ವಿಧಾನ ಸೌಧದ ಆವರಣದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ: ತಾಲ್ಲೂಕು ಕಸಾಪದಿಂದ ಸಿಎಂಗೆ ಅಭಿನಂದನೆ

0
143

ಕಲಬುರಗಿ: ಜಗಜ್ಯೋತಿ ಅಣ್ಣ ಬಸವಣ್ಣನವರು ಅಂದಿನ ಪ್ರತಿ ಯೊಂದು ಕೆಲಸ ಕಾರ್ಯಗಳಿಗೆ ಸಮಾನ ಭಾವನೆಗಳುಳ್ಳ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ, ಅಲ್ಲಿನವರ ಒಕ್ಕೊರುಲಿನ ವಿಚಾರಗ ಳಿಂದ ಯಾವುದೇ ಕೆಲಸಕ್ಕೆ ವಿಚಾರ ಗಳಿಗೆ ಸೂಕ್ತ ನಿರ್ಧಾರವನ್ನು ಕೈಗೆತ್ತಿ ಕೊಳ್ಳಲಾಗುತಿತ್ತು. ಅಂದಿನ ವಿಚಾರಗಳು ಇಂದು ತಮ್ಮ ಸ್ಮರಣೆಯೊಂದಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ವಿಧಾನ ಸೌಧದ ದ್ವಾರ ಬಾಗಿಲದ ಮುಂದಿನ ಆವರಣದಲ್ಲಿ ಜಗಜ್ಯೋ ತಿ ಅಣ್ಣ ಬಸವಣ್ಣನವರ ಮೂರ್ತಿ ಯನ್ನು ಪ್ರತಿಷ್ಠಾಪಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ
ಪದಾಧೀಕಾರಿಗಳ ಪರವಾಗಿ ಅಭಿನಂನದನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹನ್ನೆರಡನೆಯ ಶತಮಾನವನ್ನು ಶಿವಶರಣರ”ವಚನ ಕ್ರಾಂತಿಯ” ಯುಗವೆಂದು ಇತಿಹಾಸ ಪರಿಗಣಿಸ ಲಾಗಿದೆ. ಅಂದು ಜಗಜ್ಯೋತಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶಿವಶರಣ ಚಿಂತಕರೆಲ್ಲರು ಒಂದೆಡೆ ಸೇರಿ ಇಂದಿನ ಪ್ರಜಾಪ್ರಭುತ್ವದ (ಪಾರ್ಲಿಮೆಂಟ್)ಸಂಸದ ಭವನದಂತೆ ಅಂದು “ಅನುಭವ ಮಂಟಪ”ವ ನ್ನು ಸ್ಥಾಪಿಸಿ. ಮೇಲು, ಕೀಳು,ಜಾತಿ, ಕುಲಭೇದವನ್ನು ದೂರಿಕರಿಸಲು ಅಂತರ್ ಜಾತಿ ವಿವಾಹಗಳನ್ನು ಮಾಡಿಸಿದರು.

Contact Your\'s Advertisement; 9902492681

ಅಷ್ಠೇ ಅಲ್ಲದೆ ಹೆಣ್ಣು ಮಕ್ಕಳ ಸಮಾನತೆಗಾಗಿ ಅಂದು ಮಾಡಿದ ಆ ಮಹಾ ಕ್ರಾಂತಿಯೇ, ಇಂದು ಸರ್ವರಿಗೂ ಸಮಬಾಳು ಸಮಪಾಲು ಎನ್ನುವಂತಾಗಿದೆ. ಅಂತಹ ಮಹಾನ್ ಶರಣರ ಅಂದಿನ ಮೌಲಿಕ ವಿಚಾರಗಳಿಂದ ಜನ ಸಾಮಾನ್ಯರಲ್ಲಿ ಇದ್ದ,ಮೌಢ್ಯಗಳನ್ನು ಹೊರಹಾಕಲು,ವೈಜ್ಞಾನಿಕ ವಿಚಾರಗ ಳಿಂದ,ಸರ್ವರಲ್ಲಿ ಜಾಗೃತಿ ಮೂಡಿಸ ಲು ಶ್ರಮಿಸಿದರು.

ಇಂತಹ ಕೆಲಸಗಳು ಎಂದೋ ಆಗ ಬೇಕಾಗಿದ್ದನ್ನು ಇಂದು ನಡೆಯುತ್ತಿ ರುವುದು ತುಂಬಾ ಸಂತೋಷ ತಂದಿ ರುತ್ತದೆ,ಹಾಗೂವಿಧಾನ ಸೌಧಕ್ಕೆ ಗೌರವ ಹೆಚ್ಚಿಸಿದಂತಾಗಿದೆ. ಈ ಒಂದು ಕಾರ್ಯವನ್ನು ಕೈಗೆತ್ತಿ ಕೊಂಡಿರುವ ಕರ್ನಾಟಕ ಸರಕಾರದ ಮತ್ತು ಇತರೆ ಸರ್ವ ರಾಜಕೀಯ ಮುಖಂಡರಿಗೂ ಹಾಗೂ ಆಡಳಿತದ ಅಧಿಕಾರಿ ವರ್ಗದವರಿಗೂ,ದಾಖಲೆ ಗೊಳಿಸಲು ಈ ನಿರ್ಧಾರಕ್ಕೆ ಕಾರಣೀ ಕರ್ತರಾದ ಸಿಎಂಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here