494 ಜನರಿಗೆ ಕೋವಿಡ್-19 ಲಸಿಕೆ

0
16

ಕಲಬುರಗಿ: ಇಲ್ಲಿಯ ಜೆ ಆರ್ ನಗರದ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಕಾಯಕ ಯೋಗಿ ಸಂಸ್ಥೆ ಆಶ್ರಯದಲ್ಲಿ ಒಂದು ದಿನದ ಬೃಹತ್ ಕೋವಿಡ್-೧೯ ಲಸಿಕೆ ಹಾಕಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಅಫಜಲಪೂರ ಆಹಾರ ನಿರೀಕ್ಷಕ ಚಂದ್ರಕಾಂತ ನೀಲೂರ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರೊನಾ ಮಹಾ ಮಾರಿಯನ್ನು ತೊಲಗಿಸಲು ಸಾರ್ವಜನಿಕರು ತಪ್ಪದೇ ಇಂಥ ಲಸಿಕೆ ಪಡೆದು ಆರೋಗ್ಯದಿಂದ ಬದುಕಬೇಕು. ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಒಟ್ಟು ೪೯೪ ಜನರಿಗೆ ಕೋವಿಡ್-೧೯ ಲಸಿಕೆ ಹಾಕಿ ಜಿಲ್ಲೆಯಲ್ಲಿ ದಾಖಲೆ ಮಾಡಿದಂತ್ತಾಗಿದೆ. ಕಾಯಕ ಯೋಗಿ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣಿ ಅವರ ನೇತೃತ್ವದಲ್ಲಿ ಲಸಿಕೆ ಅಭಿಯಾನ ಜರುಗಿತು. ಉಪಾಧ್ಯಕ್ಷ ಶರಣಬಸಪ್ಪ ಕುಲಕರ್ಣಿ, ಜಿಲ್ಲಾ ಆರ್ ಕೆ ಎಫ್ ಕೆ ಸಂಯೋಜಕ ಶಿವಕುಮಾರ ಕಾಂಬಳೆ. ಹಾಗೂ ಮುಖಂಡರಾದ ನಿಜಲಿಂಗಪ್ಪ ಹೊಸಮನಿ, ನಾಗಣ್ಣ ಸಾರವಾಡ, ಚಂದ್ರಕಾಂತ ಮಾಡ್ಯಾಳ, ಸಿದ್ದರಾಮ ಹವಾಣಿ, ಮೃತ್ಯಂಜಯ ಸ್ವಾಮಿ, ಸುರೇಶ ಕುಲಕರ್ಣಿ, ಮಹಾಂತೇಶ ರೋಜೆ, ರಾಜಕುಮಾರ ಡಿಗ್ಗಿಕರ್, ಡಾ ಪ್ರಭುಲಿಂಗ ಮಾನಕರ್ ಭಾಗವಹಿಸಿದರು. ದೇವಾಸ್ಥಾನದ ಕಮೀಟಿ ಅಧ್ಯಕ್ಷ ಶರಣಪ್ಪ ಶೆಟಗಾರ್ ಅವರು ಅಧ್ಯಕ್ಷತೆ ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here