ಕೋವಿಡ್-19 – ವಿದ್ಯುತ್ ಕೈಮಗ್ಗ ನೇಕಾರರಿಗೆ ಪರಿಹಾರ ಧನ ಘೋಷಣೆ

0
22

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ವಿವಿಧ ಚಟುವಟಿಕೆಗಳು/ ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸಿದ್ದು, ವಿದ್ಯುತ್ ಮಗ್ಗ ಹಾಗೂ ಪೂರಕ ಚಟುವಟಿಕೆಗಳ ಕೈಗಾರಿಕೆಗಳ ಉದ್ಯೋಗದಲ್ಲಿ ತೊಡಗಿರುವ ವಿದ್ಯುತ್ ಮಗ್ಗ ನೇಕಾರರು/ ಕೆಲಸಗಾರರು ಸಂಕಷ್ಟದಲ್ಲಿರುವುದನ್ನು ಮನಗಂಡು ಪವರ್‍ಲೂಮ್ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರಿಗೆ ತಲಾ ರೂ.3000/- ಗಳಂತೆ ಆರ್ಥಿಕ ಪ್ಯಾಕೇಜ್‍ನ್ನು ಘೋಷಿಸಲಾಗಿದೆ.

ಈ ಯೋಜನೆಯಿಂದ ಸುಮಾರು 1.25 ಲಕ್ಷ ಕೆಲಸಗಾರರಿಗೆ ಅನುಕೂಲವಾಗಲಿದೆ. ಸರ್ಕಾರವು ಈಗಾಗಲೇ ಪರಿಹಾರ ನೀಡಲು ಆದೇಶವನ್ನು ಹೊರಡಿಸಿದ್ದು, ಪವರ್‍ಲೂಮ್ ವಲಯದ ಮತ್ತು ಪ್ರಿ- ಲೂಮ್ ವಲಯದ ಕೆಲಸಗಾರರಿಗೆ ತಲಾ ರೂ.3000/- ಗಳಂತೆ ಪರಿಹಾರಧನ ಪ್ರಸ್ತುತ ಫಲಾನುಭವಿಗಳಿಗೆ ತ್ವರಿತವಾಗಿ ನೇರ ನಗದು ವರ್ಗಾವಣೆ  (ಡಿಬಿಟಿ) ಮೂಲಕ ಪರಿಹಾರ ವಿತರಿಸಲಾಗುವುದು. ಉಳಿದ ಫಲಾನುಭವಿಗಳಿಗೆ ಪರಿಹಾರ ವಿತರಿಸಲು ಆನ್‍ಲೈನ್ ಸೇವಾಸಿಂಧು ಮೂಲಕ ಅರ್ಜಿಗಳನ್ನು ಪಡೆದು ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here