ಮಹಾನಾಯಕ ಧಾರವಾಹಿ ಪ್ರಸಾರ ಸಮಯದಲ್ಲಿ ವಿದ್ಯುತ್ ಕಡಿತ ಮಾಡಬೇಡಿ

0
17

ಸುರಪುರ: ಮಹಾನಾಯಕ ಧಾರವಾಹಿ ಪ್ರಸಾರ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ) ಬಣದ ಮುಖಂಡರು ಒತ್ತಾಯಿಸಿದರು.

ನಗರದ ರಂಗಂಪೇಟೆಯಲ್ಲಿನ ಜೆಸ್ಕಾಂ ಕಚೇರಿ ಮುಂದೆ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಝೀ ಕನ್ನಡ ವಾಹಿನಿಯಲ್ಲಿ ದಿನಾಲು ಸಂಜೆ ೬ ಗಂಟೆಯಿಂದ ೭ ಗಂಟೆಯ ವರೆಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರವಾಹಿ ಪ್ರಸಾರವಾಗುತ್ತದೆ. ಈ ಸಂದರ್ಭದಲ್ಲಿ ಪದೆ ಪದೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನರಿಗೆ ಬೇಸರವಾಗಿದೆ.

Contact Your\'s Advertisement; 9902492681

ಯಾಕೆಂದರೆ ಡಾ: ಬಾಬಾ ಸಾಹೇಬರ ಜೀವನಾದರ್ಶ ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶವಾಗಿದ್ದು ಎಲ್ಲರು ತುಂಬಾ ಆಸಕ್ತಿಯಿಂದ ಧಾರವಾಹಿ ವೀಕ್ಷಿಸಲು ಕಾಯುತ್ತಿರುತ್ತಾರೆ. ಆದರೆ ವಿದ್ಯುತ್ ಸಮಸ್ಯೆಯಿಂದ ಜನರಿಗೆ ತೀವ್ರ ನಿರಾಸೆಯಾಗುತ್ತಿದೆ.ಆದ್ದರಿಂದ ನಿತ್ಯವು ಸಂಜೆ ೬ ರಿಂದ ೭ ಗಂಟೆಯ ವರೆಗೆ ವಿದ್ಯುತ್ ಕಡಿತ ಮಾಡಬೇಡಿ ಎಂದು ಮನವಿ ಮಾಡುತ್ತೇವೆ.ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ನಮ್ಮ ಸಂಘಟನೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಂತರ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀರಭದ್ರಪ್ಪ ದೊಡ್ಮನಿ ತಳವಾರಗೇರಾ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ ರಮೇಶ ಬಡಿಗೇರ ಬಾಚಿಮಟ್ಟಿ ಮರಲಿಂಗ ಹುಣಸಿಹೊಳೆ ಖಾಜಾ ಅಜ್ಮೀರ ಮಾನಪ್ಪ ಶೆಳ್ಳಗಿ ಎಮ್ ಪಟೇಲ್ ಪಾರಪ್ಪ ದೇವತ್ಕಲ್ ಹುಸನಪ್ಪ ತಳವಾರ ಭೀಮರಾಯ ಮಂಗಳೂರ ಮಲ್ಲಪ್ಪ ದೊಡ್ಮನಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here