ದೇವಸ್ಥಾನದ ಅರ್ಚಕರಿಗೆ ಶಾಸಕ ರಾಜುಗೌಡ ದಿನಸಿ ಕಿಟ್ ವಿತರಣೆ

0
14

ಸುರಪುರ: ನಮ್ಮ ಸರಕಾರ ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿನ ಎಲ್ಲಾ ವರ್ಗಗಳಿಗು ಆದ್ಯತೆ ಮೇರೆಗೆ ಪರಿಹಾರವನ್ನು ನೀಡಿದೆ.ಅದರಂತೆ ರಾಜ್ಯದಲ್ಲಿರುವ ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೂ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ನೆರವಾಗಿದೆ ಎಂದು ಶಾಸಕ ರಾಜುಗೌಡ ಮಾತನಾಡಿದರು.

ನಗರದ ತಹಸೀಲ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ,ಕೋವಿಡ್ ಎಲ್ಲಾ ರಂಗಗಳಿಗೂ ತೀವ್ರ ಸಮಸ್ಯೆಯನ್ನು ತಂದಿದೆ.ಆದರೆ ಯಾವುದೇ ಜನರ ಜೀವನಕ್ಕೆ ತೊಂದರೆಯಾಗದಿರಲಿ ಎಂದು ಸರಕಾರ ಜನರ ನೆರವಿಗೆ ನಿಲ್ಲುವ ಮೂಲಕ ಲಾಕ್‌ಡೌನ್ ಸಂದರ್ಭದಲ್ಲಿ ದುಡಿಯುವ ವರ್ಗಗಳಿಗೆ ಸಮಸ್ಯೆಯಾಗದೆಂತೆ ಕ್ರಮ ಕೈಗೊಳ್ಳುವ ಮೂಲಕ ಕೊರೊನಾ ನಿಯಂತ್ರಿಸುವ ಕೆಲಸ ಮಾಡಿದೆ.ದೇವಸ್ಥಾನಗಳ ಅರ್ಚಕರು ಸರಕಾರ ಯೋಜನೆಯನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ತಾಲೂಕಿನ ಒಟ್ಟು ನೂರು ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೆ ಕಿಟ್ ವಿತರಣೆಯನ್ನು ಸಾಂಕೇತಿಕವಾಗಿ ೫ ಜನರಿಗೆ ವಿತರಣೆ ಮಾಡಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಬಿ.ಎಮ್.ಹಳ್ಳಿಕೊಟೆ ಹಾಗು ಉಪ ತಹಸೀಲ್ದಾರರಾದ ರೇವಪ್ಪ ತೆಗ್ಗಿನಮನಿ,ಸಿರಸ್ಥೆದಾರರಾದ ಸೋಮನಾಥ ನಾಯಕ,ಕೊಂಡಲ ನಾಯಕ,ಶಿವಾನಂದ ಮಠ,ಕಂದಾಯ ನಿರೀಕ್ಷರಾದ ವಿಠ್ಠಲ ಬಂದಾಳ,ಗುರುಬಸಪ್ಪ ಪಾಟೀಲ್,ಕಂಪ್ಯೂಟರ್ ಆಪರೇಟರ್ ಭೀಮು ಯಾದವ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.

೧೦೦ ಕಿಟ್ ಸಿ ಕೆಟಗೆರಿ ದೇವಸ್ಥಾನದ ಅರ್ಚಕರಿಗೆ ಸಾಂಕೇತಿಕ ೫ ಜನರಿಗೆ, ಹಳ್ಳಿಕೊಟೆ ಸೋಮನಾಥ ನಾಯಕ,ರೆವಪ್ಪ ತೆಗ್ಗಿನಮನಿ,ಕೊಂಡಲ ನಾಯಕ,ಶಿವಾನಂದ ಮಠ,ವಿಠ್ಠಲ ಬಂದಾಳ,ಗುರುಬಸಪ್ಪ ಪಾಟೀಲ್,ಕಚೇರಿ ಸಿಬ್ಬಂದಿಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here