ಶಹಾಬಾದ: ನಗರದ ಬಸವೇಶ್ವರ ವೃತ್ತದ ರಸ್ತೆಯ ತುಂಬೆಲ್ಲಾ ನಿಂತ ಮಳೆ ನೀರು

0
21

ಶಹಾಬಾದ: ನಗರದಲ್ಲಿ ಎರಡು ದಿನಗಳಿಂದ ಸುರಿದ ಮಳೆಯಿಂದ ನಗರದ ಅನೇಕ ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು ಫಜೀತಿಗೊಳಗಾದರು.
ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳ ಇಕ್ಕೆಲದಲ್ಲಿ ಮಳೆನೀರಿನ ಚರಂಡಿ ನಿರ್ಮಿಸಲಾಗಿದೆಯಾದರೂ, ಇದರ ನಿರ್ವಹಣೆ ಇಲ್ಲದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗಿದ್ದು, ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತಿತವಾಗುತ್ತಿದೆ.

ಚರಂಡಿಯಲ್ಲಿ ಮಣ್ಣು ಹಾಗೂ ಕಸ ತುಂಬಿರುವುದರಿಂದ ಅನೇಕ ಕಡೆಗಳಲ್ಲಿ ಚರಂಡಿಗೆ ನೀರು ಹೋಗದೆ, ರಸ್ತೆಯಲ್ಲೇ ಹರಿಯಿತು. ಕೆಲವೆಡೆ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ನೀರು ಚರಂಡಿಯಲ್ಲಿ ಮುಂದಕ್ಕೆ ಹರಿಯಲಾಗದೆ ಅಲ್ಲೇ ನಿಲ್ಲುವಂತಾಯಿತು.
ನಗರದ ಬಸವೇಶ್ವರ ವೃತ್ತದಿಂದ ಶಾಸ್ರ್ತಿ ವೃತ್ತದವರೆಗೆ ಹಾಗೂ ರೇಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣವರೆಗಿನ ಚರಂಡಿ ನಿರರ್ಥಕವಾಗಿದ್ದು, ಮಳೆ ಬಂದಾಗ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುತ್ತದೆ.ಅಲ್ಲದೇ ನೀರು ಹಳ್ಳದಂತೆ ನಿಲ್ಲುವುದರಿಂದ ಡಾಂಬರೀಕರಣ ರಸ್ತೆ ಹಾಳಾಗುತ್ತಿದ್ದರೂ ಯಾರೂ ಗಮನಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾರು ಕ್ಯಾರೇ ಎನ್ನುತ್ತಿಲ್ಲ.

Contact Your\'s Advertisement; 9902492681

ಚರಂಡಿಗಾಗಿ ನಗರಸಭೆ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಆದರೆ ಎಲ್ಲೂ ಸಹ ಇದು ವೈಜ್ಞಾನಿಕವಾಗಿ ನಿರ್ಮಾಣಗೊಂಡಿಲ್ಲ. ಮಳೆ ಬಂದಾಗ ಮಳೆಯ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗುವಂತೆ ಸಂಪರ್ಕ ಜಾಲ ಇಲ್ಲವೇ ಇಲ್ಲ. ರಸ್ತೆಯ ಮೇಲೆ ಬಿದ್ದ ಮಳೆ ನೀರು ತಕ್ಷಣವೇ ಅಕ್ಕಪಕ್ಕದ ಚರಂಡಿಗೆ ಹರಿದುಬರುವಂತೆ ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿಲ್ಲ. ಮನಬಂದಂತೆ ನಿರ್ಮಿಸಿ ಬಿಲ್ ಮಾಡಿಕೊಳ್ಳಲಾಗಿದೆ. ನೆಪಕ್ಕ? ಚರಂಡಿ ಇರುತ್ತದೆ.

ಆದರೆ ಅದೂ ಸಂಪೂರ್ಣವಾಗಿ ನಿರುಪಯೋಗವಾಗಿರುತ್ತದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಳೆ ಬಂದಾಗ ಈ ಚರಂಡಿಗಳಲ್ಲಿ ಮಳೆ ನೀರು ಹರಿದು, ಮುಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದೇ ಇಲ್ಲ. ಹೀಗಾಗಿ ಪ್ರತಿ ಬಾರಿ ಮಳೆ ಬಂದಾಗಲೂ ನೀರು ಮನೆಗಳಿಗೆ ನುಗ್ಗಿ ತೊಂದರೆ ಆಗುತ್ತದೆ. ಮಳೆ ನೀರು ರಸ್ತೆಯಲ್ಲೇ ಹೊಂಡದಂತೆ ನಿಂತು ಜನತೆಗೆ ಸಮಸ್ಯೆ ಆಗುತ್ತದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮಳೆ ಬಂದಾಗಲೊಮ್ಮೆ ನಗರದ ಬಸವೇಶ್ವರ ವೃತ್ತದಿಂದ ಬಾಲಕರ ವಸತಿ ನಿಲಯದ ಮುಂಭಾಗದಲ್ಲಿ ತೊಡೆ ಮಟ್ಟ ನೀರು ಸಂಗ್ರಹವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ.ಅಲ್ಲದೇ ಮಳೆ ನಿಂತ ಎರಡು ಮೂರು ದಿನಗಳವರೆಗೆ ನೀರು ರಸ್ತೆಯ ಮೇಲೆ ನಿಲ್ಲುತ್ತದೆ.ಇದರಿಂದ ರಸ್ತೆಯೂ ಹಾಳಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ- ಜಗನ್ನಾಥ.ಎಸ್.ಹೆಚ್ ಎಐಡಿವಾಯ್‌ಓ ಸಂಘಟನೆ

ಅವೈಜ್ಞಾನಿಕ ಹಾಗೂ ಕಳಪೆ ಚರಂಡಿ ನಿರ್ಮಾಣ ಮಾಡಿದ್ದರಿಂದ ನೀರು ರಸ್ತೆಯ ಮೇಲೆ ನಿಲ್ಲುವಂತಾಗಿದೆ.ಅಧಿಕಾರಿಗಳ ಬೇಜವಾಬ್ದಾರಿತನದಿಂದ ಎಲ್ಲೆಂದರಲ್ಲಿ ರಸ್ತೆಯ ಮೇಲೆ ನೀರು ನಿಲ್ಲುವಂತಾಗಿದೆ.ಅಲ್ಲದೇ ಕಳಪೆ ಮಾಡಿದರೂ ಕೆಳಮಟ್ಟದ ಅಧಿಕಾರಿಗಳಿಂದ ಮೇಲ್ಮಟ್ಟ ಅಧಿಕಾರಿಗಳು ಯಾವುದೇ ಕ್ರಮತೆಗೆದುಕೊಳ್ಳದಿರುವುದು ದುರಾದೃಷ್ಟಕರ-ಲೋಹಿತ್ ಕಟ್ಟಿ ಪ್ರಧಾನ ಕಾರ್ಯದರ್ಶಿ ಜೆಡಿಎಸ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here