ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಗಡಿ ಭಾಗಗಳಲ್ಲಿ ಚಲನಚಿತ್ರ ಮೇಳ ಸಂಚಾಲನ ಸಮಿತಿ ರಚಿಸಿದ್ದು, ಆ ಸಮಿತಿಗೆ ಐವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಕಲಬುರಗಿಯ ಸಾಹಿತಿ, ಕಲಾವಿದರಾದ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಈ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತರಾಜು ಜಿ. ಅವರು ತಿಳಿಸಿದ್ದಾರೆ.
ಈ ಸಂಚಾಲನ ಸಮಿತಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ ಪುರಾಣಿಕ್, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸಿ.ಸೋಮಶೇಖರ್, ಪತ್ರಕರ್ತ, ಕಲಾವಿದ ನಟರಾಜ ಹಂಜಗಿಮಠ ಬೆಂಗಳೂರು, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಕೂಡ ಈ ಸಮಿತಿಗೆ ಸದಸ್ಯರಾಗಿದ್ದು, ಕಲಬುರಗಿಯಿಂದ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಡಿ ಭಾಗದ ಪ್ರದೇಶಗಳಲ್ಲಿ ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಭಾಷೆಯ ಕುರಿತು ಅರಿವು ಮೂಡಿಸಲು ಚಲನಚಿತ್ರ ಮೇಳಗಳನ್ನು ಏರ್ಪಡಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಈ ಸಂಚಾಲನ ಸಮಿತಿ ರಚಿಸಲಾಗಿದೆ ಎಂದು ಅಕಾಡೆಮಿಯ ಪತ್ರದಲ್ಲಿ ತಿಳಿಸಲಾಗಿದೆ.