ಪ್ರೊ, ಎಸ್. ಆರ್ ಗುಂಜಾಳ ಅವರ ಅಭಿನಂದನಾ ಗ್ರಂಥ ಲೋಕಾರ್ಪಣೆ

0
69

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಗ್ರಂಥಾಲಯದ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಸ್ಥಾಪಕರು, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಥಮ ಗ್ರಂಥಪಾಲಕರಾದ ಪ್ರೊ, ಎಸ್. ಆರ್. ಗುಂಜಾಳ ಅವರ 90 ನೇ ಜನ್ಮದಿನ ಅಂಗವಾಗಿ ‘ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಬದಲಾವಣೆ’ ಎಂಬ ಅಭಿನಂದನ ಗ್ರಂಥವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟ ನವದೆಹಲಿ ಮತ್ತು ಸೊಸೈಟಿ ಫಾರ್ ಪ್ರಮೋಷನ್ ಲೈಬ್ರರಿ ಉತ್ತರ ಪ್ರದೇಶ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ವರ್ಚುವಲ್ ಬುಕ್ ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ, ದಯಾನಂದ ಅಗಸರ್ ಅವರು ವರ್ಚುವಲ್ ಮೂಲಕ ಬಿಡುಗಡೆ ಗೊಳಿಸಿದರು.

ಮುಖ್ಯ ಅತಿಥಿಗಳಾಗಿ ನೆದರ್‌ಲ್ಯಾಂಡನ ಕ್ರೀಸ್ತೈನ್ ಮೇಖಂಜೈ, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ, ವಿ. ಜಿ ತಳವಾರ, ಬೆಂಗಳೂರು ವಿಶ್ವವಿದ್ಯಾಲಯದ ಉತ್ತರ ವಲಯದ ಕುಲಪತಿ ಟಿ. ಡಿ. ಕೆಂಪುರಾಜು ಭಾಗವಹಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ವಿ. ಟಿ. ಕಾಂಬಳೆ, ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ವಿಶ್ವವಿದ್ಯಾಲಯದ ಲಕ್ನೋ ಗ್ರಂಥಾಲಯ ವಿಭಾಗದ ಪ್ರಾಧ್ಯಾಪಕ ಪ್ರೊ, ಎಂ. ಪಿ. ಸಿಂಗ್, ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ, ಡಾ. ಅನಿಲ್ ಚಿಕತೆ ಗ್ರಂಥಪಾಲಕರು ಜಲಗಾಂವ್, ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here