ಸುರಪುರ: ನಗರದಲ್ಲಿ ಸುರಪುರ ಪೊಲೀಸ್ ಉಪ ವಿಭಾಗದ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಹಾಗು ಕೊರೊನಾ ಕುರಿತು ಜನ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಾಥಾದ ಕುರಿತು ಸುರಪುರ ಪೊಲೀಸ್ ಉಪಾಧೀಕ್ಷಕ ವೆಂಕಟೇಶ ಹುಗಿಬಂಡಿ ಮಾತನಾಡಿ,ಕೊರೊನಾ ಲಾಕ್‌ಡೌನ್ ತೆರವುಗೊಳಿಸಲಾಗಿದೆ ಎಂದು ಜನರು ಕೋವಿಡ್ ನಿಯಮಗಳನ್ನು ಮರೆತು ಓಡಾಡುತ್ತಿರುವುದು ಕಂಡು ಬರುತ್ತಿದೆ.ಆದರೆ ಸಾರ್ವಜನಿಕರು ಕೊರೊನಾ ನಿಯಮಗಳನ್ನು ಪಾಲಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅನಾವಶ್ಯಕವಾಗಿ ಹೊರಗಡೆ ಓಡಾಡಬೇಡಿ ಎಂದರು.ಅಲ್ಲದೆ ಜನರು ಅನಾವಶ್ಯಕವಾಗಿ ಗುಂಪಾಗಿ ಸೇರಬೇಡಿ ಹಾಗು ಸಾಮಾಜಿಕ ಅಂತರವನ್ನು ಪಾಲಿಸಲು ಸಲಹೆ ನೀಡಿದರು.ಅಲ್ಲದೆ ಸಂಚಾರಿ ನಿಯಮಗಳನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸಬೇಕು ಇದರಿಂದ ಅಪಘಾತಗಳು ತಪ್ಪಲಿವೆ.ಇನ್ನು ವಾಹನ ಚಾಲನಾ ಪರವಾನಿಗೆಯನ್ನು ಪಡೆಯದಿರುವವರು ಪರವಾನಿಗೆ ಪಡೆಯುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕು ಮುನ್ನ ಶ್ರೀ ಪ್ರಭು ಕಾಲೇಜು ಮೈದಾನದಿಂದ ಬಸ್ ನಿಲ್ದಾಣದ ಮೂಲಕ ಮಹಾತ್ಮ ಗಾಂಧಿ ವೃತ್ತದಿಂದ ದರಬಾರ ರಸ್ತೆ,ಸರದಾರ ವಲ್ಲಭಬಾಯಿ ರಸ್ತೆ ಮೂಲಕ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮೂಲಕ ಹನುಮಾನ ಟಾಕೀಸ್ ರಸ್ತೆಯಿಂದ ಮಹಾತ್ಮ ಗಾಂಧಿ ವೃತ್ತದ ವರೆಗೆ ಪೊಲೀಸ್ ಪ್ರಭಾತಪೇರಿ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್,ಶಹಾಪುರ ಠಾಣೆ ಸಿಪಿಐ ಚನ್ನಯ್ಯ ಹಿರೇಮಠ,ಭೀಮರಾಯನಗುಡಿ ಠಾಣೆ ಸಿಪಿಐ ಶ್ರೀನಿವಾಸ ಅಲ್ಲಾಪುರ,ಹುಣಸಗಿ ಠಾಣೆ ಸಿಪಿಐ ದೌಲತ್ ಎನ್.ಕೆ ಹಾಗು ಸುರಪುರ ಪೊಲೀಸ್ ಉಪ ವಿಭಾಗದ ಎಲ್ಲಾ ಠಾಣೆಗಳ ಪಿಎಸ್‌ಐಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.