜಜ್ಜಿ ಹೋಗಿದ್ದ ಕೈಯನ್ನು ಜೋಡಿಸುವ ಮೂಲಕ ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿನ ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪ್ಪತ್ರೆ ವೈದ್ಯರ ತಂಡ ಅಮೋಘ ಸಾಧನೆ ಮಾಡಿದೆ.

ಶಹಾಪುರ ತಾಲೂನ ತಡಿಬಡಿ ಗ್ರಾಮದ ೩೬ ವರ್ಷದ ಯುವಕ ಕಬ್ಬಿನ ರಸ ತೆಗೆಯುವ ಯಂತ್ರದಲ್ಲಿ ಕೈ ಸಿಲುಕಿಸಿಕೊಂಡಿದ್ದ. ಇದರಿಂದ ಕೈ ಸಂಪೂರ್ಣ ಹಾಳಾಗಿತ್ತು. ಕೈ ಕತ್ತರಿಸುವುದೇ ಒಂದೆ ಮಾರ್ಗ ವಾಗಿತ್ತು. ಇಂಥ ಸಂದರ್ಭದಲ್ಲಿ ಮನೂರ ಆಸ್ಪತ್ರೆ ವೈದ್ಯರು ಕೈ ಕತ್ತರಿಸದೇ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

Contact Your\'s Advertisement; 9902492681

ಕೈಯಲ್ಲಿನ ಎಲ್ಲ ಎಲಬು, ನರಗಳು ಕಟ್ ಆಗಿದ್ದವು ಒಂದು ನರ ಮಾತ್ರ ಉಳಿದಿತ್ತು. ದೇಹದ ಬೇರೆ ಅಂಗದಲ್ಲಿನ ನರ ತೆಗೆದು ಕೈಯಲ್ಲಿ ಜೋಡಿಸಲಾಗಿದೆ. ಕತ್ತರಿಸಬೇಕಿದ್ದ ಕೈ ಯನ್ನು ಉಳಿಸುವ ಮೂಲಕ ವೈದ್ಯರ ತಂಡ ಸಾಧನೆ ಮಾಡಿದೆ. ಇಂಥ ಶಸ್ತ್ರ ಚಿಕಿತ್ಸೆ ಜಿಲ್ಲೆಯಲ್ಲಿ ಇದೇ ಮೊದಲನೇಯದ್ದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರೂಕ್ ಮನೂರ ತಿಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡಲು ಸುಮಾರು ಹತ್ತು ಲಕ್ಷ ರೂ. ಖರ್ಚಾಗುತ್ತಿತ್ತು. ರೋಗಿಯು ಬಡವನಾಗಿದ್ದರಿಂದ ಕೇವಲ ಒಂದು ಲಕ್ಷ ಹತ್ತು ಸಾವಿ ರೂ. ಬಿಲ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಹದಿನೈದು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಈಗ ಸಂಪೂರ್ಣ ಗುಣಮುಖನಾಗಿದ್ದಾರೆ. ಯಶಸ್ವಿ ಶಸ್ತ್ರಿ ಚಿಕಿತ್ಸೆ ತಂಡದಲ್ಲಿ ಡಾ. ಫಾರೂಕ್ ಮನೂರ, ಡಾ.ವಿವೇಕ, ಡಾ. ಅನೀಲ್‌ಕುಮಾರ, ಡಾ. ಪವನ್ ಪಾಟೀಲ್, ಡಾ. ಅನೀಲ್ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here