ಸುರಪುರ: ಕನ್ನಡ ಅಭೀವೃಧ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನದ ಅಂಗವಾಗಿ ನಗರದಲ್ಲಿ ಪ್ರಾಧಿಕಾರದ ಅನುಷ್ಠಾನ ಸಮಿತಿ ಮುಖಂಡರು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ,ಕನ್ನಡ ಅಭೀವೃಧ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತೆ ಎಲ್ಲಾ ವೈದ್ಯಕೀಯ ಇಲಾಖೆಯ ಮುಖಂಡರಿಗೆ ಮತ್ತು ವೈದ್ಯರಿಗೆ ಮನವಿಯನ್ನು ಮಾಡಿ,ವೈದ್ಯರು ರೋಗಿಗಳಿಗೆ ಕೇವಲ ಚಿಕಿತ್ಸೆ ಮಾತ್ರವಲ್ಲದೆ ಅವರಲ್ಲಿ ಧೈರ್ಯ ತುಂಬುವಂತಹ ಕೆಲಸವನ್ನು ಮಾಡುವ ಮೂಲಕ ರೋಗಿಯನ್ನು ಗುಣಪಡಿಸುತ್ತಾರೆ.ಅದರಂತೆ ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿನ ವೈದ್ಯರು ರೋಗಿಗಳಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಕನ್ನಡದಲ್ಲಿಯೆ ವ್ಯವಹರಿಸಿ ಅವರಲ್ಲಿ ಚಿಕಿತ್ಸೆಯ ಜೊತೆಗೆ ಕನ್ನಡಭಿಮಾನ ಮತ್ತು ಕನ್ನಡತನವನ್ನು ಬೆಳೆಸುವ ಕೆಲಸ ಮಾಡುವಂತೆ ಕನ್ನಡ ಅಭೀವೃಧ್ಧಿ ಪ್ರಾಧಿಕಾರ ವಿನಂತಿಸುತ್ತದೆ ಎಂದರು.
ಮನವಿಯನ್ನು ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಕನ್ನಡ ಅಭೀವೃಧ್ಧಿ ಪ್ರಾಧಿಕಾರದ ಈ ಕಾರ್ಯಕ್ಕೆ ನಮ್ಮ ಬೆಂಬಲವಿದೆ.ಈಗಾಗಲೇ ಎಲ್ಲಾ ವೈದ್ಯರು ರೋಗಿಗಳೊಂದಿಗೆ ಕನ್ನಡದಲ್ಲಿಯೆ ವ್ಯವಹರಿಸುತ್ತಾರೆ,ಆದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕನ್ನಡವನ್ನೇ ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ನಾವುಗಳು ಬೆಂಬಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ಕಲಕೇರಿ ಅಂಬ್ರೇಶ ಕುಂಬಾರ ಪ್ರವೀಣ ಜಕಾತಿ ನೀಲಪ್ಪ ಚೌದರಿ ಸೇರಿದಂತೆ ಅನೇಕರಿದ್ದರು.