ಕಲಬುರಗಿ: ಹಾಗರಗುಂಡಗಿ ಗ್ರಾಮದ ಯುವಕ ಯಲ್ಲಪ್ಪ ಪೂಜಾರಿ ಇದೇ ೧೩ ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಕ್ವೇಂಟ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಲಿದ್ದಾರೆ.
ಮೂಲತಃ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದ ಯಲ್ಲಪ್ಪ ಪೂಜಾರಿ ಬಳ್ಳಾರಿ ಅಗ್ನಿ ಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ೨೦೧೯ರಲ್ಲಿ ಧಾರವಾಡದ ಕರುಣೇಶ್ವರ ನಗರದಲ್ಲಿ ಕಟ್ಟಡ ಕುಸಿತವಾದಾಗ ಬಳ್ಳಾರಿ ಅಗ್ನಿ ಶಾಮಕ ಠಾಣೆಯ ರಕ್ಷಣಾ ವಾಹನ ಸಿಬ್ಬಂದಿ ಜೊತೆಗೆ ತೆರಳಿ ಸುಮಾರು ೫೬ ಜನರ ಪ್ರಾಣ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇವರ ಈ ಮಹತ್ತರ ಕಾರ್ಯ ಗುರುತಿಸಿ ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ರವಿಪ್ರಸಾದ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿಫಾರಸ್ಸು ಮಾಡಿದರು.
ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿತರಣೆ ವಿಳಂಬವಾಗಿತ್ತು. ಇಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಯಲ್ಲಪ್ಪ ಪೂಜಾರಿ ಹಾಗರಗುಂಡಗಿರವರು ಸ್ವೀಕರಿಸಲಿದ್ದಾರೆ.