ಸಾರ್ವಜನಿಕ ತುರ್ತು ಕರೆಗೆ 112 ಹೊಸ ಸಂಖ್ಯೆ

0
73

ಆಳಂದ: ಈ ಮೊದಲು ಸಾರ್ವಜನಿಕರ ತುರ್ತು ಸೇವೆ ಬಳಸಲಾಗುತ್ತಿದ್ದ 100 ಸಂಖ್ಯೆಯ ಬದಲಾಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದ 112 ಸಂಖ್ಯೆಗೆ ಕರೆಮಾಡಬೇಕು ಎಂದು ಪಿಎಸ್‍ಐ ಮಹಾಂತೇಶ ಪಾಟೀಲ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಾರ್ವಜನಿಕರ ತುರ್ತು ಸೇವೆಗೆ ದೇಶದಲ್ಲೆಡೆ 112 ಸಂಖ್ಯೆ ಜಾರಿಗೆ ಬಂದಿದ್ದು, ಈ ಸಂಖ್ಯೆ ವಿಶೇಷವಾಗಿ ಪೊಲೀಸ್, ಆರೋಗ್ಯ, ಅಗ್ನಶ್ಯಾಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆಗಳಿಗೆ ಅಥವಾ ಅವಘಡಗಳು ಅಪಘಾತಗಳು ಸಂಭವಿಸಿದಾಗ ಬಳಸಬೇಕು.

Contact Your\'s Advertisement; 9902492681

ಈ ಯೋಜನೆಗೆ ಕಲಬುರಗಿ ಜಿಲ್ಲೆ ಒಳಗೊಂಡು ಆಳಂದ ಠಾಣೆ ವ್ಯಾಪ್ತಿ ಹಾಗೂ ಇನ್ನೂಳಿದ ಠಾಣೆಯ ವ್ಯಾಪ್ತಿಗೂ ಒಳಕೆಯಾಗಲಿದೆ.ಈ 112 ಸಂಖ್ಯೆಯ ಸೇವೆ ಸಾರ್ವಜನಿಕರಿಂದ ಸಾಕಷ್ಟು ಪ್ರಶಂಸನೆ ವ್ಯಕ್ತವಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಈ ಸಂಖ್ಯೆಯ ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಹಿಂದೆ ಪೊಲೀಸ್, ಅಗ್ನಿಶ್ಯಾಮಕ, ಅಂಬ್ಯೂಲೇನಸ್‍ಗೆ ಪ್ರತ್ಯೇಕ ಸಂಖ್ಯೆಗಳಿದ್ದವು ಆದರಿಗ ಎಲ್ಲವೂ 112 ಸಂಖ್ಯೆಯ ಅಡಿಯಲ್ಲಿ ದಾಖಲಾಗುತ್ತದೆ ಎಂದರು.

ಕರೆ ಹೇಗೆ: ತುರ್ತು ಸೇವೆಗೆ 112 ಸಂಖ್ಯೆಗೆ ಡಿಯಲ್ ಮಾಡಿ ಪ್ಯಾನಿಕ್ ಅಲರ್ಟಾಗಿ ಸಾಮಾನ್ಯ ಪೋನಿನಲ್ಲಿ 5 ಅಥವಾ 9 ದೀರ್ಘ ಪ್ರೇಸ್ ಮಾಡಬಹುದು. ಮೊಬೈಲ್‍ನಲ್ಲಿ ಮಾಡುವ ಜನರು ಪವರ್ ಬಟನ್ ಮೂರು ಬಾರಿ ವೇಗವಾಗಿ ಪ್ರೇಸ್ ಮಾಡಿ ತುರ್ತು ಸಹಾಯ ಪದ್ಧತಿ (ಇಆರ್‍ಎಸ್‍ಎಸ್), ವೆಬ್‍ಸೆಟ್ ಮೂಲಕ ಎಮರ್ಜನ್ಸಿ ರಿಪೋರ್ಟ್ ಸೆಂಟರ್‍ಗೆ ಇಮೇಲ್ ಕಳಿಸಬಹುದು. 112 ಇಂಡಿಯನ್ ಇಂಡಿಯಾ ಮೊಬೈಲ್ ಆ್ಯಫ್ ಮೂಲಕ ವಿನಂತಿ ಕಳುಹಿಸಬಹುದಾಗಿ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here