ಬಕ್ರೀದ್ ಹಬ್ಬ ಆಚರಣೆ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0
6

ಸುರಪುರ: ಇದೇ ೨೧ ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಆಚರಣೆ ಅಂಗವಾಗಿ ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಸಾರ್ವಜನಿಕರ ಶಾಂತಿ ಸಭೆ ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ,ಕೋವಿಡ್ ಕಾರಣದಿಂದ ಅಧ್ದೂರಿ ಆಚರಣೆಗೆ ಮುಂದಾಗದೆ ಸರಳವಾಗಿ ಹಬ್ಬ ಆಚರಿಸುವಂತೆ ತಿಳಿಸಿದರು.ಅಲ್ಲದೆ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ತಿಳಿಸಿದರು.

ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಮಾತನಾಡಿ,ಕೋವಿಡ್ ನಿಯಮದಂತೆ ಬಕ್ರೀದ್ ಆಚರಣೆ ಮಾಡಿ,ಈದ್ಗಾಗದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ.ಅಲ್ಲದೆ ಮಸೀದಿಗಳಲ್ಲಿ ಸಾಮರ್ಥ್ಯದ ಪ್ರತಿಶತ ೫೦ ರಷ್ಟು ಜನರು ಮಾತ್ರ ಸೇರಿ ಪ್ರಾರ್ಥನೆ ಮಾಡಿ, ಹೆಚ್ಚು ಜನರು ಸೇರಿ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ.ಆದ್ದರಿಂದ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ,ಎಲ್ಲರು ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿ ಹಾಗು ಆರು ಅಡಿ ಅಂತರದಲ್ಲಿ ಕುಳಿತು ಪ್ರಾರ್ಥನೆ ಮಾಡುವಂತೆ ತಿಳಿಸಿದರು.ಅಲ್ಲದೆ ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರುಗಳ ಹತ್ಯೆಗೆ ಮುಂದಾಗದಂತೆ ತಿಳಿಸಿದರು.ಹಾಗೇನಾದರು ಜಾನುವಾರುಗಳ ಹತ್ಯೆ ಕಂಡುಬಂದಲ್ಲಿ ಅಂತವರ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಲಾವುದು ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಿಪಿಐ ದೌಲತ್ ಎನ್.ಕೆ,ಪಿಎಸ್‌ಐಗಳಾದ ಚಂದ್ರಶೇಖರ ನಾರಾಯಣಪು,ಕೃಷ್ಣಾ ಸುಬೇದಾರ ಹಾಗು ಮುಖಂಡರಾದ ಖಾಜಾ ಖಲೀಲ ಅಹ್ಮದ ಅರಕೇರಿ,ನಿಜ್ಜು ಉಸ್ತಾದ,ಅಬ್ದುಲ ಗಫೂರ ನಗನೂರಿ,ನಾಸೀರ ಕುಂಡಾಲೆ,ಖಾಲಿದ್ ಅಹ್ಮದ್ ತಾಳಿಕೋಟೆ,ಅಬೀದ್ ಹುಸೇನ ಪಗಡಿ,ಮಹಿಬೂಬ ಸಾಬ್ ಒಂಟಿ,ಅಬ್ದುಲ್ ಮಜೀದ್ ಸಾಬ್,ಮುಫ್ತಿ ಇಕ್ಬಾಲ್ ಒಂಟಿ,ನಿಂಗಣ್ಣ ಬಾಚಿಮಟ್ಟಿ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ, ಖಾಜಾ ಅಜ್ಮೀರ್ ಖುರೇಶಿ,ಅಹ್ಮದ್ ಪಠಾಣ್ ಮಹ್ಮದ ಶರೀಫ,ಮಹಿಬೂಬ ಖುರೇಶಿ,ಮಹ್ದಮ್ ಗೌಸ್,ಖಮರ್ ಸಾಬ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here