ಪ್ಯಾಕೇಜ್ ಕೈ ಸೇರದಿರುವುದಕ್ಕೆ ಶಿಕ್ಷಕರ ವಲಯದಿಂದ ಹೊರಬಿದ್ದ ಅಸಮಾಧಾನ

0
91

ಶಹಾಬಾದ: ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಗೂ ೫ ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ ಹೊರತು ಅದನ್ನು ಕಾರ್ಯರೂಪಕ್ಕೆ ಬಾರದೇ ಇರುವುದರಿಂದ ಖಾಸಗಿ ಶಿಕ್ಷಕರ ವಲಯದಿಂದ ಅಸಮಾಧಾನ ಹೊರ ಬಿದ್ದಿದೆ.

ಕೊರೊನಾ ಸಂಕ?ಕ್ಕೆ ಸಿಲುಕಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಸರ್ಕಾರ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೂ ಸೇರಿಸಿದ್ದಾರೆ. ಈ ಪ್ಯಾಕೇಜನ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ ೧೪ ಕೊನೆಯ ದಿನ ಎಂದು ತಿಳಿಸಲಾಗಿತ್ತು.ಈಗಾಗಲೇ ಉಪನ್ಯಾಸಕ ವರ್ಗ ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ಗಳಲ್ಲಿ ಭರ್ತಿ ಮಾಡಿದ್ದಾರೆ.

Contact Your\'s Advertisement; 9902492681

ಆದರೆ ಪರಿಹಾರ ಮಾತ್ರ ಬಂದಿಲ್ಲ. ಅನುದಾನಿತ ಶಾಲೆ-ಕಾಲೇಜುಗಳಲ್ಲೂ ೩-೫ ಸಾವಿರ ರೂಪಾಯಿ ಮಾತ್ರ ಪಡೆದು ಕೆಲಸ ಮಾಡುವ ಸಾಕ? ಮಂದಿ ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇದ್ದಾರೆ.ಖಾಸಗಿ ಶಾಲೆಯ ಆಡಳಿತ ಮಂಡಳಿ ಕೆಲವು ಸದಸ್ಯರು ಮಾತ್ರ ಅರ್ಧ ಸಂಬಳ ನೀಡಿದರೇ ಕೆಲವು ಆಡಳಿತ ಮಂಡಳಿಯವರು ಸಂಬಳವೂ ನೀಡಿಲ್ಲ.ಇದರಿಂದ ಶಿಕ್ಷಕರ ವರ್ಗ ಸಂಬಳ ಇಲ್ಲದೇ ಸಂಕಷ್ಟದಲ್ಲಿದ್ದಾರೆ.ಅವರ ಕುಟುಂಬದ ನಿರ್ವಹಣೆಯೂ ಕೈತಪ್ಪಿ ಸಾಲಗಾರರಾಗಿ ಮುಖ ತಪ್ಪಿಸಿ ಓಡಾಡುವಂತ ಪರಿಸ್ಥಿತಿ ಬಂದೊದಗಿದೆ.ಕೆಲವು ಶಿಕ್ಷಕರು ಕೆಲಸವಿಲ್ಲದ ಕಾರಣ ಬೀದಿ ಬದಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುತ್ತಿರುವುದು ಉದ್ಯೋಗ ಖಾತ್ರಿಯ ಕೆಲಸಕ್ಕೆ ಹೋಗುವ ಪರಿಸ್ಥಿತಿ ಮೂಡಿ ಬಂದಿದೆ.

ಕೈಯಲ್ಲಿ ಪುಸ್ತಕ, ಬಳಪ ಹಿಡಿಯುವ ವರ್ಗ ಸಲಿಕೆ, ಗುದ್ದಲಿ ಹಿಡಿಯುವಂತ ಕಷ್ಟದ ಪರಿಸ್ಥಿತಿ ಬಂದೊದಗಿ ಬಂದಿದ್ದರೂ ಸರ್ಕಾರ ಮಾತ್ರ ಘೋಷಣೆ ಮಾಡಿ ಕೈತೊಳೆದುಕೊಂಡಿದೆ.ಇಲ್ಲಿಯವರೆಗೆ ಖಾತೆಗೆ ಪ್ಯಾಕೇಜ್ ಹಣ ಹಾಕದಿರುವುದರಿಂದ ಜೀವನ ನಡೆಸುವುದು ತುಂಬಾ ತೊಂದರೆಯಾಗುತ್ತಿದೆ. ಮೊದಲ ಅಲೆಯಲ್ಲೂ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿ ಹೈರಾಣಾಗಿದ್ದರು. ಆಗಲೂ ಸರ್ಕಾರ ಇವರ ನೆರವಿಗೆ ಬರಲಿಲ್ಲ. ಒಂದೂವರೆ ವ?ದಿಂದ ಸಂಬಳ ಇಲ್ಲದೆ ಈ ಕುಟುಂಬಗಳು ವಿಪರೀತ ಸಂಕ?ದಲ್ಲಿವೆ.

ಮಕ್ಕಳಿಗೆ ಪಾಠ ಮಾಡುವ ಈ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದ ಸ್ಥಿತಿಯಲ್ಲಿ ಇದ್ದಾರೆ. ಮನೆಯ ಬಾಡಿಗೆ ಕಟ್ಟಲಾಗುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇವರು ತಮ್ಮ ಕ?ಗಳನ್ನು ಹೇಳಿಕೊಂಡಿದ್ದಾರೆ.

ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಈ ಸಿಬ್ಬಂದಿ ವಿವರಗಳನ್ನು ಪಡೆದು ನೇರವಾಗಿ ಸರ್ಕಾರ ಅವರ ಖಾತೆಗಳಿಗೆ ಪರಿಹಾರದ ಹಣವನ್ನು ವರ್ಗಾಯಿಸಿದರೇ ಅವರ ಬದುಕಿಗೆ ಕಿಂಚಿತ್ತು ಆಸರೆಯಾಗಬಲ್ಲದು.

ಸರ್ಕಾರ ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಈಗಾಗಲೇ ದಾಖಲಾತಿಗಳನ್ನು ಆನ್‌ಲೈನ್‌ಗಳಲ್ಲಿ ಹಾಕಲಾಗಿದೆ.ಆದರೆ ಪರಿಹಾರ ಮಾತ್ರ ಖಾತೆಗೆ ಜಮಾ ಆಗಿಲ್ಲ. ಸಂಬಳ ಇಲ್ಲದೇ ಹೀನಾಯ ಸ್ಥಿತಿಯಲ್ಲಿ ಶಿಕ್ಷಕ ವರ್ಗವಿದೆ.ಅವರ ನೆರವಿಗೆ ಬಂದು ಅವರ ಸಂಕಷ್ಟಕ್ಕೆ ಮುಂದಾಗಬೇಕು.ಸರ್ಕಾರ ತಕ್ಷಣವೇ ಖಾತೆಗೆ ಹಣ ಜಮಾ ಮಾಡಬೇಕು. – ಪೀರಪಾಶಾ ಖಾಸಗಿ ಕಾಲೇಜಿನ ಉಪನ್ಯಾಸಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here